ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೧೦
ಮನಮಂಥನ

ಕೊಳ್ಳುತ್ತದೆ. 'ನಾನು' ಎನ್ನುವ ಕಲ್ಪನೆಯು ಆಗ ತುಸು ವಿಶಾಲವಾಗುತ್ತದೆ. ಈ ಪ್ರವೃತ್ತಿಯು ಬೆಳೆಯುತ್ತ ಹೋದರೆ, 'ನಾನು' ಎನ್ನುವ ಕಲ್ಪನೆಯಲ್ಲಿ ವಿಶಾಲ ಬ್ರಹ್ಮಾಂಡವೂ ಅಡಗಲು ಸಾಧ್ಯ. ಭಾವನೆಗಳ ಸಾಮರ್ಥ್ಯ ಅಷ್ಟು ಪ್ರಬಲ ; ಆಧ್ಯಾತ್ಮಿಕ, ಹೆರರ ನೋವಿಗೆ ಕರಗುವಂತಾದರೆ, ಭಾವನೆಗಳು ಔನ್ನತ್ಯದತ್ತ ಏರುತ್ತಿದೆ ಎನ್ನಬಹುದು. ಮನಸ್ಸಿನ ಹೊರ ಮತ್ತು ಒಳಪ್ರಪಂಚಗಳ ಮಧ್ಯೆ ಸುರಕ್ಷಿತವಾದ ಸೇತುವೆಯನ್ನು ಕಟ್ಟಿದರೆ, ಸಾಮರಸ್ಯವನ್ನು ಮನಸ್ಸಿನಿಂದಲೇ ಮನಸ್ಸಿನಲ್ಲಿಯೇ ಏರ್ಪಡಿಸಿದರೆ, ಆಗ ಭಾವನೆಗಳು ಪ್ರಗಲ್ಬವಾಗುತ್ತವೆ. ವಿಶಾಲವಾಗುತ್ತವೆ.

ಸೀತುವಿನ ನತದೃಷ್ಟ ಬಾಳಿನಲ್ಲಿ ಮನಸ್ಸಿನ ಹೊರ ಮತ್ತು ಒಳಪ್ರಪಂಚಗಳ ಮಧ್ಯೆ ಸೇತುವೆಯ ಬದಲು ಬಿರುಕು ಉಂಟಾಯಿತು. ಹೀಗಾಗುವುದಕ್ಕೆ ಅವನ ನತದೃಷ್ಟತನವೂ, ನಿಮ್ಮ ನತದೃಷ್ಟತನದೊಂದಿಗೆ ಕೂಡಿಕೊಂಡಿತು. ಅವನ ಭಾವನೆಗಳು 'ಅವನ' ಸುತ್ತ ಮುತ್ತಿಕೊಂಡವು ಅವ Callous to the external world ಆದ.

೩. ಮಾನಸಿಕ ಚಟಿತನವು ತುಸು ಮೊಂಡಾಗುತ್ತ ಬಂತು. ಯಾವ ನಿರ್ಧಾರವನ್ನು ಮಾಡಬೇಕಾದರೂ ತುಂಬಾ ಅನುಮಾನಪಡುವಂತಾಗಿದ್ದ. ಇವತ್ತು ಕ್ಷೌರ ಮಾಡಿಕೊಳ್ಳಲೋ ಎಂದುಕೊಂಡು, ಸಾಮಾನುಗಳನ್ನು ಅಣಿ ಮಾಡತೊಡಗುತ್ತಿದ್ದ ಮರುಕ್ಷಣದಲ್ಲೇ ಕ್ಷೌರದ ಅಗತ್ಯವು ಇವತ್ತು ಇಲ್ಲ ಎಂದು ತಿರುಗಿ ಅವನ್ನು ಪೆಟ್ಟಿಗೆಗೆ ಸೇರಿಸುತ್ತಿದ್ದ.

೪. ಭ್ರಮೆಯೂ ಒಂದಲ್ಲ ಒಂದು ರೀತಿಯಲ್ಲಿ ಅವನನ್ನು ಕಾಡುತ್ತಿದ್ದಿರಬೇಕು. ವಿವರವಾಗಿ ನಿಶಾಪರೀಕ್ಷೆಯನ್ನು ಮಾಡಿದಾಗ ಯಾರೋ ಬಂದು ನನ್ನ ಕಿವಿಯಲ್ಲಿ ಗುನುಗುತ್ತಲೇ ಇರುತ್ತಾರೆ. ಏನು ಎಂದು ಸ್ಪಷ್ಟವಾಗಿ ಹೇಳುವುದೂ ಇಲ್ಲ. ಎದುರಿಗೆ ಬರುವುದೂ ಇಲ್ಲ' ಎಂದು ಹೇಳಿದ. ಮೂರು ವರ್ಷಗಳಿಂದಲೂ ಈ ಕಾಟವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದ.

ಮೊದಮೊದಲು ಈ ಚಿಹ್ನೆಗಳನ್ನು ಗಮನಿಸಿದ್ದರೆ, ಆಗಲೇ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಬಹುದಾಗಿತ್ತು. ಬೇನೆಯು ಬೇರೂರಿ ಈ ಉಲ್ಬಣ ಸ್ಥಿತಿಗೆ ಏರುತ್ತಿರಲಿಲ್ಲ. ಸುಲಭವಾಗಿ ಗುಣವೂ ಆಗುತ್ತಿತ್ತು.

ತೆರದೆದೆಯಿಂದ ಮನೋವೈದ್ಯರು ರೋಗಿಯ ತಂದೆಗೆ ಎಲ್ಲ ವಿಷಯಗಳನ್ನೂ ಸ್ಪಷ್ಟಪಡಿಸಿದರು. 'ಸಂಸಾರದಲ್ಲಿನ ನಿಮ್ಮ ಮತ್ತು ನಿಮ್ಮಾಕೆಯ ನಡವಳಿಕೆಯನ್ನು ಟೀಕಿಸಿದೆ, ಅಧಿಕಪ್ರಸಂಗಿತನ ಮಾಡಿದೆ' ಎಂದು ಬೈದುಕೊಳ್ಳಬೇಡಿ.