ತಂದೆ, ಕಣ್ಣೆದುರಿಗೆ ಕಂಡ ಮಗನ ಮುಖಚರ್ಯೆಯೇ ಬದಲಾಗಿಬಿಟ್ಟಿತ್ತು.
ಸಿಂಡರಿಸಿಕೊಂಡಂತೆ ಇರುತ್ತಿದ್ದ ಮುಖ ಈಗ ಸರಳವಾಗಿತ್ತು, ಒಂದೆರಡು
ಮಾತುಗಳಲ್ಲಿಯೇ ತಂದೆಯು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟರೂ,
ಸಮಂಜಸವಾಗಿ, ಮುಖವನ್ನು ಕೆಳಗೆ ಮಾಡದೆ, ಸೀತು ಮಾತನಾಡಿದ
ಸಕ್ಯೂಬಾಯಿಯ ಕೆಟಟೋನಿಯ
'ಗಂಟಲು ನೋವು ಅಂತ ಹೇಳಿದಳು, ಡಾಕ್ಟರೇ, ಊರಿನಲ್ಲಿರುವ ಡಾಕ್ಟರ ಹತ್ತಿರಕ್ಕೆ ಕರೆದುಕೊಂಡು ಹೋದೆ. ದವಡೆಯ ಮೂಲೆಯಲ್ಲಿ ಹದ್ದಗಳಲೆ ಉಬ್ಬಿಕೊಂಡಿದೆ. ಸೀತದ ಗೆಡ್ಡೆ ಇರಬೇಕು. ಎಂದು ಹೇಳಿ ಎರಡು ದಿನ ಇನ್ಜಕ್ಷನ್ ಕೊಟ್ಟರು. ಸ್ವಲ್ಪ ವಾಸಿಯಾದ್ದಾಗೆ ಆಯಿತು. ಆದರೆ ಮೊದಲಿನಂತೆ ಹುಷಾರಾಗಲಿಲ್ಲ. ನಾಳೆಯ ಬೆಳಗ್ಗೆ ಊರಿನಿಂದ ಕರೆದುಕೊಂಡ ಬರ್ತ್ತೀನಿ, ಗಂಟಲು ಸರಿಯಾಗಿದೆಯೇ ಅಂತ ಪರೀಕ್ಷೆ ಮಾಡಿ ಹೇಳಿ' ಎಂದು ಸಾವಂದಪ್ಪ ಹೇಳಿದ.
'ರೋಗಿಯನ್ನು ಪರೀಕ್ಷೆ ಮಾಡುವುದಕ್ಕೆ ಇಷ್ಟೆಲ್ಲಾ ಹೇಳಬೇಕೇ ! ಸಾವಂದಪ್ಪ, ಯಾವಾಗ ಬೇಕಾದರೂ ಕರೆದುಕೊಂಡು ಬಾ. ಆದರೆ ಅದಕ್ಕೆ ಮೊದಲು, ನಿಮ್ಮೂರ ಡಾಕ್ಟರ ಕೈಲಿ, ಇನ್ನೊಮ್ಮೆ ಪರೀಕ್ಷೆಮಾಡಿಸು. ಡಿಫ್ತೀರಿಯಾ ತರಹ ಏನಾದರೂ ಕೆಟ್ಟ ಬೇನೆ ಬಂದಿದ್ದರೆ, ಬಸ್ಸಿನಲ್ಲಿ ಊರಿಂದ ಊರಿಗೆ ಪ್ರಯಾಣ ಮಾಡಿಸೋದು ತುಂಬಾ ತಪ್ಪು. ಅವರ ಅನುಮತಿ ಪಡೆದು ಕರೆದುಕೊಂಡುಬಾ' ಎಂದೆ.
ನಾಲ್ಕು ದಿನಗಳಾದ ಮೇಲೆ ಮಗಳನ್ನು ಕರೆದುಕೊಂಡು ಸಾವಂದಪ್ಪ ಒಂದು ಬೆಳಿಗ್ಗೆ ಬಂದ. 'ಇಲ್ಲಿ ಕೂತುಕೊ ಸಕ್ಕೂ' ಎಂದು ಹೇಳಿ ಮಗಳನ್ನು ಎದುರು ಕುರ್ಚಿಯಲ್ಲಿ ಕೂರಿಸಿದ.
ಹದಿನೈದು ಹದಿನಾರು ವರ್ಷಗಳ ಹುಡುಗಿ, ದೃಢಕಾಯವಿಲ್ಲದಿದ್ದರೂ ಸಣಕಲ ಕಡ್ಡಿ ಏನಲ್ಲ. ತಲೆಯನ್ನು ತಗ್ಗಿಸಿಕೊಂಡು ಕೂತಿದ್ದಳು. 'ಶಾಲೆಗೆ ಹೋಗ್ತಾ ಇದೀಯಮ್ಮಾ, ಸಕ್ಕೂ' ಎಂದು ಕೇಳಿದೆ. ಮೂರನೇ ಸ್ಟಾಂಡರ್‌ನಲ್ಲಿ ಓದುತ್ತಾ ಇದ್ದಾಳೆ ಎಂದು ಸಾವಂದಪ್ಪ ಉತ್ತರಿಸಿದ. ತಲೆಯೆತ್ತಿ ಸಕ್ಕು ಅರೆಕ್ಷಣ ನನ್ನ ಮುಖವನ್ನು ನೋಡಿದಳು. ಉತ್ತರವನ್ನು ತಂದೆ ಕೊಟ್ಟ ಮೇಲೆ, ತಲೆ ತಗ್ಗಿಸಿದಳು. ತಂದೆಯೆದುರಿಗೆ ಯಾವ ಪ್ರಶ್ನೆಯನ್ನು ಮಗಳಿಗೆ ಹಾಕಿದರೂ, ತಂದೆಯೇ ಉತ್ತರವನ್ನು ಕೊಡುತ್ತಾನೆ, ಮಗಳಿಗೆ ಅವಕಾಶವಿರುವುದಿಲ್ಲ ಎನ್ನುವುದು ತಿಳಿಯಿತು. ಆ ಮೇಲೆ ಪ್ರಶ್ನೆಗಳನ್ನು ಕೇಳಿದರಾಯಿತು. ದೇಹಾರೋಗ್ಯವನ್ನು ಸ್ಥೂಲವಾಗಿ