ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೨೯೭

ಎಲಡಿಕೆಯನ್ನು ವರಾಂಡಾದಲ್ಲಿ ಜಗಿಯುತ್ತಾ ಕುಳಿತೆ ಒಂಟಿಯಾಗಿ ಮನಸ್ಸು ವಿಚಾರ ಮಾಡತೊಡಗಿತು.

ಚರ, ಸ್ಥಿರ ಜೀವಂತ ವಸ್ತುಗಳಲ್ಲಿ ಎರಡು ವ್ಯತಿರಿಕ್ತವಾದ ಭಾಗಗಳನ್ನು ಕಾಣಬಹುದು. ಒಂದು ಮರದಂತೆ ಇದ್ದಲ್ಲೇ ಬೆಳೆದು, ಬೀಜಗಳನ್ನು ಹರಡಿ ವೃದ್ಧಿಯಾಗುತ್ತಾ ಇರುವ ಸಸ್ಯವರ್ಗ. ನೆಲಸಿದಲ್ಲೇ ನನ್ನ ಬಾಳಿಗೆ ಅಗತ್ಯವಾದ ಆಹಾರಗಳನ್ನು ನೆಲದಿಂದೂ ಸುತ್ತಲೂ ಬೀಸುವ ಗಾಳಿಯಿಂದಲೂ ದಕ್ಕಿಸಿಕೊಂಡು, ಬದುಕುತ್ತದೆ, ಜೀವಿಸುತ್ತದೆ. ಒಂದು ದೃಷ್ಟಿಯಿಂದ ಇದೇ ಚೆನ್ನು ಎನ್ನಿಸುತ್ತದೆ.

ಎರಡನೆಯದು ಪ್ರಾಣಿವರ್ಗ, ಆಹಾರ ಸಂಪಾದನೆಗಾಗಲೀ ಊಟವನ್ನು ಅಡುಗಿಸುವುದಕ್ಕಾಗಲೀ, ಪ್ರಾಣಿಗಳು ಎಲ್ಲೆಲ್ಲೂ ಅಡ್ಡಾಡಬೇಕು, ಒದ್ದಾಡಬೇಕು ; ಕೂಟದ ಅಮಲೇರಿದಾಗ, ತನ್ನವರೊಂದಿಗೆ ಕಾದಾಡಬೇಕು, ಕುಸ್ತಿ ಮಾಡಬೇಕು. ಆ ಉನ್ಮಾದದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲೂಬಹುದು. ಮುಖ್ಯವಾದ ಈ ಎರಡು ಪ್ರೇರಕಗಳಿಂದ ಊಟ ಮತ್ತು ಕೂಟ-ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಎಲ್ಲಿಯೋ ಗೋರಿಯಾಗಬೇಕು. ಪ್ರಾಣಿಗಳಲ್ಲಿ ಅತ್ಯುತ್ತಮನೆಂದು ಕೊಂಡಿರುವ ಮಾನವನು ಕೂಡ, 'ಗುರುಗಳಾಣತಿಯಂತೆ ಚರಿಸುತಿಹನು, ಇರಲಾಗದು ಎರಡು ದಿನವು ಒಂದೆಡೆಯೊಳು.' ಅವನು ಕೂಡ ಇತರ ಪ್ರಾಣಿಗಳೂ ದೇಹವನ್ನು ಪರದಾಡಿಸುವಂತೆ ತನ್ನ ಮನಸ್ಸನ್ನು ಯದ್ವಾತದ್ವಾ ಪರದಾಡಿಸುತ್ತಾನೆ.

ಜೀವಂತ ವಸ್ತುಗಳ ಮುಖ್ಯವಾದ ಈ ಎರಡು ಭಾಗಗಳನ್ನು ಕಂಡಾಗ, 'ನಮ್ಮಂತೆ ಗೋಳು ಕರೆಯಿಲ್ಲದೆ ನಿಮ್ಮ ರಂಗ ಅಂತ ಮರಗಿಡಗಳಂತೆ ಇದ್ದಲ್ಲೇ ಮೋಜು ಮಾಡುವುದು ಚೆನ್ನ' ಎಂದು ಮಾನವನಿಗೆ ಅನಿಸುತ್ತದೆ. ಸಸ್ಯವರ್ಗವನ್ನು ಸ್ಥಾವರ ಎಂದರು. ಪ್ರಾಣಿವರ್ಗವನ್ನು ಜಂಗಮ ಎಂದರು.

ಪ್ರಕೃತಿಯ ಪ್ರಗತಿಯ ಒಂದು ಹಂತದಲ್ಲಿ, ಮಾನವನ ವಿಚಾರಪರ ಮನಸ್ಸು ಅದ್ಭುತವಾಗಿ ಬೆಳೆಯತೊಡಗಿತು. ಅದನ್ನು ಬೆಳೆಸಿಕೊಳ್ಳುತ್ತಾ, ಮಾನವನು ಪ್ರಕೃತಿಯನ್ನೇ ಹತೋಟಿಯಲ್ಲಿಡತೊಡಗಿದ.

ಪ್ರಾಣಿಗಳಲ್ಲಿ ಅತ್ಯಂತ ನಿಸ್ಸಹಾಯಕ ಪ್ರಾಣಿ ಎಂದರೆ, ಕಾಡುಮನುಷ್ಯ ಆದಿಮಾನವ. ಆನೆಯು ತನ್ನ ಘನಪ್ರಮಾಣ, ಅದರಿಂದಾಗಿ ಲಭಿಸಿದ ಬಲದಿಂದ,