ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೨೧

ಕಾರ್ಯಮಾಡುವಂತಾಗುತ್ತದೆ. ಕಾರ್ಯವನ್ನು ಮಾಡುವ ಮನಸ್ಸಿನ ಈ ಯಂತ್ರವು ಅಣಿಯಾಯಿತು ಎನ್ನಬೇಕು. ಅನಂತರ ಆಜೀವ ಪರ್ಯಂತ ಎಂತೆಂತಹುದನ್ನೋ ಕೇಳಬೇಕು. ಅವುಗಳನ್ನೆಲ್ಲಾ ಅನುಕರಣೆ ಮಾಡಿ, ಅಥವಾ ತುಸು ಬದಲಾಯಿಸಿ ಆಡಬಹುದು. ಕಿವಿಗಳ ಮೂಲಕ ಜ್ಞಾನ ಭಂಡಾರವನ್ನು, ಮಗುವು, ಮತ್ತು ಬೆಳೆದ ವ್ಯಕ್ತಿಯೂ, ದಿನದಿನವೂ ಹೆಚ್ಚಿಸಿಕೊಳ್ಳುತ್ತದೆ. ಕಲಿತುದನ್ನು ಮಾತನಾಡಿ ಹೇಳಬಹುದು, ಅಥವಾ ಬರೆದು ತೋರಿಸಬಹುದು. ಅದೇ ರೀತಿಯಲ್ಲಿ ನೋಡಿ ಓಡಿ ಕಲಿತುದನ್ನು ಭಾಷಣ ಮಾಡಿ ಇತರರಿಗೆ ತಿಳಿಸಬಹುದು.

ಈ ಕಾರಣಗಳಿಂದ ಮೆದುಳಿನ Speech Brain ಭಾಗವು, ನೋಡುವುದು, ಬರೆಯುವುದು, ಕೇಳುವುದು, ಆಡುವುದು, ಇವೆಲ್ಲಾ ಕಾರ್ಯಗಳನ್ನು ಅನ್ವಯಿಸಿ ನಡೆಸಲು ಮೀಸಲಾಗಿದೆ.

ಈ ಅವಧಿಯಲ್ಲಿ ತಾನು, ತನ್ನ ಲಂಗ, ತನ್ನ ಷರ್ಟು, ತನ್ನ ಪೆಟ್ಟಿಗೆ, ತನ್ನ ಬೊಂಬೆ, ತನ್ನ ಪುಸ್ತಕ, ಇತ್ಯಾದಿ ಇತ್ಯಾದಿಯಾಗಿ ತನ್ನತನವನ್ನು, ಬೆಳೆಸಿ ಕೊಂಡಿರುತ್ತವೆ. ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಸಾಧ್ಯವಿರದಿದ್ದರೂ, ಅಡಿಗೆಯ ಮನೆಗೆ ಕಳ್ಳತನದಲ್ಲಿ ಹೋಗಿ ಕೋಡುಬಳೆ ಚಕ್ಕುಲಿಗಳನ್ನು ಗಿಟ್ಟಿಸಿಕೊಂಡು ತಿನ್ನುವಷ್ಟು ಸ್ವಾವಲಂಬಿಯಾಗಿರುತ್ತದೆ. ಬಾಲಕೃಷ್ಣನು ಈಗ ಕಳ್ಳಕೃಷ್ಣನಾಗಿ, ಮೆರೆಯತೊಡಗುತ್ತಾನೆ. ಹಾಲನ್ನು ಕರೆದು ಹೆಪ್ಪಿಟ್ಟು, ಮೊಸರು ಮಾಡಿ, ಕಡೆದು ಬೆಣ್ಣೆಯನ್ನು ತೆಗೆಯುವ ವಯಸ್ಸಾಗಲೀ ಅನುಭವವಾಗಲೀ ಬಾಲಕೃಷ್ಣನಿಗೆ ಇರುವುದಿಲ್ಲ. ಆದರೆ ಹಾಲನ್ನು ಕರೆಯುತ್ತಿರುವ ಗೋಪಿಯರನ್ನು ಕಾಡಿಬೇಡಿ, ಕಣ್ಣು ಮರೆಸಿ ಹಾಲನ್ನು ಕುಡಿಯುತ್ತಾನೆ. ಮೊಸರನ್ನು ಕುಡಿಯುತ್ತಿರುವ, ಹಸಿರು ಪಟ್ಟಿಯನ್ನುಟ್ಟ ಗೋಪಿಯರನ್ನು ಗೋಳಾಡಿಸಿ ಬೆಣ್ಣೆಯನ್ನು ಗಿಟ್ಟಿಸಿಕೊಂಡು ಮೆಲ್ಲುತ್ತಾನೆ. ತಾಯಿ ಯಶೋದೆಯನ್ನನಕ ಮರುಳುಮಾಡಿ ಬೆಣ್ಣೆ ಹಾಲುಗಳನ್ನು ಲಪಟಾಯಿಸುತ್ತಾನೆ. ಭಾಗವತನ ಬಾಲ ಕೃಷ್ಣನ ಆಟವನ್ನು ಬೆಳೆಯುತ್ತಿರುವ ಬಾಲಕರಲ್ಲಿಯೂ ಕಣ್ಣಾರ ಕಾಣಬಹುದು ಈಗಲೂ, ಕಂತೆ ಪುರಾಣ ಎನ್ನಿಸಿಕೊಂಡ ಕತೆಗಳಲ್ಲಿ ಇಂದಿನ ಜನರ ಸಂತೆ ಜೀವನದ ಸ್ಪಷ್ಟ ಚಿತ್ರಗಳನ್ನು ಕಾಣಬಹುದು.

'ತನ್ನ' ತನವನ್ನು, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಲ್ಯ ಇತ್ಯಾದಿ ಮಿತ್ರ ಷಡ್ವರ್ಗದಿಂದ ಮಗುವು ಬೆಳೆಸಿಕೊಂಡು, ಮಗುವು ಬಾಲಕನಾಗುತ್ತಾನೆ. ಈ ವಯಸ್ಸಿಗೆ 'ನಾನು,' 'ನನ್ನದು' ಎನ್ನುವ ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುತ್ತದೆ. Ego-Concept ಎಂದು ಈ ಮಾನಸಿಕ