ಮನಮಂಥನ
ಇನ್ನು ಮುಂದೆ ವಾಸ್ತವಿಕತೆಯ ಅರಿವು ಮಾಯವಾದ ವಿಧವಿಧ ಬೇನೆಗಳನ್ನು ಪರಿಚಯ ಮಾಡಿಕೊಳ್ಳೋಣ. ಹೀಗೆ ಅಭ್ಯಾಸ ಮಾಡುವ ಮೊದಲು, ಮನಃಸ್ವಾಸ್ಥ್ಯವು ಲಕ್ಷಣವಾಗಿರುವ, ಸಾಮಾನ್ಯ ಮನುಷ್ಯರಲ್ಲಿ ಯಾವಾಗಲಾದರೂ ವಾಸ್ತವಿಕತೆಯ ಅರಿವು ಮಾಯವಾಗುತ್ತದೆಯೇ ? ಹಾಗಾಗುವುದಾದರೆ ಎಷ್ಟು ಕಾಲ ಆ ಅವಸ್ಥೆಯು ಇರಲು ಸಾಧ್ಯ. ಇದನ್ನು ತಿಳಿದುಕೊಳ್ಳುವುದು ಅಗತ್ಯ. ಕ್ಷಣಕಾಲ ವಾಸ್ತವಿಕತೆಯ ಅರಿವು ಮರೆತು ಹೋದರೆ, “ಓಹೋ ! ನನಗೂ ಹಿಡಿಯುತ್ತೆ ಇನ್ನು ಮುಂದೆ ಹುಚ್ಚು' ಎನ್ನುವ ಭಯವು ಮೂಡಬಹುದು. ಕೆಲವರಲ್ಲಿ ಮೂಡಿಯೂ ಮೂಡುತ್ತೆ. ಅಂತಹ ಅನಗತ್ಯವಾದ ಭಯವು ನಿವಾರಣೆಯಾಗುತ್ತದೆ, ಅಂತಹವರು ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ.
ಮಕ್ಕಳಲ್ಲಿ
ಎಳೆಯ ಮಕ್ಕಳಲ್ಲಿ ವಾಸ್ತವಿಕತೆಯ ಅರಿವು ಸ್ಪುಟವಾಗಿರುವುದಿಲ್ಲ. ಪರಿಸರದ ಜ್ಞಾನವೂ ಲೋಕಾನುಭವವೂ ಸಾಕಷ್ಟು ಇರಲು ಸಾಧ್ಯವಿಲ್ಲ. ಹಾಗೂ ಅವುಗಳ ಮೆದುಳು ಪ್ರೌಢರಂತೆ ಬೆಳೆದೂ ಇರುವುದಿಲ್ಲ. ಮುಗ್ಧತೆ, ಸರಳತೆ, ಮೋಹಕತೆ ಮಕ್ಕಳಲ್ಲಿ ಹೆಚ್ಚಾಗಿರುವುದು ಈ ಕಾರಣದಿಂದಲೇ, ತುಂಬು ಕುತೂಹಲದ ಆತುರದಿಂದ ತಾನು ಕಂಡು ಕೇಳಿದುದರ ವಿವರಗಳನ್ನು ತಿಳಿದುಕೊಳ್ಳಲು ಕಾತರವಾಗಿರುವ ವಯಸ್ಸು ಮಕ್ಕಳದು.
ಅವುಗಳಾಡುವ ಆಟವನ್ನು ನೋಡಿ. ಗಳುವೊಂದರ ಮೇಲೆ, ಕುದುರೆಯನ್ನೋ ಅಥವಾ ಬೈಸಿಕಲ್ಲನ್ನೋ ದೊಡ್ಡವರು ಹತ್ತುವಂತೆ, ಅದು ಏರುತ್ತದೆ. ಕುದುರೆಯ ಸವಾರಿಯನ್ನು ಅಥವಾ ಬೈಸಿಕಲ್ ಹತ್ತಿದವರನ್ನು ಅದು ಕಂಡಿರುತ್ತದೆ. ದೊಡ್ಡವರನ್ನು ಅನುಕರಣೆ ಮಾಡಿ ತಾನೇ ಚಿಕ್ಕವರು ಕಲಿಯುವುದು! ಮಕ್ಕಳಲ್ಲಿ ಅನುಕರಣೆಯನ್ನು ವಿಶೇಷವಾಗಿ ಕಾಣುತ್ತೇವೆ. ಆಟದಲ್ಲೂ ಅನುಕರಣೆಯೇ ಮುಖ್ಯ ಅಂಶ.ಆಟದಿಂದಲೇ ಪಾಠ ಕಲಿಯುವುದು ಹೆಚ್ಚು ಸುಲಭ, ಹಾಗೂ ಪ್ರಕೃತಿಯ ನಿಯಮ.
ಗಳುವಿನ ಮೇಲೆ ಏರಿಕೊಂಡು, ಹೇಯ್ ಹೇಯ್ ಎಂದು ಕೂಗುತ್ತ ಮಗುವು ಓಡತೊಡಗುತ್ತದೆ. ಚಾಟಿಯನ್ನು ಬಾರಿಸುವಂತೆ, ಕೈಯನ್ನು ಬೀಸುತ್ತದೆ. ಅಥವಾ ಸೈಕಲ್ ಬೆಲ್ಲಿನಂತೆ, ಟ್ರಿನ್ ಟ್ರಿನ್ ಎಂದು ಕೂಗುತ್ತಾ ಓಡುತ್ತದೆ. ಐದು ಹತ್ತು ನಿಮಿಷ ಹೀಗೆ ಆಡುವಾಗ ಆ ಮಗುವಿನ ಮನಸ್ಸಿನಲ್ಲಿ, ನಾನೊಂದು