ಮನಮಂಥನ
ಕಲ್ಪನೆಯನ್ನು ಹೆಸರಿಸಿದ್ದಾರೆ.
ಬಾಲ್ಯದ ಈ ವಯಸ್ಸಿನಲ್ಲಿ, ಹಸಿವು ಬಾಯಾರಿಕೆಗಳು, ಶೈಶವದಲ್ಲಿದ್ದಂತೆಯೇ ಕಾಡುತ್ತವೆ. ಆದರೆ ಶೈಶವದಲ್ಲಿ ಇವುಗಳನ್ನು ತೀರಿಸಿಕೊಳ್ಳಲು ಅಳುವೊಂದೇ ಸಾಧನವಾಗಿತ್ತು. ಈಗ, ಕ್ರೋಧ ಪ್ರದರ್ಶನದಿಂದ, ಹಟಮಾಡಿ, ಚಂಡಿ ಹಿಡಿದು, ಸಿಕ್ಕಿದುದನ್ನೆಲ್ಲಾ ಒಡೆದು ಹರಿದು, ತನಗೆ ಇಷ್ಟವಾದ ಬಿಸ್ಕತ್ ಅಥವಾ ಸೀದೇ ಕಾಯಿಗಳನ್ನು ಗಿಟ್ಟಿಸಿಕೊಳ್ಳುತ್ತಾನೆ. ಆಹಾರವು ಈಗ ಊಟ ತಿಂಡಿ ಎಂದು ಪರಿವರ್ತನೆಯಾಗತೊಡಗುತ್ತದೆ. ರುಚಿ, ಇಷ್ಟ, ಇವೆಲ್ಲವೂ ಅಗತ್ಯವಾದ ಆಹಾರದೊಂದಿಗೆ ಕೂಡಿಕೊಂಡರೆ, ಊಟ, ತಿಂಡಿಗಳಾಗುತ್ತವೆ. ತುಂಬಾ ಹಸಿವಾದಾಗ, ಬಡತನದಿಂದ, ಬಯಸಿದ್ದು ದೊರಕದೆ ಇದ್ದಾಗ, ಸಿಕ್ಕಿದುದನ್ನು ಮುಕ್ಕಿ ಬಾಲಕನು ತೃಪ್ತಿಗೊಳ್ಳುತ್ತಾನೆ. ಸ್ವಲ್ಪ ಮಟ್ಟಿಗೆ ಹಸಿವಾದಾಗ ಇಷ್ಟಪಟ್ಟ ರುಚಿಯಾದ ತಿಂಡಿಯು ದೊರಕುವಂತಿದ್ದರೆ, ಅದಕ್ಕಾಗಿ ಹಟ ಹಿಡಿಯುತ್ತಾನೆ, ತಾಯಿ ಕೊಟ್ಟಿದುದನ್ನು ತಿನ್ನುವುದೇ ಇಲ್ಲ. ತನಗೆ ಬೇಕಾದುದು, ತನಗೆ ಇಷ್ಟವಾದುದು,ಇವುಗಳನ್ನು ಪಟ್ಟು ಹಿಡಿದು ಗಮನಿಸುತ್ತಾನೆ. EGO ಈಗ ಸ್ಥಿರವಾಗತೊಡಗುತ್ತದೆ.
ಮನೆಯಲ್ಲಿ ಹಿರಿಯರ ನಡವಳಿಕೆಯನ್ನು ಬಾಲಕನು ನೋಡುತ್ತಿರುತ್ತಾನೆ. ಅದರಂತೆಯೇ ತಾನೂ ಆಡತೊಡಗುತ್ತಾನೆ. ಮಾಡತೊಡಗುತ್ತಾನೆ. 'ಇದು ಮಡಿ, ಮುಟ್ಟಬೇಡ' 'ಕೈಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಕುಳಿತುಕೋ' 'ಎಂಜಲ ಕೈಯಲ್ಲಿ ಏನನ್ನೂ ಮುಟ್ಟಬಾರದು' ಇತ್ಯಾದಿ ಶಿಕ್ಷಣವನ್ನು ಪಡೆಯುತ್ತಾನೆ. ಆಗ ಅವನ ಮನಸ್ಸಿನಲ್ಲಿ, ಅನುಭವದಿಂದ ಮೂಡಿ ಬಂದ, ನಿರ್ಧಾರವು ರೂಪುಗೊಳ್ಳುತ್ತದೆ. 'ಹೀಗೆ ಮಾಡಿದರೆ ತಪ್ಪು, ಹಿರಿಯರು ಶಿಕ್ಷಿಸುತ್ತಾರೆ, ರೇಗುತ್ತಾರೆ. ಬದಲು ಹಾಗೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ, ಆದರಿಸುತ್ತಾರೆ, ಹೊಗಳುತ್ತಾರೆ. ಇದು ಹಿರಿಯರಿಗೆ ಒಪ್ಪುವ ಮಾರ್ಗ' ಎಂದು ಬಾಲಕನು ಅರಿತುಕೊಳ್ಳುತ್ತಾನೆ. 'ತಪ್ಪು ಒಪ್ಪು ; ಪಾಪ ಪುಣ್ಯ ; ಒಳ್ಳೆಯದು ಕೆಟ್ಟದ್ದು ; ಸನ್ಮಾರ್ಗ ದುರ್ಮಾರ್ಗ ;' ಇಂತಹ ಕಲ್ಪನೆಗಳು ಬಾಲಕನ ಮನಸ್ಸಿನಲ್ಲಿ ಬೇರೂರಿ ಬೆಳೆಯುವುದನ್ನು Building the Super-EGO ಎಂದನ್ನುತ್ತಾರೆ.
ಬಾಲಕನ ದೇಹವು ಸಾಕಷ್ಟು ಹೊರವಾಗಿ ಬೆಳೆಯುತ್ತಿರುತ್ತದೆ. ದೇಹಕ್ಕೆ ಅಗತ್ಯವಾದ, ಹಾಗೂ ಮನಸ್ಸಿನಲ್ಲಿ ಆ ವೇಳೆಗೆ ಬೆಳೆದು ಬಂದ ರುಚಿಗೆ ಅನುಗುಣವಾಗಿ, ಊಟ ತಿಂಡಿಗಳನ್ನು, ಬಾಲಕನ ಮನಸ್ಸು ಸ್ವಾಭಾವಿಕವಾಗಿ ಬಯಸುತ್ತದೆ. 'ಉಳಿದ ಬಾಲಕರಿಗಿಂತ ಅಂದವಾದ ಉಡುಪನ್ನು ನಾನು ಧರಿಸಿ ಮೆರೆಯಬೇಕು ; ಆಟದಲ್ಲಾಗಲೀ ಪಾಠದಲ್ಲಾಗಲೀ ಸಹಪಾಠಿಗಳಿಗಿಂತ