ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೦

ಮನಮಂಥನ

ಮೂವತ್ತು ಮೂವತ್ತೊಂದರ ಪ್ರಾಯದವ ಹೋಟೆಲೊಂದರಲ್ಲಿ ಬಂದಿಳಿದು ಕೊಂಡಿದ್ದ, ಇಬ್ಬರು ಸ್ನೇಹಿತರೊಂದಿಗೆ 'ಅಯ್ಯಯ್ಯೋ ಹಾವುಗಳು ನನ್ನ ಮೇಲೆ ಹರಿದಾಡುತ್ತಿವೆ. ಕಚ್ಚಿ ಕಟಕಾರಿಸಿ ಬಿಡುತ್ತಿವೆ. ಸತ್ತೆ' ಎಂದು ಮಧ್ಯಾಹ್ನ ಒಂದರ ವೇಳೆಗೆ ಕೆಟ್ಟ ಕೆಟ್ಟದಾಗಿ ಬೊಬ್ಬೆ ಹೊಡೆಯಲು ಶುರುಮಾಡಿದ. ಸ್ನೇಹಿತರಿಬ್ಬರೂ ಆ ಸಮಯದಲ್ಲಿ ಪೇಟೆಗೆ ಹೋಗಿದ್ದರು. ಇವನೊಬ್ಬನೇ ಇದ್ದ. ಇವನ ಬೊಬ್ಬೆಯನ್ನು ಕೇಳಿ, ಹೋಟಲ ಸಿಬ್ಬಂದಿಯವರು ಕೊಠಡಿಗೆ ಓಡಿ ನೋಡಿದರು. ತುಂಬಾ ಆತಂಕವಿದ್ದ ಅವನ ಅವಸ್ಥೆಯನ್ನು ಕಂಡು, ಅವನಾಡುತ್ತಿದ್ದ ಹುಚ್ಚು ಹುಚ್ಚು ಮಾತುಗಳನ್ನು ಕೇಳಿ, ಇವನೆಲ್ಲೋ ಇಷ್ಟರಲ್ಲೇ ಘಟ ಒಪ್ಪಿಸಿಬಿಡುತ್ತಾನೆ. ನಮ್ಮ ಹೋಟಲಿಗೆ ಅಪಖ್ಯಾತಿ ಮತ್ತು ಅಪಕೀರ್ತಿ ಬರುತ್ತದೆ. ಆದಕಾರಣ ಡಾಕ್ಟರನ್ನು ಕರೆಸಿ ಅವರ ಮೂಲಕ ಆಸ್ಪತ್ರೆಗೆ ಸೇರಿಸಿಬಿಡೋಣ. ಅಲ್ಲಿ ನೆಗೆದು ಬಿದ್ದರೆ ಪೀಡೆ ಕಳೆಯಿತು. ಅವನು ಕೊಟ್ಟಿರುವ ಮುಂಗಡ ಹಣದಲ್ಲಿ, ಈ ಖರ್ಚೆಲ್ಲವನ್ನೂ ನಿಭಾಯಿಸಿ, ಲಾಭವನ್ನೂ ಉಳಿಸಿಕೊಳ್ಳಬಹುದು' ಎಂದು ಯೋಚಿಸಿದರು.

ಡಾಕ್ಟರು ಹೋಗಿ ವಿಚಾರಿಸಿದಾಗ ತಿಳಿಯಿತು ; ರೋಗಿಯು ಭಾರಿ ಶ್ರೀಮಂತ ಜಮೀನ್ದಾರನ ದತ್ತು ಮಗ. ತಂದೆಯು ತೀರಿಕೊಂಡ ಕೂಡಲೇ, ಹದಿನಾರರ ಪ್ರಾಯದ ದತ್ತುಪುತ್ರ, ವಿಸ್ಕಿಗೆ ಬಾಯೊಡ್ಡಿದ. ಪುಕಟ್ಟು ವಿಸ್ಕಿ ಎಂದರೆ ಸ್ನೇಹಿತರಿಗೆ ಕಡಿಮೆಯೇ ! ಸ್ನೇಹಿತರ ಸಲಹೆಯ ಮೇಲೆ ಈ ಊರಿಗೆ ವರ್ಷಕ್ಕೆರಡು ಬಾರಿ ವಿಹಾರಕ್ಕೆಂದು ಬರುತ್ತಿದ್ದ. ಈ ಹೋಟಲಿನಲ್ಲಿ ಉಳಿದುಕೊಳ್ಳುತ್ತಿದ್ದ. ಕೇಳಿದಷ್ಟನ್ನು ಮುಂಗಡ ಕೊಡುತ್ತಿದ್ದ. ಹೋಟಲಿಗೆ ಬಂದಿಳಿದುಕೊಂಡ ಮೇಲೆ ಹಗಲು ರಾತ್ರಿ ಎನ್ನದೆ ಕಂಠಪೂರ್ತಿ ಕುಡಿಯುತ್ತಿದ್ದ. ಅಮಲಿನಿಂದಾಗಿ ಬಿದ್ದು ಕೊಳ್ಳುತ್ತಿದ್ದ. ಆದರೆ ಈ ಮಧ್ಯಾಹ್ನ ಸ್ನೇಹಿತರು ಜತೆಗೆ ಇದ್ದಿಲ್ಲ. ಅಮಲು ಪೂರ್ತಿ ಏರುವಷ್ಟು ವಿಸ್ಕಿ ಇರಲಿಲ್ಲ. ಹತ್ತು ಗಂಟೆಗೇ ಬಾಟಲು ಖಾಲಿಯಾಗಿತ್ತು. ಅದನ್ನು ತರಲೆಂದೇ ಸ್ನೇಹಿತರು ಪೇಟೆಯತ್ತ ಹೋಗಿದ್ದರು. ಒಬ್ಬನೇ ಇದ್ದ. ಇವನಿಗೆ, ವಾಸ್ತವಿಕತೆಯ ಅರಿವು ಮಾಯವಾಯಿತು. ಭ್ರಮೆಯು ಆವರಿಸಿತು. ಅದೇ ದಿಟ ಎಂದನ್ನಿಸಿತು. ಮೈಮೇಲೆಲ್ಲಾ ಭ್ರಮಾ ಹಾವುಗಳು ಹರಿದಾಡಿದಂತೆ ಭಾಸವಾಯಿತು. ಸಾವಿನ ಭಯವು ಭಯಂಕರವಾಗಿ ಕಾಣಿಸಿಕೊಂಡಿತು. ಬಾಯಿ ಬಡಿದುಕೊಳ್ಳಲು ಆರಂಭಿಸಿದ. Delirium Trenens ಎನ್ನುವ ಈ ಸ್ಥಿತಿಯಲ್ಲಿ ವಾಸ್ತವಿಕತೆಯ ಅರಿವು ಉಳಿದಿರುವುದಿಲ್ಲ. ಆದರೆ ಕಟ್ಟುನಿಟ್ಟಾದ ಚಿಕಿತ್ಸೆಯನ್ನು ಸ್ವಲ್ಪ ಕಾಲ ನಡೆಸಿ, ದುಶ್ಚಟವನ್ನು ತಪ್ಪಿಸಿದರೆ, ಅವ ಮನಃಸ್ವಾಸ್ಥ್ಯವನ್ನು ಮರಳಿ