ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪೦

ಮನಮಂಥನ

ಮಾತುಗಳನ್ನಾಡುತ್ತಿದ್ದಳು. ಅಷ್ಟೇ ವಿನಹಾ ಸದರವನ್ನಾಗಲೀ ವಿಶ್ವಾಸವನ್ನಾಗಲೀ ತೋರಿಸುತ್ತಿರಲಿಲ್ಲ. 'ಕಾಲೇಜಿನಲ್ಲಿ ಯಾವ ಪಾಠ ಕಲಿಸಿದರು ? ಮನಸ್ಸಿಗೆ ಸುಲಭವಾಗಿ ಹಿಡಿಸುವಂತೆ ಕಲಿಸಿದರೆ' ಎಂದು ಮೇಲೆ ಮೇಲೆ ಕೇಳಿದೆ. ಒಂದೊಂದು ಸರ್ತಿ ಗೆಲುವಾಗಿ ಉತ್ತರಿಸುತ್ತಿದ್ದಳು. ಗಣಿತ ಕಲಿಸುತ್ತಿದ್ದವರು ಬಲು ಸ್ವಾರಸ್ಯವಾಗಿ ಪಾಠ ಕಲಿಸುತ್ತಿದ್ದರು ಎಂದೊಮ್ಮೆ ಅಂದಳು. ಒತ್ತಾಯ ಮಾಡಿ ಕೇಳಿದಾಗ ಸಿಡುಕುತ್ತಾ ಎದ್ದು ಹೋಗಿ ಬಿಡುತ್ತಿದ್ದಳು. ಇಂತಹ ವಯಸ್ಸಿನಲ್ಲಿ ಈ ರೀತಿಯ ಬೇನೆಗಳಿಗೆ, ಮದುವೆಯೇ ಶಾಶ್ವತವಾದ ಮದ್ದು ಎಂದು ನನ್ನ ಹೆಂಡತಿ ನಂಬಿದ್ದಾಳೆ. ಮಗಳಿಗೆ ಮದುವೆ ಮಾಡಿ ಎಂದು ಹಟ ಹಿಡಿದಿದ್ದಾಳೆ.

ಅವಳ ಈಗಿನ ಸ್ಥಿತಿಯಲ್ಲಿ ಮದುವೆ ಮಾಡುವುದು ಸರಿಯೇ, ಅಥವಾ ಅವಳ ಮನಃಸ್ಥಿತಿ ಸರಿಹೋದ ಮೇಲೆ, ಅವಳ ಅಭಿಪ್ರಾಯವನ್ನು ಕೇಳಿ ಮದುವೆ ಮಾಡುವುದೋ ಅಥವಾ ಪುನಃ ಓದನ್ನು ಮುಂದುವರೆಸುವುದೋ ಎನ್ನುವುದನ್ನು ನಿರ್ಧರಿಸಬೇಕೇ ? ಒಂದೂ ತೋಚುಲ್ಲಪ್ಪ ನನಗೆ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಬಿದ್ದಿರುತ್ತಾಳೆ. ಯಾರ ಜತೆಯೂ ಸೇರುವುದಿಲ್ಲ. ಯಾರಾದರೂ ತಿಳಿದವರು ಬಂದರೆ, ಅವರೆದುರಿಗೆ ಸ್ವಲ್ಪ ಹೊತ್ತು ಕೂತಿರುತ್ತಾಳೆ. ಒಂದೆರಡು ಮಾತೂ ಆಡುತ್ತಾಳೆ. ಅವರು ಆ ಕಡೆ ಹೋದರೆ, ಅಮ್ಮನ ಮೇಲೋ, ತಂಗಿಯ ಮೇಲೋ ಸಿಕ್ಕಾಪಟ್ಟೆ ಸಿಡುಕಿ, ಅನ್ನಬಾರದ್ದನ್ನೆಲ್ಲಾ ಅನ್ನುತ್ತಾಳೆ. ಇವಳಿಗೇನು ಹುಚ್ಚೇ ಹಿಡಿದಿದೆಯೋ ಅನಿಸುತ್ತೆ ಆಗ. ಮಿಕ್ಕಂತೆ ಸರಿಯಾಗಿರುತ್ತಾಳೆ. ಆದರೆ ನನಗನ್ನಿಸುತ್ತಪ್ಪ ; ಯಾರ ಮೇಲೂ ಅವಳಿಗೆ ಪ್ರೀತಿ ಇದ್ದಂತಿಲ್ಲ. ಯಾರನ್ನು ಕಂಡರೂ, ಯಾವುದನ್ನು ಕಂಡರೂ ಅಸಾಧ್ಯ ಉದಾಸೀನ, ಏನಾದರೂ ಮಾತನಾಡಿದರೆ, ನಾವು ಹೇಳಿದುದರ ಮೇಲೆ ಅವಳ ಗಮನವು ಕ್ಷಣ ಮಾತ್ರವೂ ಇರುವುದಿಲ್ಲ ಅನಿಸುತ್ತೆ. ಯಾತರಮೇಲೂ ಅವಳ ಗಮನವು ಸ್ವಲ್ಪಕಾಲ ನಿಲ್ಲುವುದಿಲ್ಲವೇನೋ, ಯಾವುದರಲ್ಲಿಯೂ ಆಸಕ್ತಿಯೇ ಇಲ್ಲವೇನೋ ಅನಿಸುತ್ತೆ. ಒಂದೊಂದು ಸರ್ತಿ ಮನೆಗೆಲಸವನ್ನು ಮಾಡುತ್ತಾ ಅಮ್ಮನಿಗೆ ನೆರವಾಗುತ್ತಾಳೆ. ಮತ್ತೆ ಕೆಲವು ಸರ್ತಿ ಸುಸ್ತಾಗಿದೆ ನಿಲೂಫ‌, ಸ್ವಲ್ಪ ತರಕಾರಿ ಹೆಚ್ಚಿಡ್ತೀಯಾ ಅಂತ ಅಮ್ಮ ಅಂದರೆ, ಕೇಳಿಸದೇ ಇದ್ದವಳಂತೆ ಏನನ್ನೂ ಓದುತ್ತಾ ಕುಳಿತೇ ಇರುತ್ತಾಳೆ.

ನಿನ್ನ ಮಗಳಿಗೆ ಹೀಗಾಗಿದ್ದರೆ ನೀನೇನು ಮಾಡ್ತಾ ಇದ್ದಿ, ಹೇಳು. ಆದರೆ ಒಂದು ವಿಷಯವನ್ನು ಗಣನೆಗೆ ತೆಗೆದುಕೊಂಡು ಸಲಹೆ ಕೊಡು. ನಿಮ್ಮಲ್ಲಿ ಮದುವೆಯಾದರೆ, ಅದು ಶಾಶ್ವತವಾದ ಬಂಧನವಾಗುತ್ತೆ. ಆದರೆ ನಮ್ಮಲ್ಲಿ