ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೨೮೧

ಪಂಚೇಂದ್ರಿಯಗಳಂತೆ, ಆರನೆಯ ಅಂಗವಾಗಿದೆ. ೩. ಮತ್ತೊಂದು ಭಾಗವು ವ್ಯಾವಹಾರಿಕ ಬಾಳಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿರದಿದ್ದರೂ, ವ್ಯಾವಹಾರಿಕವಾದ, ನಶ್ವರವಾದ ಈ ಲೋಕದ ಬಾಳನ್ನು, ಅರಿವು ಪೂರ್ಣವಾದ ಮತ್ತಾವುದೋ ಇರುವಿಕೆಯತ್ತ ಸೆಳೆಯುತ್ತದೆ. ಈ ಮೂರು ಅಂಶಗಳನ್ನು ವಿಚಾರಪರವಾಗಿ, ವಿಜ್ಞಾನದ ರೀತಿಯಲ್ಲಿ ಒಪ್ಪಿಕೊಳ್ಳಬೇಕು.

ಮನಸ್ಸು ಎಂಬುದೊಂದು ಶಕ್ತಿಯು ಅಥವಾ ಚೈತನ್ಯವು ಕಾಣಿಸದೇ ಇದ್ದರೂ ದೇಹದಲ್ಲಿದೆ ಎಂದು ಒಪ್ಪಿಕೊಳ್ಳಬೇಕು. ಏಕೆಂದರೆ ಮನಸ್ಸಿನ ಚಟುವಟಿಕೆಗಳಿಂದ ಉಂಟಾಗುವ, ದೇಹದಲ್ಲಿ ಸಾಕ್ಷಾತ್ ಕಂಡುಬರುವ, ಪರಿಣಾಮಗಳು ಸಾಕ್ಷ್ಯಗಳನ್ನು ನೀಡುತ್ತವೆ. ಗಾಳಿಯು ಕಣ್ಣಿಗೆ ಕಾಣಿಸದೇ ಇದ್ದರೂ ಗಿಡಗಳ ಎಲೆಗಳು, ಹೊದ್ದುಕೊಂಡಿರುವ ಸೆರಗುಗಳು, ಹಾರಾಡುವುದನ್ನು ನೋಡಿ, ಗಾಳಿಯು ಬೀಸುತ್ತದೆ ಎಂದು ನಿಸ್ಸಂದೇಹವಾಗಿ ನಿರ್ಧರಿಸುವಂತೆ.

ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮಾತುಗಳ ಸಂಕೇತದ ಮೂಲಕ, ಬರೆಯುತ್ತೇನೆ. ಬರೆದುದು ಪ್ರಕಟವೂ ಆಗುತ್ತದೆ. ಪ್ರಕಟವಾದುದನ್ನು ಓದಬಹುದಾದ ನೀವು; ಎರಡು ಪಂಖ್ಯೆಗಳನ್ನು ಓದಿ 'ತೆಗೆಯೋ, ಇವನ ಕಂತೆಯನ್ನ : ಬಿಸಾಕೋ, ಬರಿ ಬೋರ್ ಹೊಡೀತಾನೆ' ಎಂದು ಪುಸ್ತಕವನ್ನು ಕಸದ ಬುಟ್ಟಿಗೆ ಎಸೆಯಬಹುದು. ಅಥವಾ 'ಪಾಪ ! ಏನೋ ಒದರಲಿಕ್ಕೆ ಹೊಂಟಾನ, ಏನಂತಾನ? ಓದಿ ನೋಡುವ' ಎಂದು ಮುಂದುವರಿಸಲೂಬಹುದು. ಇಂತಹ ವಿಧ ವಿಧವಾದ ಪ್ರತಿಕ್ರಿಯೆಯು ನಿಮ್ಮಲ್ಲಿ ಮೂಡಿ ಬಂದದ್ದು : ನಿಮ್ಮ ಮನಸ್ಸಿನಿಂದ. Ambrose Bierce ಅನ ವ್ಯಾಖ್ಯಾನವನ್ನು ಕೇಳಿದ ಮೇಲೆ ಕೂಡ, ಮನಸ್ಸು ಎಂಬ ಶಕ್ತಿಯು ಅಥವಾ ಚೈತನ್ಯವು ನಿಜವಾಗಲೂ ಅಸ್ತಿತ್ವದಲ್ಲಿದೆ ಎಂದು ಒಪ್ಪಲೇ ಬೇಕು.

ಮನಸ್ಸು ಒಂದು ಶಕ್ತಿ, ಒಂದು ಚೈತನ್ಯ, ಒಂದು ಕ್ರಿಯಾಕಾರಣ ಪ್ರಭಾವ ಎಂದೆವು. ಕಣ್ಣುಗಳಿಗೆ ಕಾಣಿಸದಿದ್ದರೂ, ಕಿವಿಗೆ ಕೇಳಿಸದಿದ್ದರೂ ಪಂಚೇಂದ್ರಿಯಗಳಿಗೆ ನೇರವಾಗಿ ಗೋಚರವಾಗದಿದ್ದರೂ, ಮನಸ್ಸು ಅಸ್ತಿತ್ವದಲ್ಲಿದೆ ಎಂದು ತೀರ್ಮಾನಿಸಿದೆವು. ಆದರೆ ಅದು ಯಾವ ತೆರನ ಶಕ್ತಿ? ಎಂತಹ ಚೈತನ್ಯ.

ಧನುರ್ಮಾಸದಲ್ಲಿ ಬೆಳಗಿನ ಝಾಮ ಬಚ್ಚಲೊಲೆಯ ಬೆಂಕಿ ಮುಂದೆ ಕುಳಿತರೆ, ಮೈಕೈ ಹಿತವಾಗಿ ಕಾಯುತ್ತದೆ. ಆದರೆ ಒಲೆಯ ಬೆಂಕಿಯಿಂದ ನಮ್ಮ