೨೪೫
ಮುಖದಲ್ಲಿ ಸ್ವಲ್ಪ ಬದಲಾವಣೆಯಾಯಿತು. ಎಲ್ಲಿದ್ದೇನೆ? ಇದು ಯಾವ ಊರು? ನೀನು ಲಕ್ಕು ಅಲ್ಲವೇ?' ಎಂದು ಅಕ್ಕನನ್ನು ಕೇಳಿದ. ಆನಂತರ ಶೀನಪ್ಪನಿಗೆ ತಾನು ಯಾರು ಎಂಬುದು ಸ್ಪಷ್ಟವಾಗಿ ತಿಳಿಯಿತು. ಆದರೆ ಕಳೆದ ನಾಲ್ಕು ತಿಂಗಳುಗಳು ಏನು ಮಾಡಿದೆ ಎಂಬುದು ಸಂಪೂರ್ಣವಾಗಿ ಮರೆತು ಹೋಗಿತ್ತು.
ಕೆಲವು ದಿನಗಳು ಲಾಂಘೀರಿನಲ್ಲಿ ಆರೈಕೆ ಪಡೆದು, ತನ್ನೂರಿಗೆ ಶೀನಪ್ಪ ಹಿಂತಿರುಗಿದ. ಪುನಃ ಕೆಲಸಕ್ಕೆ ಹಾಜರಾದ. ಕಂಪೆನಿಯವರು ವೈದ್ಯರ ಸಲಹೆಯನ್ನು ಪಡೆದು ಶೀನಪ್ಪನನ್ನು ಕೆಲಸಕ್ಕೆ ಸೇರಿಸಿಕೊಂಡರು. ಶೀನಪ್ಪ ಎಂದಿನಂತೆ ಕೆಲಸವನ್ನು ಮಾಡಿಕೊಂಡಿದ್ದಾನೆ.
ತನ್ನತನವೇ ಮರೆತು ಹೋಗಿ ; ಹಿಂದಿನ ಬಾಳಿನ ನೆನಪೆಲ್ಲವೂ ಅಳಸಿ ಹೋಗಿ ; ಹೊಸ ಬಾಳನ್ನು ಅಡ್ಡಾದಿಡ್ಡಿಯಾಗಿ ನಡೆಸುವಂತಾಗುವ ಬೇನೆಗೆ ಪ್ಯೂಗ್ಯೂ ಅಥವಾ ಅನ್ನೀಸಿಯಾ ಎಂಬ ಹೆಸರು.
ತಲೆಗೆ ಭಾರಿ ಪೆಟ್ಟು ಬಿದ್ದವರಿಗೆ ಸ್ವಲ್ಪ ಕಾಲ ಪ್ರಜ್ಞೆಯು ತಪ್ಪಿರುತ್ತದೆ. ಒಂದೆರಡು ವಾರಗಳಲ್ಲಿ ಜ್ಞಾನವು ಪುನಃ ಬಂದಾಗ, ಪೆಟ್ಟು ಬಿದ್ದ ಕಾರಣ, ಅಥವಾ ಸನ್ನಿವೇಶ ಇವೆಲ್ಲವೂ ಮರೆತು ಹೋಗಿರುತ್ತದೆ. ಆ ಅವಧಿಯ ಅನುಭವವು ಅವರ ಸ್ಮರಣೆಯಲ್ಲಿ ಉಳಿದಿರುವುದಿಲ್ಲ. ಇದು ಅನ್ನೀಸಿಯಾ.
ಅದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗೆಡ್ಡೆಗಳು ಅನ್ನೋಸಿಯಾವನ್ನು ಕಾಣಿಸುತ್ತವೆ. ಹಿಸ್ಟಿರಿಯಾ ಎಂಬ ಮಾನಸಿಕ ರೋಗದ ಒಂದು ಪರಿಸ್ಥಿತಿ ಇದು, ಎಂದು ಮನಃಶಾಸ್ತ್ರಜ್ಞರ ನಂಬಿಕೆ. ವಾಸ್ತವಿಕ ಪರಿಸ್ಥಿತಿಯನ್ನು ಮನಸ್ಸು ಒಪ್ಪದೆ ಹೋದರೆ ಬೇರೆ ಇನ್ನಾವ ಪರಿಹಾರವನ್ನೂ ಸಾಧಿಸಲು ಆಗದೆ ಇದ್ದರೆ, ಆಗ ಮನಸ್ಸು 'ಮರೆವಿನ ನೆರವನ್ನು ಪಡೆಯುತ್ತದೆ. ಆ ಮರೆವು ಸಂಪೂರ್ಣವಾಗಿಯೂ ಇರುತ್ತದೆ. ಕೆಲಕಾಲ ಹೀಗಿದ್ದು ನಂತರ ಯಾವುದಾದರೂ ಪ್ರೇರಕದಿಂದ, ಮೊದಲಿದ್ದ ವಾಸ್ತವಿಕ ಪರಿಸ್ಥಿತಿಗೆ ಹಿಂತಿರುಗುತ್ತದೆ.
ಪ್ರಕೃತಿಯಲ್ಲಿ ಪ್ರಾಣಿಗಳ ಪ್ರಗತಿಯಲ್ಲಿಯೂ, ಮೂಲಭೂತವಾದ ಈ ವರ್ತನೆಯನ್ನು ಕಾಣಬಹುದು. ಅಪಾಯವನ್ನು ಎದುರಿಸಬೇಕಾದಾಗ ಪ್ರಾಣಿಗಳು ಎರಡು ವಿಧಾನಗಳನ್ನು ಅನುಸರಿಸುತ್ತವೆ.
ಒಂದು, ಅಪಾಯವನ್ನೆದುರಿಸಿ, ಇದ್ದ ಬಲವನ್ನೆಲ್ಲಾ ಉಪಯೋಗಿಸಿ ಹೋರಾಡಿ, ಗೆಲ್ಲುವುದು. ಹಾಗೆ ಅಪಾಯವನ್ನು ನಿವಾರಿಸುವುದು. ಎರಡನೆಯದು,