ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೮

ಮನಮಂಥನ

ಇದೊಂದು ವಿಪರೀತವನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿಯೂ ಸರಿಯಾಗಿದ್ದಾಳೆ. ಒಂದು ದುಂದು ಖರ್ಚು ಮಾಡುಲ್ಲ. ಒಡವೆ ಸೀರೆ ಬೇಕು ಅಂತ ಸತಾಯಿಸುವುದಿಲ್ಲ. ನೀ ಕಂಡ ಹಾಗೇ ಐದು ಮಕ್ಕಳಾಗಿವೆ. ಅಮ್ಮನ ಮೇಲೆ ಮಕ್ಕಳಿಗೆ ಅಪಾರ ಮಮತೆ, ಶಾಲೆಯಿಂದ ಅವು ಬಂದ ಕೂಡಲೇ, ಬಚ್ಚಲ ಮನೆಗೆ ಹೋಗಿ ಬಟ್ಟೆಗಳನ್ನು ಕಳಚಿ, ಸ್ನಾನ ಮಾಡಬೇಕು. ನಂತರ ಬೇರೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಮಳೆಯಿರಲಿ, ಗಾಳಿಯಿರಲಿ ; ತಣ್ಣೀರಿನಲ್ಲಿ ಅವಕ್ಕೆ ಸ್ನಾನ ತಪ್ಪಿದ್ದಲ್ಲ. ಆದರೂ ಅವು ಅಮ್ಮನ ಮೇಲೆ ಸಿಡುಕುವುದಿಲ್ಲ. 'ಅಮ್ಮ “ಮಡಿ” ಮಾಡುವುದರಿಂದಲೇ ನಾವೆಲ್ಲಾ ಬಾಳಿ ಬದುಕುವುದು' ಎಂದು ನಂಬಿದ್ದಾರೆ.

ಮಾಲಕ್ಷಮ್ಮನ ಮಡಿಯು, ಆಕೆಯ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಒಂದು ಪಿಶಾಚಿಯೇ. ಇದೂ ಒಂದು ವಿಧದ 'ಒಬ್ರೆಷನ್' ಈ ರೀತಿ ನಾಲ್ಕಾರು ಸಲ ಸ್ನಾನ ಮಾಡುವುದು ವಿಪರೀತ ವರ್ತನೆ ಎಂದು ಮಾಲಕ್ಷಮ್ಮನಿಗೂ ಗೊತ್ತು. ಆದರೆ ಇಂತಹ 'ಮಡಿ' ಯಿಂದ ದೇವರು ಸುಪ್ರೀತನಾಗುತ್ತಾನೆ ಎಂದೂ ನಂಬಿದ್ದಾಳೆ. ಅವಳು ಹಾಗಿರಲಿ ; ಮನೆಯ ಮಕ್ಕಳೂ ಹೀಗೆಯೇ ನಂಬಿದ್ದಾರೆ. ಈ ಕಾರಣದಿಂದಲೇ ಅಮ್ಮನ ಮೇಲೆ ತುಂಬಾ ಗೌರವವೂ ಇದೆ. ಹೊತ್ತಿಗೆ ಸರಿಯಾಗಿ ಊಟ ಹಾಕಲಿಲ್ಲ ; ಶಾಲೆಯಿಂದ ಬಂದ ಮೇಲೆ ಬಟ್ಟೆ ಕಳಚಿಸಿ, ಸ್ನಾನ ಮಾಡಿಸುತ್ತಾಳೆ. ಎಂದು ಬೇಜಾರು ಪಡುವುದಿಲ್ಲ. ಎಲ್ಲ ಮಡಿವಂತರ ಮನೆಯಲ್ಲೂ ಇದೇ ಸಾಮಾನ್ಯವಾದ ನಡವಳಿಕೆ ಎಂದು ಅವರೆಲ್ಲರೂ ನಂಬಿದ್ದಾರೆ, ಒಂದು ರೀತಿಯಲ್ಲಿ ನೆಮ್ಮದಿಯಿಂದಿದ್ದಾರೆ.

ಹೀಗೆ ಮಾಧೂ ಹೇಳಿದ ಮೇಲೆ 'ಬಸಿರು ಹೆರಿಗೆ ಬಾಣಂತನ ಇವೆಲ್ಲಾ ಹೇಗೆ ಎಂದೆ'. ಬಿಡಪ್ಪಾ ಆ ಕಾವ್ಯವ್ಯಸನಾನ ! ಎಷ್ಟೋ ರಾತ್ರಿ ಸ್ನಾನ ಮಾಡಬೇಕಾಗುತ್ತದೆ. ಹೆತ್ತ ಹತ್ತುದಿನ ಹೇಗೋ ಕಳೆಯುತ್ತಾಳೆ. ಹನ್ನೊಂದನೇ ದಿನದಿಂದಲೇ ತಿರುಗಿ 'ಮಡಿ' ಆಚರಣೆಗೆ ಪ್ರಾರಂಭ, ಬ್ರಾಹ್ಮಣ ಕೆಲಸದವಳನ್ನು ಆ ಕಾಲದಲ್ಲಿ ಗೊತ್ತು ಮಾಡಿಕೊಳ್ಳುತ್ತಾಳೆ. ಅವಳಿಗೂ ನಾಲೈದು ಬಾರಿ ದಿನಾಗಲು ಸ್ನಾನ. ಒಂದಕ್ಕೆರಡು ಸಂಬಳವನ್ನು ಕೊಟ್ಟು 'ಒಂದೆರಡು ತಿಂಗಳು ಎಂತಹ ಕಷ್ಟವಾದರೂ ಇರಮ್ಮ, ಬಿಟ್ಟು ಹೋಗಬೇಡ ಎಂದು ಕೇಳಿಕೊಂಡೆ. ಆಕೆಯೂ ಒಪ್ಪಿಕೊಂಡು, ಎಲ್ಲವನ್ನು ಅನುಭವಿಸುತ್ತಾಳೆ” ಎಂದ ಮಾಧೂ.

ಮಾಲಕ್ಷಮ್ಮನ ಅಡಿಗೆಯು ಬಲು ರುಚಿಯಾಗಿತ್ತು. ಹಜಾರದಲ್ಲೇ ನಾವಿಬ್ಬರೂ ಊಟ ಮಾಡಿದೆವು. ತುಂಬಾ ಆದರದಿಂದ ಬಲವಂತ ಮಾಡಿ ಹಬ್ಬದ ಅಡಿಗೆಯನ್ನು ಬಡಿಸಿದಳು. 'ಹೋಗಿ ಬರೀನಮ್ಮಾ ನಮ್ಮ ಊರಿಗೆ