೨೮೭
ಒಣಗಿ ಮೈ ಅಂಟಾದಾಗ, ಸೋಪನ್ನು ತಿಕ್ಕಿ ಸ್ನಾನವನ್ನು ಮಾಡಿದರೆ, ಮೈಗೆ ಎಷ್ಟೋ ಹಗುರವಾಗುತ್ತದೆ, ಮತ್ತು ಮನಸೂ ಪ್ರಫುಲ್ಲವಾಗುತ್ತದೆ. ಕಲಿಯುವುದು, ಅಥವಾ ಕಲಿಸುವುದು ಎಂದು ಮನಸ್ಸಿನ ಕಾರ್ಯಗಳನ್ನು ವಿಂಗಡಿಸಬಹುದು, ಸ್ಕೂಲವಾಗಿ, ಮನಸ್ಸು, ಪ್ರಫುಲ್ಲವಾದಾಗ, ಈ ಎರಡೂ ತರಹ ಕಾರ್ಯಗಳನ್ನು ಚುರುಕಾಗಿ ನಡೆಸುತ್ತದೆ.
ದೇಹದೊಳಗೆ, ಪ್ರಕೃತಿಯ ರೀತ್ಯಾ ವಿಸರ್ಜಿಸಬೇಕಾದ ಜಲ ಮಲಗಳಂತಹ ಮಲಿನಗಳು ಹೆಚ್ಚಾಗಿ ತುಂಬಿಕೊಂಡರೆ, ಬಾಧೆಯನ್ನುಂಟುಮಾಡಲಾರಂಭಿಸಿದರೆ, ಆಗ ಮನಸ್ಸು ಚುರುಕಾಗಿರುವುದಿಲ್ಲ. ಅವುಗಳನ್ನು ಸಾಫಾಗಿ, ಸಂಪೂರ್ಣವಾಗಿ ವಿಸರ್ಜಿಸಿದ ನಂತರ, ದೇಹವು ಖುಷಿಯಾಗುವುದಿರಲಿ ; ಮನಸೂ ಹಗುರಾಗುತ್ತದೆ. ಚುರುಕಾಗುತ್ತದೆ. ಯಶಸ್ವಿಯಾಗಿ, ಶ್ರಮವಿಲ್ಲದೆ ತನ್ನ ಕಾರ್ಯಗಳನ್ನು ನಡೆಸುತ್ತದೆ.
ಶ್ವಾಸಕೋಶಗಳಲ್ಲಿ ಕಫವು ಕಟ್ಟಿದಾಗಲೂ ಇದೇ ರೀತಿ ದೇಹವು ಬಾಧಿಸಲ್ಪಡುತ್ತದೆ. ಮನಸೂ ಮುಜುಗರದಿಂದ ತಲ್ಲಣಿಸುತ್ತದೆ. ಕಫವು ಸಡಿಲವಾಗಿ, ಕೆಮ್ಮು ಮೂಡಿ ಹೊರಕ್ಕೆ ಉಗಿಯಲ್ಪಟ್ಟರೆ, ನಂತರ ದೇಹವು ಸಂತಸವನ್ನು ಪಡೆಯುತ್ತದೆ, ಮನಸ್ಸು ನೆಮ್ಮದಿಯಾಗುತ್ತದೆ.
ದೇಹವು ಹಲವಾರು ರೀತಿಯಲ್ಲಿ ಮಲಿನಗೊಳ್ಳಬಹುದು. ಹಲವಾರು ಅಂಗಗಳೂ ಕಲುಷಿತಗೊಳ್ಳಬಹುದು. ಹಲ್ಲು, ವಸಡು, ಕಿವಿ, ಕಣ್ಣು ಇತ್ಯಾದಿ ಇತ್ಯಾದಿ ; ಬೇನೆಯಿಂದ ಮಲಿನಗೊಳ್ಳಬಹುದು. ದುರಭ್ಯಾಸಗಳಿಂದ ಕೆಡಬಹುದು. ದೇಹದ ಎಲ್ಲಾ ಅಂಗಗಳೂ ಯಾವ ಕ್ಷಣದಲ್ಲಿಯೂ ಪರಿಶುದ್ಧವಾಗಿದೆ ಎಂದನ್ನಬರುವುದಿಲ್ಲ. ಆದುದರಿಂದಲೇ, 'ದೇಹಕ್ಕೆ ಮಡಿ ಇಲ್ಲ; ಆತ್ಮಕ್ಕೆ ಮೈಲಿಗೆಯಿಲ್ಲ'ಎಂಬ ಗಾದೆಯನ್ನು ನುಡಿದರು.
ದೇಹವು ಮಲಿನವಾದಂತೆ ಮನಸ್ಸು ಮಲಿನವಾಗುತ್ತದೆಯೇ? ಮನಸ್ಸು ಒಂದು ತೆರನ ಶಕ್ತಿ, ಶಕ್ತಿಯು ಮಲಿನವಾಗುವುದಿಲ್ಲ. ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡರೆ, ಆಗ ದುಷ್ಪರಿಣಾಮಗಳಾಗುತ್ತವೆ. ಆಗ ಪರಿಣಾಮಗಳು ಕೆಟ್ಟು ದಾದರೆ, ಮಲಿನವಾಯಿತು ಎನ್ನಬೇಕು. ಮನಸ್ಸನ್ನು ಸದುಪಯೋಗಪಡಿಸಿಕೊಂಡರೆ, ಸತ್ಪರಿಣಾಮಗಳಾಗುತ್ತವೆ. ಮಲಿನತೆಯು ಇರುವುದಿಲ್ಲ, ಎನ್ನಬಹುದು.
ಹಣ್ಣನ್ನು ಹೆಚ್ಚಲು ಚಾಕುವನ್ನು ಬಳಸಿಕೊಳ್ಳುತ್ತೇವೆ. ಚಾಕುವಿನ ಸದುಪಯೋಗವಿದು. ಆದರೆ ಅದೇ ಚಾಕುವನ್ನು ಇನ್ನೊಬ್ಬನಿಗೆ ಇರಿಯಲೂ ಉಪಯೋಗಿಸಬಹುದು. ಚಾಕುವಿನ ದುರುಪಯೋಗವಿದು. ಚಾಕುವು ಎರಡೂ ಉಪಯೋಗಗಳಲ್ಲಿ ಪಾತ್ರವನ್ನು ವಹಿಸಿದರೂ, ಸ್ವಂತ ಪ್ರಚೋದನೆಯಿಂದ ಹಾಗೆ