ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೦

ಮನಮಂಥನ

ಗುನುಗುತ್ತಿದ್ದ. ಅಜ್ಜಿಯ ಕತೆಯನ್ನು ಕೇಳಿ ಆಗಲೇ ತಾಸಾಗಿತ್ತು. ಗಂಡ ಏನು ಮಾಡ್ತಾ ಇದ್ದಾನೆ ಎಂದು ನೋಡಲು ಸದ್ದು ಮಾಡದೆ ಹೆಂಡತಿಯು ಕೊಠಡಿಗೆ ಬಂದಳು. ಪೇಪರ್ ಹಿಡಿದುಕೊಂಡು ಏನನ್ನೋ ಗುನುಗುತ್ತಿರುವುದು ಕೇಳಿಸಿತು. 'ಏನನ್ನುತ್ತಿದ್ದಾರೆ. ಪೇಪರ್ ಓದುತ್ತಿದ್ದಾರೆಯೇ, ತುಸು ಗಟ್ಟಿಯಾಗಿ' ಎಂದು ಹಿಂದಿನಿಂದ ಹತ್ತಿರ ಹೋದಳು. 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' ಅಂತ ಅಳಿಯಂದಿರು ಗುನುಗುತ್ತಿದ್ದರು. ಇದೇನು ಅಂದರೆ ! ಈ ಜಪವನ್ನು ಮಾಡ್ತಾ ಇದ್ದೀರಿ. ಇದು ಯಾವ ತಿಕ್ಕಲು ನಿಮಗೆ ಹಿಡಿದಿರುವುದು?' ಎಂದು ಕೇಳಿದಳು. 'ದಿಟ ಕಣೆ, ತಿಕ್ಕಲು ಹಿಡಿದ ಹಾಗೇ ಅಜ್ಜಿ ಹೇಳಿದ್ದು ನನಗೆ ಹಿಡಿದಿದೆ. ಮರೆತುಬಿಡೋನ ಅಂದರೆ ಸಾಧ್ಯವಾಗುತ್ತಿಲ್ಲ' ಎಂದು ಅಳಿಯಮೈಯ ಒಪ್ಪಿಕೊಂಡ.

'ಐಲೂರಿನಲ್ಲಿ ಒಬ್ಬ ಲಾಯರಿದ್ದನು' ಎಂಬ ಪಂಚ ಪಂಕ್ತಿಯನ್ನು ಮಾಸ ಪತ್ರಿಕೆಯೊಂದರಲ್ಲಿ ರಾಮು ಓದಿದ. ತೊಗೊಳ್ಳಿ. ಅದಾದ ದಿನಗಳು ಯಾರನ್ನು ಭೇಟಿಯಾದರೂ `ಐಲೂರಿನಲ್ಲಿ' ಎಂದು ನಾಂದಿ ನುಡಿಯುತ್ತಿದ್ದ. 'ಇದೆಂತಹ ತಿಕ್ಕಲು ಅಂತೀನಿ ; ಮೇಲಿಂದ ಮೇಲೆ ಇದೇ ನೆನಪಿಗೆ ಬರುತ್ತೆ. ಯಾರನ್ನು ಕಂಡರೂ ಅವರಿಗೆ ಹೇಳೋಣ ಅಂತ ಯಾವುದೋ ಬಲವಂತ ಮಾಡುತ್ತದೆ. ಎಂದು ಅವನೇ ಗೋಳಾಡಿದ.

ಊಟ ಉಪಚಾರಗಳಲ್ಲಿಯೂ ಈ ತೆರನ ತಿಕ್ಕಲನ್ನು ಕಾಣಬಹುದು. ಗಣೇಶನ ಮಂಗಳಾರತಿಯನ್ನು ಹಾಸ್ಟೆಲಿನಲ್ಲಿ ಆಚರಿಸಿದಾಗ, ಮೂವತ್ತೆರಡನೆಯ ನಂಬರ್ ಕೊಠಡಿಯಲ್ಲಿದ್ದ ಗಣೇಶನಾಯ್ಕ ಊಟ ಮಾಡಿದ ಮೇಲೆ ಮೂವತ್ತೆರಡು ಚಿರೋಟಿಗಳನ್ನು ಕಮಕಿಮಕ್ ಅನ್ನದೆ ತಿಂದ. ಹೆಸರು ಗಣೇಶ ಆದರೂ ಕಡ್ಡಿ ಪೈಲ್ವಾನ್ ಅವ. ಅಷ್ಟೆಲ್ಲಾ ಹಿಡಿಸಲು ಅವನ ಹೊಟ್ಟೆಯಲ್ಲಿ ಸ್ಥಳವೆಲ್ಲಿದೆ ಎಂದು ಕಂಡವರಿಗೆ ಆಶ್ಚರ್ಯ, ಹಸಿವಾಯಿತು ಅಂತ ತಿನ್ನಲಿಲ್ಲ ಅವ. ಸಿಕ್ಕಿದಾಗ ತಿನ್ನಲೇಬೇಕು ಎಂದು ಯಾವುದೋ ಬ್ರಹ್ಮರಾಕ್ಷಸ ಅವನ ಮನಸ್ಸಿನಲ್ಲಿ ಕುಕ್ಕುತ್ತಿತ್ತು. Compulsive eating ಎನ್ನುತ್ತಾರೆ ಈ ನಡವಳಿಕೆಯನ್ನು. ಇದೂ ಒಂದು ತರಹಾ ತಿಕ್ಕಲೇನೇ !

ಮನಸ್ಸು ಸ್ವಸ್ಥವಾಗಿದೆ, ಎಂದು ಖಂಡಿತವಾಗಿ ಹೇಳಬಹುದಾದವರಲ್ಲೂ ಇಂತಹ ಚಿತ್ರವಿಚಿತ್ರ ತಿಕ್ಕಲನ್ನು ಕಾಣುತ್ತೇನೆ. ನೀವೂ ನಾವೂ ಕೂಡ ಇಂತಹ ತಿಕ್ಕಲನ್ನು ಅಲ್ಪಸ್ವಲ್ಪವಾಗಿ ಹೊಂದಿರುತ್ತೇವೆ. ಯೋಚನೆ ಮಾಡಿ ವಿಚಾರವನ್ನು ಹೂಡಿ ಹೀಗೆ ಮಾಡುವುದಿಲ್ಲ. ಯಾವುದೋ ಒಂದು ಭೂತವು, ಮನಸ್ಸಿನ