ಪರೀಕ್ಷಿಸೋಣ ಎಂದುಕೊಂಡು, 'ನಾಲಿಗೆ ತೋರಿಸು, ಸಕ್ಕೂ' ಎಂದೆ. 'ಗಂಟಲನ್ನೂ ಹಾಗೆಯೇ ತೋರಿಸಮ್ಮಾ' ಎಂದ, ಸಾವಂದಪ್ಪ.
ತಲೆ ಎತ್ತಿದಳು ಸಕ್ಕೂಬಾಯಿ, ಬಾಯಿನಿಂದ ಹೊರಕ್ಕೆ ನಾಲಿಗೆಯನ್ನು ಸ್ವಲ್ಪ ಚಾಚಿದಳು. ನಾಲಿಗೆಯ ತುದಿ ಹೊರಗೆ ಇತ್ತು. ಬಾಯಿಯನ್ನು ಮುಚ್ಚಿಕೊಂಡಳು. ಇಷ್ಟು ಮಾಡುವುದಕ್ಕೆ ಕತ್ತನ್ನು ನನ್ನ ಕಡೆಗೆ ಚಾಚಿದ್ದಳು. ಅದೇ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳು ಇದ್ದಳು. ಆಗ ಸಕ್ಕೂವಿನ ಮುಖ, ಮುಖವಾಡವನ್ನು ಧರಿಸಿದ ಮುಖದಂತಿತ್ತು. ಜೀವಕಳೆಯು ಗೆಲುವಾಗಿರಲಿಲ್ಲ. 'ಗಂಟಲು ತೋರಿಸು ಸಕ್ಕು' ಎಂದ ಸಾವಂದಪ್ಪ.
ನೋಡುತ್ತಲೇ ಇದೀನಿ, ನನ್ನ ಕಡೆಗೆ ಚಾಚಿದ್ದ ಕತ್ತನ್ನು ಬಲಗಡೆಗೆ ತಿರುಗಿಸಿದಳು. ನಿಲುವು ಗೌರಿ ಬೊಂಬೆಗಳು ತಲೆ ತಿರುಗಿಸಿದಂತೆ, ಸಕ್ಕು, ತಲೆಯನ್ನು ತಿರುಗಿಸಿದಳು. ಅಷ್ಟು ಸ್ಪಷ್ಟವಾಗಿ ಯಾಂತ್ರಿಕವಾಗಿತ್ತು. ಹಾಗೆ ತಿರುಗಿಸಿದಾಗ, ಕೆಳದವಡೆಯನ್ನೂ ಮುಂದಕ್ಕೆ ಝಾಡಿಸಿದಳು. ಮೇಲು ರೆಪ್ಪೆಗಳು ಅರ್ಧ ಕಣ್ಣನ್ನು ಮುಚ್ಚಿದ್ದುವು. ಅದೇ ಭಂಗಿಯಲ್ಲಿ ಮೂರು ನಾಲ್ಕು ನಿಮಿಷ ಇದ್ದಳು.
'ಗಂಟಲು ತೋರಿಸಮ್ಮಾ ಸಕ್ಕು' ಎಂದು ಸಾವಂದಪ್ಪ ತಿರುಗಿ ಹೇಳಿದ. ನನ್ನ ಕಡೆಗೆ ಮುಖವನ್ನು ತಿರುಗಿಸಿ ಬಾಯಿ ತೆರೆದಳು. ಟಾರ್ಚ್ ಬೆಳಕನ್ನು ಗಂಟಲೊಳಕ್ಕೆ ಹರಿಸಿ ಪರೀಕ್ಷೆಯನ್ನು ಮಾಡಿದೆ. ಸಾವಂದಪ್ಪನ ಮನಸ್ಸಿಗಾದರೂ, ಡಾಕ್ಟರು ತುಂಬಾ ಶ್ರದ್ಧೆಯಿಂದ ಮಾಡಿದರು, ಎನ್ನುವ ಸಮಾಧಾನವಾಗಲಿ ಅಂತ.
ಏಕೆಂದರೆ, ಸಕ್ಕೂವಿನ ಮುಖಭಂಗಿಗಳನ್ನು ಕಂಡಾಗ, ಅವಳ ಚಾಕ
ಚಕ್ಯತೆಯನ್ನೂ ವಿದ್ಯಾಭ್ಯಾಸದ ಮಟ್ಟವನ್ನೂ ತಿಳಿದಾಗ ; ಈಕೆಗೆ ಕೆಟಟೋನಿಕ್
ಸ್ಕೀಜೋಫ್ರೆನಿಯಾ ಇರಬೇಕು ಎನ್ನುವುದು ಸುಮಾರು ಸ್ಪಷ್ಟವಾಗಿತ್ತು.
ಅನಂತರ ರೋಗಿಯ ವಿವರಗಳನ್ನು ಸಾವಂದಪ್ಪನಿಂದ ಪಡೆಯಲಾಯಿತು.
ಸಕ್ಯೂಬಾಯಿಯ ತಾಯಿಗೆ ಹತ್ತೆಂಟು ವರ್ಷಗಳಿಂದಲೂ ಮಾನಸಿಕ ಅಸ್ಪತ್ರೆಯಲ್ಲಿ, 'ಷಾಕ್ ಟ್ರೀಟ್‌ಮೆಂಟ್' ಅನ್ನು ಆಗಿಂದಾಗ್ಗೆ ಕೊಡಿಸಿದ್ದರು. ಮಾನಸಿಕ ಆಸ್ಪತ್ರೆಗೆ ಹೋಗುವುದಕ್ಕೆ ಮೊದಲು ಸಕ್ಕೂಬಾಯಿಯ ತಾಯಿಯು ಇದ್ದುದರಲ್ಲಿ ಸ್ವಸ್ಥವಾಗಿಯೇ ಇದ್ದಳು. ಆದರೂ ಸಂಸಾರದಲ್ಲಿ ಚಾಲೂಕಾಗಿರಲಿಲ್ಲ. ಆದರೆ ಆಸ್ಪತ್ರೆಗೆ ಹೋಗಲೇಬೇಕು ಎನ್ನುವಂತೆ ಎಂದೂ ನಡೆದುಕೊಂಡಿರಲಿಲ್ಲವಂತೆ. ಸಕ್ಕೂವಿನ ಹೆರಿಗೆಯಾದ ಮೇಲೆ ಒಂದೆರಡು ತಿಂಗಳು 'ಭೂತಚೇಷ್ಟೆ' ಆಗಿತ್ತು.