ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨೮

ಮನಮಂಥನ

'ಪ್ರೊಫೆಸರು ಬಂದಿದ್ದರು, ಹೀಗಂದರು, ರಾಮನ ತುಂಬಾ ಪ್ರಚಂಡ ಅಂತ ಹೊಗಳಿದರು' ಎಂದು ತಾಯಿ ರಾತ್ರಿ ಊಟವಾದ ಮೇಲೆ ಗಂಡನಿಗೆ ಹೇಳಿದಳು. ನಿಟ್ಟುಸಿರು ಬಿಡುತ್ತಾ, ತಂದೆ ನಿನ್ನ ಮಗನ ಪ್ರಚಂಡ ಜಾಣತನವನ್ನು ಎಲ್ಲರೂ ಹೊಗಳುತ್ತಾರೆ, ದಿಟ. ಆದರೆ ಒಂದು ಕೆಲಸದಲ್ಲಿ ನಿಲ್ಲುಲ್ಲ. ಎಲ್ಲರಂತೆ ನಗುನಗುತ್ತಾ ಮಾತನಾಡುಲ್ಲ. ಅಪ್ಪ ಅಮ್ಮ ಅಂದರೆ ಸ್ವಲ್ಪವಾದರೂ ವಿಶ್ವಾಸವಿರಬೇಡವೇ ? ಇವನ ಜಾಣತನ ಕಟ್ಟಿಕೊಂಡು ಏನು ಮಾಡೋದು ? ಬ್ಯಾಂಕೂ ಬೇಕಾಗಿತ್ತಿಲ್ಲ ; ಫಸ್ಟ್ ಕ್ಲಾಸೂ ಬೇಡ. ಎಲ್ಲರ ಹಾಗೆ ಹೇಗೋ ಪ್ಯಾಸು ಮಾಡಿಕೊಂಡು, ಒಂದು ಚಾಕರೀನ ಹಿಡಿದಿದ್ದರೆ, ಎಷ್ಟು ಚೆನ್ನಾಗಿರುತ್ತಿತ್ತು ? ನಲವತ್ತರ ಹತ್ತಿರ ಹತ್ತಿರ ವಯಸ್ಸು ಬಂತು. ಒಂಟಿ ಗುಂಡುಗೋವಿಯಾಗಿಯೇ ಇದ್ದಾನೆ. ಜತೆಯವರೆಲ್ಲಾ ಸ್ವಂತ ಮನೆ ಮಾಡಿಕೊಂಡು ಮೂರು ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. ಹೀಗೆ ಶೋಂಭೇರಿಯಾಗಿ ಬಿದ್ದಿರುವ ಬದಲು, ಅಪಾಪೋಲಿಯಾಗಿ ತಿರುಗ್ತಾ ಇದ್ದರೂ ಚೆನ್ನಾಗಿರುತ್ತಿತ್ತು' ಎಂದು ತಮ್ಮ ಮನದಾಳದ ಅಳಲನ್ನು ತೋಡಿಕೊಂಡರು.

ಮನೋವೈದ್ಯರ ಬಳಿಗೆ ರಾಮಭದ್ರನನ್ನು ಕರೆದುಕೊಂಡು ಹೋಗಲು ಸಾಧ್ಯವಾಗಲೇ ಇಲ್ಲ. ತಂದೆಯು ಹೋಗಿ ಅವರ ಸಲಹೆಯನ್ನು ಕೇಳಿದಾಗ, 'ಜುಲುಂ ಮಾಡಿ ಅವನನ್ನು ಎಳೆದುಕೊಂಡು ಬರಬೇಡಿ. ಹಾಗೆ ಮಾಡಿದರೆ ನನ್ನ ಮೇಲೆ ಅವನಿಗೆ ವೈರ ಹುಟ್ಟುತ್ತದೆ, ಅಂತರಂಗದಲ್ಲಾಗುವುದನ್ನು ಅವ ಮುಚ್ಚಿಟ್ಟುಕೊಳ್ಳುತ್ತಾನೆ. ಅಂದ ಮೇಲೆ ಚಿಕಿತ್ಸೆಯು ನಿರರ್ಥಕವಾಗುತ್ತದೆ. ಅವನನ್ನು ಎದುರು ಹಾಕಿಕೊಳ್ಳಬೇಡಿ ; ಅಂಕೆಶಿಕ್ಷೆಯಲ್ಲಿಡಹೋಗಬೇಡಿ. ಅವನೇ ಏನಾದರೂ ವೈದ್ಯ ಸಲಹೆಯನ್ನು ಅಪೇಕ್ಷಿಸಿದರೆ, ತತ್‌ಕ್ಷಣ ಹೇಳಿ ಕಳುಹಿಸಿ, ಅಲ್ಲಿಯ ತನಕ ಆದರ, ಸಹಾನುಭೂತಿ, ಮತ್ತು ಅನುಕಂಪವನ್ನು ತೋರಿಸಿ. ನಿಮಗೆ ಬೇಸರ ಬರುವಂತೆ, ಅವಮಾನವಾಗುವಂತೆ, ಅವ ಕೆಲವೊಮ್ಮೆ ನಡೆದುಕೊಳ್ಳಬಹುದು. ಬೇಕಾಗಿ ಹಾಗೆ ಅವ ಮಾಡುವುದಿಲ್ಲ. ಅವನ ಮನಸ್ಸು ಛಿದ್ರವಾಗಿ ಅವನನ್ನು ಜಗ್ಗಾಡಿಸುತ್ತಿದೆ. ಮನಸ್ಸಿನ ಮೇಲಿನ ಹತೋಟಿಯು ಎಂದೋ ತಪ್ಪಿಹೋಗಿದೆ. ವಾಸ್ತವಿಕತೆಯ ಅರಿವೇ ನಾಶವಾಗಿದೆ. ಮನಸ್ಸಿನಲ್ಲಿ ಕಾಡಬರುವ ಭ್ರಮೆಗಳೇಸತ್ಯ ಎಂದವನಿಗನ್ನಿಸುತ್ತಿದೆ. ನರಕಯಾತನೆ ಎಂದರೆ, ಅವನು ಅನುಭವಿಸುತ್ತಿರುವುದು' ಎಂದು ಹೇಳಿ ಕಳುಹಿಸಿದರು.

ದಿನದಿನಕ್ಕೆ ರಾಮಭದ್ರನ್‌ನ ಜೋ ಹೆಚ್ಚುತ್ತ ಹೋಯಿತು. ಒಂದೆರಡು