೧೬೯
ಬಂದಾಗ ಖಂಡಿತ ನಮ್ಮನೆಗೆ ಬರಬೇಕು' ಎಂದೆ. 'ಹೂ' ಅಂದಳು. “ಇವನನ್ನು ಬಿಟ್ಟು ಬರೀನಿ, ಕಣೆ' ಎಂದು ಮಾಧೂ ಹೇಳಿ ನನ್ನೊಡನೆ ಹೊರಟ. 'ಈ ಬಿಸಿಲಿನಲ್ಲಿ ನೀನ್ಯಾಕೆ ಬರಬೇಕೋ' ಎಂದೆ. 'ಹಜಾರವನ್ನು ಸಾರಿಸಿ ಗುಡಿಸಿ ಸ್ವಚ್ಛ ಮಾಡೋದನ್ನು ನೋಡಲಾರೆ ಕಣೋ, ಅದಕ್ಕೆ ಹೊರಹೋಗುತ್ತೇನೆ' ಎಂದ.
ಮಾಲಕ್ಷಮ್ಮನ ಮಡಿಯು ಮಾಧುವನ್ನು ಮಡಿಕೋಲಿನಿಂದ ಹೊಡೆಯುತ್ತಿದೆ ಎಂಬುದು ಸ್ಪಷ್ಟವಾಯಿತು.
ಒಂದು ತರಹ ತಿಕ್ಕಲು
ಲಾಲ್‌ಬಾಗಿನಲ್ಲಿ ಪುಷ್ಪ ಕುಂಡಗಳನ್ನಿರಿಸಿರುವ ಅಂಗಳದಲ್ಲಿ ಹದಿನಾರರ ತರುಣಿಯೊಬ್ಬಳು ನಡೆದಾಡುತ್ತಿದ್ದಳು. ಪುಷ್ಪಗಳನ್ನು ನೋಡುತ್ತಾ ನಡೆಯುವಾಗ, ಪ್ರತಿ ಮೂರನೆಯ ಕುಂಡವನ್ನೂ ಕೈಯಲ್ಲಿದ್ದ ಛತ್ರಿಯ ತುದಿಯಿಂದ ತಪ್ಪದೆ ತಟ್ಟುತ್ತಿದ್ದಳು. ಸುಮಾರು ಹದಿನೈದು ನಿಮಿಷಗಳ ಕಾಲ ನೋಡಿದೆ. ತಪ್ಪದೆ ಈ ನಡವಳಿಕೆಯು, ನಡೆಯಿತು. ಏಕೆ? ಇದೆಂತಹ ತಿಕ್ಕಲು.
ರೈಲ್ವೆ ಸ್ಟೇಷನ್ ಪ್ಲಾಟ್‌ಫಾರಂನಲ್ಲಿ ಕಂಡೆ. ಹನ್ನೆರಡು ಹದಿಮೂರು ವಯಸ್ಸಿನ ಹುಡುಗನೊಬ್ಬ ಅಲ್ಲಿ ನಡೆಯುವಾಗ, ಚಪ್ಪಡಿ ಕಲ್ಲುಗಳು ಕೂಡಿರುವಲ್ಲಿ ಸಿಮೆಂಟ್ ತುಂಬಿರುತ್ತಾರಲ್ಲ ; ಆ ಗೆರೆಗಳ ಮೇಲೆ ಎಚ್ಚರದಿಂದ ನಡೆಯುತ್ತಿದ್ದ, ಸರ್ಕಸ್‌ನವರು ತಂತಿಯ ಮೇಲೆ ನಡೆಯುವಂತೆ. ಇದೆಂತಹ ಆಟ, ಅಥವಾ ಇದೂ ತಿಕ್ಕಲೋ ಏನೋ?
ನಮ್ಮ ಶಾಮಣ್ಣನನಕ ಬೆಂಕಿಪೊಟ್ಟಣದ ಮೇಲೆ ಮೂರು ಸರ್ತಿ ಕುಟ್ಟಿದ ಮೇಲೆ, ಸಿಗರೇಟನ್ನು ಬಾಯಿಗಿಡುತ್ತಾನೆ, ಬೆಂಕಿ ಹಚ್ಚುತ್ತಾನೆ. ಎಳೆಎಳೆಯಾಗಿರುವ ಹೊಗೇಸೊಪ್ಪಿನ ನೂಲುಗಳು ಒಟ್ಟುಗೂಡಲಿ ಎಂದಿರಬೇಕು. ಆದರೆ ಮೂರೇ ಮೂರು ಸರ್ತಿ ತಟ್ಟುತ್ತಾನಲ್ಲ ; ತಪ್ಪದೆ, ಇದೇನು? ಒಂದು ಅಭ್ಯಾಸವೋ ಅಥವಾ ಇದೂ ಒಂದು ತಿಕ್ಕಲೋ.
ಈ ತೆರನ ವಿಚಿತ್ರ ನಡವಳಿಕೆಯು ದೇಹದಿಂದ ನಡೆಯುವ ಕಾರ್ಯಗಳಿಗೆ ಮಾತ್ರ ಮೀಸಲಾಗಿಲ್ಲ. ಮನಸ್ಸಿನ ಕಾರ್ಯಗಳಲ್ಲಿಯೂ ಕಂಡುಬರುತ್ತದೆ.
'ಹತ್ತಿ, ಬೆಣ್ಣೆ, ಬೆಕ್ಕಿನ ಬಾಲ'ದ ಕತೆಯನ್ನು ಅಡುಗೂಲಜ್ಜಿ ಮನೆಯಲ್ಲಿ ಹೇಳಿದಳು. ಮನೆಮಂದಿ ಮಕ್ಕಳೆಲ್ಲರೂ ಕೇಳಿ ನಕ್ಕರು. ಆದರೆ ಮನೆಗೆ ಬಂದಿದ್ದ ಅಳಿಯ ಸಂಜೆ ಕೊಠಡಿಯಲ್ಲಿ ಪೇಪರು ಹಿಡಿದು ಕೂತಿರುವಾಗ 'ಏನನ್ನೋ