ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೫೫

ನಾವನಕ ಬಲು ಆದರ ಮಾಡ್ತೀವಿ. ಆದರೂ ನೋಡ್ರಲಾ, ನಮ್ಮ ಹುಡುಗನ ನಸೀಬ್ನ. ಹತ್ತು ಹದಿನೈದು ಸಾವಿರ ವರದಕ್ಷಿಣೆ ಕೊಡೋ ಮಂದಿ ಬಂದಿದ್ದರು. ಒಲ್ಲೆ ಎಂದ ನಮ್ಮ ಹುಡುಗ, ಈ ಬಿಳಿ ಜಿರಳೀನ ಒಪ್ಪಿದ. ಆಯ್ತಪಾ, ನಿಂಗೇ ಛಲೋ ಅನ್ನಿಸಿದರೆ, ನಾವೇನೂ ಅಡ್ಡಿ ಬರೂದಿಲ್ಲ ಎಂದೆವು. ಮದ್ವಿ ಆತು, ಮಹಾರಾಯ್ತಿ ಮನೀಗೆ ಬಂದಳು. ಅಂದಿನಿಂದ ವಾರಕ್ಕೆ ಮೂರು ದಿನ ನೆಟ್ಟಗಿದ್ದರೆ, ನಾಲ್ಕು ದಿನ ಜಡ್ಡು ಬಿದ್ದಿರ್ತಾಳ. ಆದರೂ ನಾವೇನೂ ಆಕೀಗೆ ತ್ರಾಸ ಕೊಡುಲ್ಲ ಎಂದು ಮಾವ ಹೇಳಿದರು, ಒಮ್ಮೆ.

'ಈ ಮಾತನ್ನ ದಿನಕ್ಕೆ ಎಷ್ಟು ಬಾರಿ, ನಿಮ್ಮಗಂಗೆ ಹೇಳ್ತಿರಪಾ' ಎಂದೆ. 'ದಿನಕ್ಕೆ ಎಂಟು ಹತ್ತು ಬಾರಿ ಆದರೂ ಹೇಳ್ತಿದ್ರಪಾ. ಆದರೂ ಅವನ ತಲೀಗೆ ಹತ್ತಬೇಕಲ್ಲ! ಇಲ್ಲವೇ ಇಲ್ಲ. ಮಹಾರಾಣೀನ ಕಟ್ಟಿಕೊಂಡವನ ಹಾಗೆ ಮೆರಿತಾನಲಪಾ' ಎಂದು ಆಪಾದಿಸಿದರು.

ದಿನ ಬೆಳಗಾ, ಈ ರೀತಿ, ಮನೆಗೆ ಬಂದ ಬಡ ಸೊಸೆಯನ್ನು ಹೀಯಾಳಿಸ ಹತ್ತಿದರೆ, ಆಕೆಯ ಮನಸ್ಸು ತಾನೇ ಸಮಾಧಾನದಿಂದಿರಲು ಹೇಗೆ ಸಾಧ್ಯ? ಮಗ ಸೊಸೆಯರ ಬಾಳನ್ನು ಹಾಳುಮಾಡುತ್ತಿದ್ದೀನಿ ಎನ್ನುವ ಕಲ್ಪನೆಯು ಮೊಂಡು ಮಾವನಿಗೆ ಬರಲೊಲ್ಲದು. ಅಹಂಕಾರವು ತುಂಬಿದ ಅವನ ಮನಸ್ಸಿನಲ್ಲಿ, ಮಗನ ಮೇಲೆ ತನಗಿರುವ ವಿಶ್ವಾಸದಿಂದಲೇ ಈ ರೀತಿಯ ಮೆಹನತ್ತು ನಡೆಸುತ್ತಿದ್ದೀನಿ ಎಂಬ ಭ್ರಮೆಯು ತುಂಬಿರುತ್ತದೆ. ಮನೆಯ ವಾತಾವರಣವು ಹೀಗಿದ್ದರೆ, ರೋಗಿಯ ಹಿಸ್ಟಿರಿಯಾವು ಗುಣಮುಖವಾಗುವುದಾದರೂ ಹೇಗೆ? ಅವಳಿಗೆ ಮಕ್ಕಳಾಗಿ, ಮಕ್ಕಳು ಬೆಳೆದು ತಾಯ ಪಕ್ಷವನ್ನು ವಹಿಸಿದಾಗ, ಆಕೆಗೆ ನೆಮ್ಮದಿಯಾಗುತ್ತದೆ. ಆದರೆ ಆ ವೇಳೆಗೆ ಅವಳು ಮುದುಕಿಯಾಗಿರುತ್ತಾಳೆ. ಸಂಸಾರದ ಪ್ರಾಯವೆಲ್ಲಾ ಕಲಗಚ್ಚಾಯಿತು ಎನ್ನುವುದು ತಿಳಿದಿರುತ್ತದೆ. ಅದರ ಸೇಡನ್ನು ಮನೆಗೆ ಬಂದ ಸೊಸೆಯರ ಮೇಲೆ ಆಕೆಯು ತೀರಿಸಹೋಗುತ್ತಾಳೆ. ಇದೊಂದು ವಿಷ ಚಕ್ರ.

ನಮ್ಮ ಸಮಾಜವೂ ಪ್ರಗತಿ ಹೊಂದುತ್ತಿದೆ. ಕಿರಿಯರ ಮೇಲೆ ಹಿರಿಯರಿಗಿದ್ದ ಕಟು ಹತೋಟಿಯು ಬಲು ಪಾಲು ಸಡಿಲಗೊಂಡಿದೆ. ಅಂದರೆ ಮಾನಸಿಕ ಅವ್ಯವಸ್ಥೆಗಳು ಕಡಿಮೆಯಾಗುತ್ತವೆ ಎಂದಲ್ಲ ; ಈಗ ಕಂಡುಬರುವ ಹಿಸ್ಟಿರಿಯಾದ ರೂಪಗಳು ಕಡಿಮೆಯಾಗಿ, ಇತರ ರೂಪಗಳೂ, ಸಮಾಜದ ಅನಿಶ್ಚಿತ ಪರಿಸ್ಥಿತಿಯಿಂದ ಹೊರ ಹೊಮ್ಮಬಹುದು.

ಹಿಸ್ಟಿರಿಯಾದ ಚಿಕಿತ್ಸೆಯಲ್ಲಿ, ಮನೆಯವರ ಹೊಣೆಯೂ, ವೈದ್ಯರ