ಮನಮಂಥನ
ಮಾಡಿಕೊಂಡು, ಅಥವಾ ಆರ್ಯ ಸಮಾಜಕ್ಕೆ ನಿಮ್ಮ ತಮ್ಮನನ್ನು ಸೇರಿಸಿ, ನಂತರ ಮದುವೆಯಾಗುವುದು ಕ್ರಿಮಿನಲ್ ಮ್ಯಾರೇಜ್ ಎಂದು ನನಗನಿಸುತ್ತೆ ಆದ್ದರಿಂದ ಒಳ್ಳೆಯ ಮನಸ್ಸಿನಿಂದ ಆಶೀರ್ವಾದಮಾಡಿ, ನಮ್ಮ ಪಾಡಿಗೆ ನಾವು ಮದುವೆಯಾಗುತ್ತೇವೆ' ಎಂದು ಆ ತರುಣಿ ವಿನಯವಾಗಿಯಾದರೂ ದೃಢ ನುಡಿಯಿಂದ ಹೇಳಿದ್ದಳು. ಸಿಎಲ್ ಮ್ಯಾರೇಜ್ ಆಯಿತು ; ಇರುದಯಮೇರಿ ಮತ್ತು ಅವಳ ಗಂಡ, ಇವರೇ ಸಾಕ್ಷೀ ಪುಸ್ತಕಕ್ಕೆ ರುಜು ಹಾಕಿದರು. ಹೆಂಡತಿಯೊಡನೆ ತಮ್ಮ, ಇರುದಯ ಮೇರಿಯ ಮನೆಗೆ ಬಂದಾಗಲೆಲ್ಲ, ಮೇರಿಯ ಮಕ್ಕಳು, ಸೋದರತ್ತೆಯ ಜತೆಗೆ ಜೋತುಬೀಳುತ್ತಿದ್ದುವು. ಇದನ್ನು ಕಂಡು ಇರುದಯಮೇರಿಗೆ ತುಂಬಾ ಸಂತಸವಾಗುತ್ತಿತ್ತು. ತಮ್ಮನಿಗನಕ ಅಪಾರ ಹಿಗ್ಗು.
ಸ್ವಲ್ಪ ಕಾಲಾವಕಾಶವು ದೊರಕಿದರೆ, ಪರಿಸ್ಥಿತಿಯೂ ಸಹಾಯಕವಾಗಿದ್ದರೆ; ಮನಸ್ಸು ತನಗೆ ತಾನೇ ಹೊಸಪರಿಸ್ಥಿತಿಗೆ ಸುಲಭವಾಗಿ ಒಗ್ಗಿ ಹೋಗುತ್ತದೆ.
ರಾಮಾಂಜನೀಯ ತೋಳು, ಹಿಂದಿನಂತೆ ಸ್ವಸ್ಥವಾಗುವ ಭರವಸೆಯೇನೂ ಇಲ್ಲ. ಮೊಕದ್ದಮೆಯ ಸಲುವಾಗಿ ಬಂದ ಪೋಲೀಸಿನವರು, ಪರಿಹಾರಧನದ ಮಾತನ್ನೆತ್ತದೆ ಇದ್ದಿದ್ದರೆ ; ಮೊಕದ್ದಮೆಯ ಭೀತಿಯಿಂದಲೇ ಹಲವಾರು ತಜ್ಞ ವೈದ್ಯರು ಮೇಲಿಂದ ಮೇಲೆ ವಿಧ ವಿಧ ಪರೀಕ್ಷೆಗಳನ್ನು ಮಾಡದೆ ಇದ್ದಿದ್ದರೆ ; ಅವನ ಹಿಸ್ಟರಿಕಲ್ ಪ್ರದರ್ಶನದ ಪ್ರವೃತ್ತಿಯು ಬೇರೂರಿ ಬೆಳೆಯುತ್ತಿರಲಿಲ್ಲ. ಆಗ ಅವನು ತೋಳು ಸರಿಯಾಗದೆ ಇದ್ದಿದ್ದರೂ ಯಾವುದಾದರೂ ಕೆಲಸವನ್ನು ಮಾಡಿಕೊಂಡು ಬಾಳುತ್ತಿದ್ದ. ಈಗ ಹಿಸ್ಟಿರಿಕಲ್ ಪ್ರವೃತ್ತಿಯು ಬಲವಾಗಿರುವಾಗ ಈ ಪ್ರದರ್ಶನವೇ ಅವನಿಗೆ ಅತಿಪ್ರಿಯ. ಈ ಪ್ರದರ್ಶನವನ್ನು ಮಾಡುತ್ತಾ, ತೋಳನ್ನು ಮೆರೆಸುತ್ತಾ ಭಿಕ್ಷೆ ಎತ್ತುವುದು ಅಪಮಾನಕರವಲ್ಲ ಎಂದವನಿಗೆ ಅನಿಸುತ್ತದೆ. ಮನಸ್ಸಿನಲ್ಲಿ ದೃಢವಾದ ಈ ಪ್ರವೃತ್ತಿಯು ಬೆಳೆಯದೆ, ಹೋಗಿದ್ದಿದ್ದರೆ, ಅವನ ತೋಳು ಸ್ವಸ್ಥವಾಗುತ್ತಿತ್ತು. ಅಂಚೆ ಪೇದೆಯ ಚಾಕರಿಯನ್ನು ಎಂದಿನಂತೆ ಮಾಡಲೂಬಹುದಿತ್ತು.
ಅಜ್ಜಯ್ಯನ ಅವಾಂತರವನ್ನು ಸರಿಪಡಿಸಲು ಸಾಧ್ಯವಿಲ್ಲ. ಏಕೆಂದರೆ, ಅವನ ಮೆದುಳಿಗೆ ನಿವಾರಿಸಲಾಗದಂತಹ ಸ್ಥಿತಿಯೊದಗಿದೆ. ಮೆದುಳಿನ ಬದಲು Scar ರೂಪುಗೊಂಡಿದೆ. ಆಪರೇಷನ್ ಮಾಡಿ ಈ Scartissueವನ್ನು ತೆಗೆಯಬಹುದು. ಆದರೆ ಅವನ ಬ್ಲಡ್ ಪ್ರೆಷರ್ ಅಧಿಕವಾಗಿತ್ತು. ಅಲ್ಲದೆ ಬೀಡಿ ಸೇದಿ ಸೇದಿ, ಅವನ ಶ್ವಾಸಕೋಶಗಳು ಸಮರ್ಪಕವಾಗಿರಲಿಲ್ಲ. ಅಷ್ಟೇ ಅಲ್ಲದೆ ಅವನೂ ಮತ್ತು ಮನೆಯವರೂ ಶಸ್ತ್ರ ಚಿಕಿತ್ಸೆಗೆ ಒಪ್ಪಲಿಲ್ಲ. ಅಂದಮೇಲೆ ಆತನ ನಡವಳಿಕೆಯಲ್ಲಿ