೩೨೩
ಮುಂದುವರೆಯಬೇಕು, ಅವರನ್ನು ಸೋಲಿಸಿ ಜಯಗಳಿಸಬೇಕು' ಎಂದು ಅವನ ಮನಸ್ಸು ಆಶಿಸುತ್ತದೆ. ಇವೆಲ್ಲಾ ಕಾಮ್ಯವಾದುವುಗಳು. ಆಜನ್ಮಸಿದ್ಧವಾಗಿ, ಜನ್ಮ ಜನ್ಮಾಂತರಗಳಿಂದ ದೊರೆತ ಪ್ರಕೃತಿಯ ಸ್ವಭಾವ, ತನಗೆ ರುಚಿ ಕಂಡ, ತನ್ನ ಇಷ್ಟಗಳನ್ನು ಈಡೇರಿಸುವ, ಯಾವುದನ್ನಾದರೂ ಪಡೆಯಲೇಬೇಕು ಎಂದು ಬಾಲಕನ ಮನಸ್ಸಿನಲ್ಲಿ ಹುಟ್ಟಾಸೆಯು ಇದ್ದೇ ಇರುತ್ತದೆ. ಇದನ್ನು ಎಂದು ID ಕರೆಯುತ್ತಾರೆ. ಪ್ರಾಣಿಗಳಲ್ಲಿ ಬಾಲಕನಲ್ಲಿದ್ದಂತೆಯೇ ID ಬಲಯುತವಾಗಿರುವ ಮನಸ್ಸಿನ ಒಂದು ಶಕ್ತಿ. ಸಾರಾಂಶವೇನೆಂದರೆ, ಬಾಲಕನ ಮನಸ್ಸಿನಲ್ಲಿ : ID ಎಂಬ ಶಕ್ತಿಯು ಸ್ವಂತ ಕಾವ್ಯಗಳನ್ನು ಈಡೇರಿಸು ಎಂದು ಜುಲುಂ ಮಾಡುವ, ಸಾಕಷ್ಟು ಪುರಾತನವಾದ, ಪ್ರೇರಕವಾಗಿದೆ.
ID ಇನ ಇಷ್ಟಗಳನ್ನು ಈಡೇರಿಸುವ ಶಕ್ತಿಯು, ಬಾಲಕನ ಮನಸ್ಸಿನಲ್ಲಿ 'ನಾನು' ; 'ನನ್ನ ಇಷ್ಟ' ಎಂಬ EGO ಕಲ್ಪನೆಯನ್ನು ತನ್ನತ್ತ ಸೆಳೆಯುತ್ತದೆ. EGO ಕಲ್ಪನೆಯು ID ಇನ ಅಹವಾಲುಗಳನ್ನು ಪೂರೈಸಿದರೆ, ತೃಪ್ತಿಗೊಂಡು ID ತೆಪ್ಪಗಾಗುತ್ತದೆ. ಆಗ EGO ವಿಗೂ ನೆಮ್ಮದಿಯಾಗುತ್ತದೆ.
ತನ್ನ ಇಷ್ಟದಂತೆ ನಡೆದುಕೊಂಡರೆ, ಹಿರಿಯರು ಬಾಲಕನು ತಪ್ಪು ಮಾಡಿದ ಎಂದು ಶಿಕ್ಷಿಸುತ್ತಾರೆ. ಅವರು ಒಪ್ಪುವಂತೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ; ಎನ್ನುವ Super-Ego ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಬೇರೂರತೊಡಗುತ್ತದೆ. ದೃಢವಾಗತೊಡಗುತ್ತದೆ. ತಾನಿರುವ ಪರಿಸರದ ಹಿತಕ್ಕಾಗಿ, ಹಾಗೂ ನೆಮ್ಮದಿಗಾಗಿ, 'ತನ್ನ' ಇಷ್ಟಗಳ ಈಡೇರಿಕೆಯನ್ನು ತಡೆಹಿಡಿಯುವುದು, ಅಥವಾ ಸದೆ ಬಡಿಯುವುದು, Super-Ego ವಿನ ಕಾರ ಮಾನವನ ಮನಸ್ಸಿನಲ್ಲಿ ಬೆಳೆದು ಬಂದ ಈ ಶಕ್ತಿಯನ್ನು ಸತ್-ಚೈತನ್ಯಾಂಶ ಎಂದೂ ಹೇಳಬಹುದು. Super-Ego ವನ್ನು ಸತ್- ಚೈತನ್ಯಾಂಶವೆಂದು ಕರೆದಾಗ, EGO ವನ್ನು ರಜೋ ಪ್ರಧಾನವಾದ ಕಾರ್ಯ ಪ್ರೇರಕ ಎಂದೂ ಹೇಳಬಹುದು. ಅದೇ ರೀತಿಯಲ್ಲಿ ID ಶಕ್ತಿಯನ್ನು ತಮಸ್ಸಿನ ಸೆಳೆತವೆಂದೂ ಹೇಳಬಹುದು.
ಮನಸ್ಸಿನ ಸತ್-ಚೈತನ್ಯಾಂಶವು 'ತನ್ನ' ತನವನ್ನು ಪರಿಸರದ ಹಿತಕ್ಕಾಗಿ ಬಲಿಕೊಡುವುದಕ್ಕೆ ಪ್ರಬಲವಾದ ಪ್ರೇರಕವಾಗಿರುತ್ತದೆ. 'ತನ್ನ ತನವನ್ನು ಕರಗಿಸತೊಡಗುತ್ತದೆ.
ಈ ಲೋಕದ, ಈ ಜನ್ಮದ ಬಾಳಿಗೆ ಅಗತ್ಯವಾದ ಕಾರ್ಯಗಳನ್ನು ಮಾಡುವ ರಜೋ ಪ್ರಧಾನವಾದ ಮನಸ್ಸಿನ ಶಕ್ತಿಯನ್ನು Ego ಎಂದನ್ನಬಹುದು. ಇದರಿಂದಲೇ ಲೌಕಿಕ ಬಾಳು.