ಸ್ಕೀಜೋಫ್ರೆನಿಯಾಗಳು
೨೩೧
ಬೆಂಗಳೂರು ಶಾಖೆಯನ್ನು ಸ್ಥಾಪಿಸಲಾಯಿತು. ಇಲ್ಲಿಯ ಮ್ಯಾನೇಜರ್ ಅವ ಅದುದು ಆಗ.
ಚಿಕ್ಕ ಪುಟ್ಟ ಕಾಯಿಲೆಗಳ ಚಿಕಿತ್ಸೆಗಾಗಿ, ಅಜ್ಜಿ, ಪೀತಾಂಬರನನ್ನು ಕರೆತರುತ್ತಿದ್ದಳು. ಅಜ್ಜಿಯು ಬಾಯಿ ತುಂಬ ಮಾತನಾಡುತ್ತಿದ್ದಳು. ಪೀತಾಂಬರ್ ಸ್ವಲ್ಪ ನಾಚಿಕೆಯ ಸ್ವಭಾವದವ. ಬಹಳ ಸಂಕೋಚಪಡುತ್ತಿದ್ದ. ಅಜ್ಜಿಯ ಮನೆಯಲ್ಲಿ ಬೆಳೆದುದರಿಂದ, ತುಂಬಾ ಮುದ್ದು ಮುದ್ದು ಆಗಿರಬೇಕಾಗಿತ್ತು. ಆದರೆ ಅಜ್ಜಿಯ ಮುದ್ದು ಇವನಿಗೆ ಹತ್ತಿದಂತೇ ಇರಲಿಲ್ಲ. ಒಂಟಿಯಾಗಿ ಆಡಿಕೊಳ್ಳುವುದರಲ್ಲಿ ಹೆಚ್ಚು ಇಷ್ಟವಿತ್ತೇ ಹೊರತು, ಹೆಚ್ಚಾಗಿ ಜತೆಯವರೊಂದಿಗೆ ಕೂಡುತ್ತಿರಲಿಲ್ಲ. 'ತುಂಬಾ ಸಂಕೋಚಪಡುತ್ತಾನೆ. ಬಹಳ ನಾಚಿಕೆ, ಶುದ್ಧ ಹೆಣ್ಣಿಗನಂತೆ ಆಡುತ್ತಾನೆ' ಎಂದು ಅಜ್ಜಿಯು ಕೂಡ ಮೂದಲಿಸುತ್ತಿದ್ದಳು ; ನನ್ನ ಎದುರಿಗೇನೇ.
ಎಸ್.ಎಸ್.ಎಲ್.ಸಿ. ಆದ ಮೇಲೆ ಮದ್ರಾಸಿಗೆ ತಂದೆಯೊಡನೆ ಇದ್ದು ಕೆಲಸ ಕಲಿತುಕೊಳ್ಳುವುದಕ್ಕೆ ಹೋಗುವ ಮೊದಲು, ನನ್ನ ಬಳಿಗೆ ಬಂದಿದ್ದ. ಬಾಗಿಲನ್ನು ಹಾಕುವಾಗ, ಬೆರಳು ಸಿಕ್ಕಿಕೊಂಡು ಜಜ್ಜಿಹೋಗಿತ್ತು. ಒದ್ದೆ ಬಟ್ಟೆಯನ್ನು ಕಟ್ಟಿ ಅಜ್ಜಿ ಅಳುತ್ತಾ ಕರೆದುಕೊಂಡು ಬಂದಿದ್ದಳು. ದಿಟವಾಗಲೂ ಬೆರಳು ಅಜ್ಜಿ ಬಜ್ಜಿಯಾಗಿತ್ತು. ಅಸಾಧ್ಯ ಯಾತನೆಯಾಗಿರಬೇಕು. ಆದರೂ ಪೀತಾಂಬರ್ ಎಗರಾಡುತ್ತ ಒದ್ದಾಡುತ್ತ ಬೊಬ್ಬೆ ಇಡುತ್ತಿರಲಿಲ್ಲ. 'ಬಲು ಧೈರ್ಯಶಾಲಿ ಗಂಡಸಪ್ಪ ಎಂದು ಚಿಕಿತ್ಸೆ ಮಾಡುತ್ತ ಹೊಗಳಿದೆ. ನನ್ನ ಹೊಗಳಿಕೆಯೂ ಅವನ ಮುಖದಲ್ಲಿ ಮಂದಹಾಸವನ್ನು ಮೂಡಿಸಲಿಲ್ಲ. ಎಲ್ಲರಂತೆ ಇವ ಇಲ್ಲ ಎಂಬ ಅನುಮಾನವು ಆಗ ಮೂಡಿತ್ತು.
ನಾಲ್ಕು ವರ್ಷಗಳು ಮದ್ರಾಸಿನಲ್ಲಿ, ಲೇಣೆದೇಣಿಯ ಗುಟ್ಟುಗಳನ್ನೆಲ್ಲಾ ಕಲಿತುಕೊಂಡ ಮೇಲೆ ಹಿಂತಿರುಗಿ, ಇಲ್ಲಿ ವ್ಯವಹಾರವನ್ನು ಆರಂಭಿಸಿದ ಮೇಲೆ ಹೆಚ್ಚು ಹೆಚ್ಚಾಗಿ ನನ್ನಲ್ಲಿಗೆ ಬರುತ್ತಿದ್ದ. ಅಂದರೆ ಅವನಿಗೆ ಕಾಯಿಲೆ ಬರುತ್ತಿತ್ತು ಅಂತಲ್ಲ, ಮದುವೆಯಾಗಿತ್ತು. ಎರಡು ಮಕ್ಕಳೂ ಆಗಿದ್ದುವು. ಇದೆಲ್ಲಾ ಸಂಸಾರದ ಸಡಗರದಲ್ಲಿ ಡಾಕ್ಟರ ನೆರವು ಮೇಲಿಂದ ಮೇಲೆ ಅಗತ್ಯವಾಗಲೇಬೇಕು. ಮೊದಲ ಮಗುವಿಗೆ ಭಯಂಕರ ಪ್ರಮಾಣದ ಅತಿಸಾರವು ಬಡಿದಿತ್ತು. ಉಳಿಯುತ್ತೋ ಇಲ್ಲವೋ ಎಂದು ಶಂಕಿಸುವಂತಿತ್ತು. ಪೀತಾಂಬರನ ಹೆಂಡತಿ ಮತ್ತು ಅಜ್ಜಿ ಕೊರಗುತ್ತಾ ಕಣ್ಣೀರಿಡುತ್ತಿದ್ದರು. ಬೆಳೆದ ಗಂಡಸು ಕಣ್ಣೀರಿಡಬೇಕಿರಲಿಲ್ಲ ಆದರೂ ಖಿನ್ನತೆಯಾದರೂ ಮೊಗದಲ್ಲಿ ಕಾಣಿಸಲೇ ಬೇಕು ಅಲ್ಲವೆ? ಪೀತಾಂಬರನು ಶೋಕಿಸುವಂತೆ ಕಾಣಿಸಲೇ ಇಲ್ಲ. ಇವನೆಂತಹ ಸ್ಥಿತ ಪ್ರಜ್ಞನಪ್ಪ? ಎಂದನ್ನಿಸಿತ್ತು.