೧೬೧
ಇಲ್ಲ' ಎಂದವ ಹೇಳಿ ನನ್ನ ಆತಂಕವನ್ನು ಕಡಿಮೆ ಮಾಡಲೆತ್ನಿಸಿದ.
ವರ್ಗವಾಗಿ ಅವ ಹೋದುದರಿಂದ, ವಿಜಯಲಕ್ಷ್ಮಿಯ ಭೂತವನ್ನು ಮಂತ್ರವಾದಿಗಳು ಬಿಡಿಸಿದರೋ ಇಲ್ಲವೋ ನನಗೆ ತಿಳಿಯದು. ಆದರೆ ಒಬ್ಸೆಷನಲ್ ಬೇನೆಗಳು ಬಡಪೆಟ್ಟಿಗೆ ವಾಸಿಯಾಗುವುದಿಲ್ಲ. ಅದರ ಜತೆ ಕೂಡಿಕೊಂಡಿರುವ ಆತಂಕದ ಚಿಹ್ನೆಗಳು; ಮಂಕುಬಡಿದಂತೆ ಆಗುವುದು; ಇತ್ಯಾದಿಗಳನ್ನು ಚಿಕಿತ್ಸೆಯಿಂದ ಶಮನ ಮಾಡಿದರೆ, ಒಬ್ಸೆಷನ್ನಿನ ತೀವ್ರತೆಯು ಕಡಿಮೆಯಾಗುತ್ತದೆ.
ಮುಸುರೆಯ ಪಿಶಾಚಿ
“ಬೆಳಗಿನಿಂದ ಯಾಕೋ ಹೊಟ್ಟೆ ನುಲಿದ ಹಾಗಾಗುತ್ತೆ. ಕೈಕಾಲುಗಳಲ್ಲಿ ಛಳುಕಾಗುತ್ತೆ', ಎಂದು ಅನಸೂಯ ಒಂದು ಬೆಳಿಗ್ಗೆ ಹೇಳಿದಾಗ, ಮನೆಯಲ್ಲಿದ್ದ ಗಂಡ, ಅತ್ತೆ, ನಾದಿನಿ, ಎಲ್ಲರೂ ಸ್ವಲ್ಪ ಗಾಬರಿಗೊಂಡರು. ಚೊಚ್ಚಲ ಬಸಿರು, ಬಯಕೆಯೂ ಹೆಚ್ಚಾಗಿತ್ತು. ಕಂಡೂ ಕೇಳದ ಹೊಸ ಊರಿಗೆ ಚಾಕರಿಯ ಸಲುವಾಗಿ ಬಂದು ನೆಲೆಸಿದ್ದರು, ನೆರೆಹೊರೆಯ ಜನರ ಪರಿಚಯವಿಲ್ಲ. ಆ ಊರಿನ ಭಾಷೆಯೂ ತಿಳಿಯದು. ಅಂದಮೇಲೆ ಜನಸಹಾಯವೂ ಸಿಗುವಂತಿಲ್ಲ. ಈ ಎಲ್ಲ ಕಾರಣಗಳಿಂದ, ದೊಡ್ಡಾಸ್ಪತ್ರೆಗೆ ಸೇರಿಸುವುದು ಕ್ಷೇಮ ಎಂದು ತೀರ್ಮಾನಿಸಿದರು. ಆಸ್ಪತ್ರೆಗೆ ಹೋಗುವುದಕ್ಕೆ ಅನಸೂಯಳಿಗೆ ಅಷ್ಟೇನೂ ಇಷ್ಟವಿಲ್ಲ. ಆದರೆ ಅವಳಿಗೂ ಹೆದರಿಕೆ. ಮನೆಯಲ್ಲಿದ್ದರೆ, ಏನಾದರೂ ಹೆಚ್ಚು ಕಡಿಮೆಯಾದರೆ, ತತ್‌ಕ್ಷಣ ಯಾವ ವೈದ್ಯಕೀಯ ಸಹಾಯವೂ ದೊರಕುವುದು ಕಷ್ಟ, ಆದ್ದರಿಂದ ಆಸ್ಪತ್ರೆಗೆ ಹೋಗಲು ಸಮ್ಮತಿಸಿದಳು. ಆಸ್ಪತ್ರೆಯಲ್ಲಿ ಸೌಕರ್ಯಗಳಿದ್ದುವು. ನುರಿತ ವೈದ್ಯರ ಚಿಕಿತ್ಸೆಯೂ ದೊರಕಿತು. ಆದರೂ ಮೈ ಇಳಿಯಿತು. ಮಿಕ್ಕಂತೆ ದೇಹವು ಆರೋಗ್ಯದಿಂದಿದ್ದರೂ, ಆರನೆಯ ದಿನದ ವೇಳೆಗೆ 'ಯಾಕೋ ಎದೆ ಹೊಡೆದುಕೊಳ್ಳುತ್ತಾ ಇದೆ. ಮೈ ನಡುಗಿದ ಹಾಗೆ ಆಗುತ್ತಿದೆ. ಕೈಕಾಲು ಕುಸಿಯುತ್ತದೆ, ಡಾಕ್ಟರನ್ನು ಕರೆಸಿ' ಎಂದು ಗಾಬರಿಯಿಂದ ಹೇಳಿದಳು. ಬಂದು ಪರೀಕ್ಷಿಸಿದ ಡಾಕ್ಟರು, 'ಸುಮ್ಮ ಸುಮ್ಮನೆ ಗಾಬರಿಯಾಗುತ್ತಿದ್ದೆ. ನಿನ್ನ ಹಾರ್ಟ್ ಲಕ್ಷಣವಾಗಿದೆ. ಗಾಬರಿಯಿಂದಲೇ ಹೀಗಾಗುತ್ತದೆ. ಹೆದರಬೇಡ' ಎಂದು ಧೈರ್ಯ ಹೇಳಿ, ನಿದ್ರೆ ತರಿಸುವ ಔಷಧಿಯನ್ನು ಕೊಟ್ಟು ಹೋದರು.
ಅನುಸೂಯ ಮನೆಗೆ ಬಂದ ಮೇಲೆ ಕೂಡ ಒಮ್ಮೊಮ್ಮೆ ಇದೇ ರೀತಿ ಗಾಬರಿಯಾಗುತ್ತಿದ್ದಳು. ಆದರೆ ಮನೆಯವರು ಧೈರ್ಯ ಹೇಳಿದರೆ ಸಮಾಧಾನಗೊಳ್ಳುತ್ತಿದ್ದಳು. ಈಗಿನ ಕಾಲದ ಸಂಸಾರ. ಮಡಿ ಮೈಲಿಗೆಯ