ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ಕಿಜೋಫೊನಿಯಾಗಳು

೨೧೯

ತಂದೆಯು ದೃಢಕಾಯ, ತಾಯಿಯು ಏಕಾಂತ ಸ್ವಭಾವದಾಕೆ, ರೋಗಿಷ್ಠೆ, ಎರಡು ಮೂರು ಬಾರಿ ಕರೆಂಟ್ ಟೀಟ್‌ಮೆಂಟನ್ನು ತೆಗೆದುಕೊಂಡಿದ್ದಳು. ಮೊದಲಿ ನಿಂದಲೂ ವಿದ್ಯಾಭ್ಯಾಸದಲ್ಲಿ ರಘುಪತಿಗೆ ಆಸ್ಥೆಯಿರಲಿಲ್ಲ. ಉಪಾಧ್ಯಾಯರನ್ನು ಕಂಡರನಕ ನಡುಗುತ್ತಿದ್ದ. ಕತ್ತಲು ಕಳ್ಳಕಾಕರು ದೆವ್ವ ಭೂತಗಳೆಂದರೆ ತುಂಬ ಹೆದರಿಕೆ, ಸರಿಯಾದ ಬಟ್ಟೆಬರೆಗಳಾಗಲೀ ದುಡ್ಡುಕಾಸಾಗಲೀ ಇರುತ್ತಿರಲಿಲ್ಲ ವಾದ್ದರಿಂದ ತಾನು ಎಲ್ಲರಿಗಿಂತ ಕೀಳು ಎಂಬ ಭಾವನೆ ಬೆಳೆದು ಬೇರೆಯವರ ಜತೆಯಲ್ಲಿ ಸ್ನೇಹವನ್ನಾಗಲೀ ಕೂಡಿ ಮಾತನಾಡುವುದನ್ನಾಗಲೀ, ಮಾಡುತ್ತಿರಲಿಲ್ಲ. ಮೊದಲಿನಿಂದ ಈ ತನಕ ಸ್ನೇಹಿತರೇ ನನಗಿಲ್ಲ ಎಂದವನ ಹೇಳಿಕೆ. ಕಾಲೇಜಿನಲ್ಲಿ ಓದುವಾಗಲೂ ಒಂಟಿತನದಿಂದ ಬೇಸರ ಪಡುತ್ತಿದ್ದ. ಕೊನೆಯ ಪರೀಕ್ಷೆಯಲ್ಲಿ ನಪಾಸಾದ, ಮುಂದೆ ಓದಲು ಸಾಧ್ಯವಾಗಲಿಲ್ಲ. ಏಳು ಎಂಟು ವರ್ಷ ಕೆಲಸ ದೊರಕದೆ ತುಂಬಾ ಒದ್ದಾಡಿದ. ನಂತರ ಫ್ಯಾಕ್ಟರಿಯೊಂದರಲ್ಲಿ ಕೆಲಸ ದೊರೆಯಿತು. ಒಂದೆರಡು ವರ್ಷಗಳು ನೆಮ್ಮದಿಯಿಂದಿದ್ದ. ಅನಂತರ ಶುರುವಾಯಿತು; ರಜಹಾಕುವ ಗೀಳು. ಇಂತಹ ಗೀಳಿನಿಂದ ಮುಂದೆ ಆಗುವ ದುಷ್ಪರಿಣಾಮಗಳು ರಘುಪತಿಗೆ ಗೊತ್ತು. ಆದರೆ ಭವಿಷ್ಯದ ಭಯವು ಅವನನ್ನು ನರಳುಸುತ್ತಿರಲಿಲ್ಲ. ಏನು ಬೇಕಾದರೂ ಆಗಲಿ ; ಹೇಗೆ ಬೇಕಾದರೂ ನಡೆಯಲಿ, ಎನ್ನುವ ಉಗ್ರ ಉದಾಸೀನತೆಯು ಅವನಿಗೆ ಬಡಿದಿತ್ತು.

ಮೂರು ಮಕ್ಕಳು ಮತ್ತು ಹೆಂಡತಿ ಇರುವ ಸಂಸಾರ, ತನ್ನ ಹೆಂಡತಿ, ತನ್ನ ಮಕ್ಕಳು. ಆದರೆ ಅವರಲ್ಲಿ ಪ್ರೀತಿಯಾಗಲೀ ವಿಶ್ವಾಸವಾಗಲೀ ಹುಟ್ಟಲಿಲ್ಲ, ಬೆಳೆಯಲಿಲ್ಲ. ಸಂಸಾರದ ಹೊಣೆಯ ಅರಿವು ರಘುಪತಿಗಿದೆ. ಆದರೆ ಹೊಣೆಯನ್ನು ಹೊರಲು ಉದಾಸೀನತೆಯು Callousness -ಅಡ್ಡ ಬರುತ್ತಿದೆ.

ಒಬ್ಬನೇ ಬಿದ್ದುಕೊಂಡು, ತನ್ನ ಯೋಚನೆಗಳಲ್ಲಿ ತಾನೇ ಮಗ್ನನಾಗಿರುವುದು ಅವನಿಗೆ ಸುಲಭವಾಗಿದೆ. ಮನಸ್ಸಿನಲ್ಲಿ ಭಾರವಾಗಿದ್ದುದನ್ನು ಗೆಳೆಯರೊಂದಿಗೆ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಅಂತಹ ಅನುಕೂಲವು ರಘುಪತಿಗಿರಲಿಲ್ಲ. ನಾನು ಎಲ್ಲರಿಗಿಂತಲೂ ಕೀಳು ; ನನ್ನನ್ನು ಕಂಡರೆ ಎಲ್ಲರೂ ನಗುತ್ತಾರೆ, ಎನ್ನುವ ಭಾವನೆಯು ಮೂಡಿ, ಅವ ಇತರರೊಂದಿಗೆ ಬೆರೆಯಲಿಲ್ಲ. ಊಹಾ ಲೋಕದಲ್ಲಿ ಹೆಚ್ಚು ಮಗ್ನನಾಗತೊಡಗಿದ. ಒಂಟಿತನದ ಭಾವನೆಯೂ ವೃದ್ಧಿಯಾಗತೊಡಗಿತು.

ಮಾನವನಿಗೆ ಸಹಜವಾದ ಭಾವನೆಗಳು ಬಾಳಿನ ಹಿತವನ್ನು ಸಾಧಿಸುತ್ತವೆ. ಮಗುವನ್ನು ತಾಯ್ತಂದೆಯರು ಪ್ರೀತಿಸುವುದರಿಂದ, ಮಗುವಿಗೆ ಎಷ್ಟು