೩೩೩
ಕಾಲೇಜಿನಲ್ಲಿ ಓದನ್ನು ಮುಂದುವರೆಸುವ ಅವಕಾಶವು ನನಗೆ ದೊರೆಯಿತು. ನಂತರ ಮೆಡಿಕಲ್ ಓದುವುದೂ ಸಾಧ್ಯವಾಯಿತು. ಕಾಲೇಜು, ಓದು, ಈ ತಕರಾರುಗಳಲ್ಲಿ ರಾಮನಾಥಯ್ಯನ ಸಂಪರ್ಕವು ಬಹಳ ಕಡಿಮೆಯಾಯಿತು.
ಹಲವಾರು ವರ್ಷಗಳಾದ ಮೇಲೆ, ಕಾರಿನಲ್ಲಿ ಹೋಗುತ್ತಿದ್ದಾಗ, ಹಾದಿಯ ಬಳಿಯಲ್ಲಿ ಅವ ನಿಂತಿದ್ದುದು ಕಾಣಿಸಿತು. ಅವನ ಬಳಿ ಕಾರನ್ನು ನಿಲ್ಲಿಸಿದೆ. ಎಲ್ಲಿಗೆ ಹೋಗಬೇಕೋ, ಹೇಳು ಅಲ್ಲಿಗೆ ಕರೆದುಕೊಂಡು ಹೋಗಿ ತಲಪಿಸುತ್ತೇನೆ. ಬಸ್ಸಿಗೆ ಕೊಡುವ ಛಾರ್ಜನ್ನು ನನಗೆ ಕೊಡು ಎಂದು ಕೇಳುವುದಿಲ್ಲ. ಧೈರ್ಯವಾಗಿ ಬಂದು ಕೂತುಕೋ ಎಂದನ್ನುತ್ತಾ ಬಾಗಿಲನ್ನು ತೆಗೆದೆ. ಕಾರಿನೊಳಗೆ ಕೂತುಕೊಂಡ. 'ಆಸ್ಪತ್ರೆಗೆ ನೀನು ಹೋಗುತ್ತಾ ಇರಬಹುದು. ಎದುರಿನಲ್ಲೇ ಮಾರ್ಕೆಟ್, ಅಲ್ಲಿಗೆ ಹೋಗ್ತಾ ಇದ್ದೀನಿ. ಅಂದರೆ ನಿನಗೆ ಹೆಚ್ಚು ತೊಂದರೆಯಾಗುವುದಿಲ್ಲ. ಬಸ್ ಛಾರ್ಜ್ ನೀನು ಕೇಳುವಂತಿಲ್ಲ. ಏಕೆಂದರೆ ಪೋಲೀಸ್ ಇಂತಹ ಕಾನೂನಿನ ಪ್ರಕಾರ ಲೈಸೆನ್ಸ್ ಪಡೆಯದೆ, ಬಾಡಿಗೆಗೆ ಕಾರನ್ನು ಉಪಯೋಗಿಸಿದರೆ, ನಿನಗೆ ಶಿಕ್ಷೆ ಆಗುತ್ತೆ ಎಂದ.'
'ನಲವತ್ತರ ಮುಪ್ಪಲ್ಲೋ ನಿನಗೆ, ಆದರೂ ನಾಲಿಗೆಯ ಹುಳಿ ಮಾತಿಗೆ, ಮುಪ್ಪೇ ಬಂದಿಲ್ಲವಲ್ಲೋ' ಎಂದೆ. ನಂತರ ಯೋಗಕ್ಷೇಮವನ್ನು ವಿಚಾರಿಸಿದೆ. ತಮ್ಮಂದಿರು ತಂಗಿಯರು, ಅವರನ್ನು ಒಂದು ರೀತಿಯಲ್ಲಿ ಸೆಟಲ್ ಮಾಡಿದ್ದಾಯಿತು. ಕಚೇರಿಯ ಸರ್ಕಾರೀ ಪರೀಕ್ಷೆಗಳನ್ನು ಪ್ಯಾಸುಮಾಡಿ ಈಗ ಸೂಪರಿಂಟೆಂಡೆಂಟ್, ಆಗಿದ್ದೇನೆ. ನನ್ನ ಕೈ ಕೆಳಗೆ ಆರು ಗ್ರಾಜುಯೇಟುಗಳು ಕ್ಲಾರ್ಕ್‌ಗಳಾಗಿದ್ದಾರೆ. ಅದೇ ನನಗೆ ಸಂತೋಷ' ಎಂದ. 'ಅಷ್ಟೇನೇ ಸಂತೋಷ ! ಹೆಂಡತಿ ಮಕ್ಕಳು ಇತ್ಯಾದಿ ಸಂತೋಷಗಳು ? ಎಂದೆ. ಅವೆಲ್ಲಾ ಸಂತೋಷವನ್ನು ನೀಡುವಂತಹುದಲ್ಲ. ನನಗೆ ಮಾಡಬೇಕಾದ ಕರ್ತವ್ಯ ಅನುಭವಿಸಲೇಬೇಕಾದ ಪ್ರಾರಬ್ಧ ಎಂದ. 'ಇದೇನೋ ಹೀಗಂತಿ : ರಸಿಕಾಗ್ರೇಸರ ನೀನು. ಹೈಸ್ಕೂಲು ಕಾಂಪೌಂಡಿನಲ್ಲಿ ರಾಸಕ್ರೀಡೆಯನ್ನು ಆಡುತ್ತಿದ್ದ ರಾಸಭಗಳನ್ನು ಕುರಿತು ಭಾವಗೀತೆಯನ್ನು ಬರೆದವನಲ್ಲವೇನೋ?' ಇಷ್ಟರಲ್ಲೇ ಏನು ಬಂತೋ ವೇದಾಂತ, ಪ್ರಾರಬ್ಧ ಇತ್ಯಾದಿ : ಈಗ ಸೂಪರಿಂಟೆಂಡೆಂಟ್, ಅಂದಮೇಲೆ ಕೈ ತುಂಬಾ ಸಂಬಳ ಬರುತ್ತಿರಬೇಕು. ಈ ವಯಸ್ಸಿನಲ್ಲೇ ಮಜಾ ಮಾಡಬೇಕು, ಅತಿಯಾದ ಉದ್ವೇಗವಿಲ್ಲದೆ' ಎಂದೆ. 'ನನ್ನ ಹೆಂಡತಿಗೆ ಮೂರು ವರ್ಷಗಳಿಂದಲೂ ಕ್ಷಯ. ಸ್ಯಾನಿಟೇರಿಯಂನಲ್ಲಿ ಸೇರಿಸಿದ್ದೇನೆ. ಬಂದ ಸಂಬಳ ಬರಬಹುದಾದ ಇನ್ನಿಮೆಂಟ್ ಇವೆಲ್ಲವೂ ಔಷಧಿ ಪಥ್ಯಕ್ಕೆ ಸಾಲುವುದಿಲ್ಲ' ಎಂದ.