ಮನಮಂಥನ
ಮೂರು ಗುಣಗಳು ಇರಲೇಬೇಕು. ಆದರೆ ಸಮತೋಲನವಾಗಿರಬೇಕು. ಆಗ ಬಾಳು ಹಸನಾಗುತ್ತದೆ.
ವಿಶಾಲಬುದ್ಧಿಯ ವ್ಯಾಸರು ಗೀತೆಯಲ್ಲಿ ಇದನ್ನು ಹೀಗೆ ವಿವರಿಸಿದರು : ಸತ್ವ ರಜಸ್ ತಮ ಇತಿ ಗುಣಾ ಪ್ರಕೃತಿಸಂಭವಾ : ನಿಬಂಧಂತಿ ಮಹಾಬಾಹೋ ದೇಹೀ ದೇಹಿನಮವ್ಯಯಂ(೧೪-೬)
ಸತ್ವ ರಜಸ್ ತಮೋ ಗುಣಗಳು ಅವಿನಾಶಿಯಾದ, ಅವ್ಯಯವಾದುದನ್ನು ದೇಹದಲ್ಲಿಬಂಧಿಸುತ್ತವೆ. ನಂತರವೇ ಮನುಷ್ಯನ ಬಾಳು ಮತ್ತು ಗೋಳು.
Id ಇನಿಂದ ಮನುಷ್ಯನ ಕಾಮನೆಗಳು ಹೊರ ಹೊಮ್ಮುವುವು. Id ಇನ ಮೇಲೆ ಮನಸ್ಸು ಹಿಡಿತವನ್ನು ಒಂದು ಪ್ರಮಾಣದಲ್ಲಿ ಸಾಧಿಸಬಹುದು. ಆದರೆ ಅದನ್ನು ಸಂಪೂರ್ಣವಾಗಿ ನಾಶಮಾಡಲು ಅಶಕ್ಯ. Id ಅನ್ನು ನಾಶಮಾಡಬೇಕು ಎಂದು ಹಂಬಲಿಸುವವರು ಹುಟ್ಟಲೇಬಾರದು. ಆಗ ಅವರ ಆಶಯವು ನೆರವೇರುತ್ತದೆ.
ಈ ಅರ್ಥದಲ್ಲಿ ನಮ್ಮ ಪೂರ್ವಿಕರು, ಜನನ-ಮರಣದ ವಿಷಚಕ್ರದಿಂದ ಪಾರಾಗುವುದೇ ಮೋಕ್ಷ, ಆಗ ತ್ರಿಗುಣಾತೀತರಾಗಬಹುದು. ಇದೇ ಬಾಳಿನ ಹಿರಿಯ ಗುರಿ; ಎಂದರು.
Ego ಸಾಕಷ್ಟು ದೃಢವಾಗಿರದಿದ್ದರೆ, ರಜೋಗುಣವು ನಿರ್ಬಲವಾಗಿರುತ್ತದೆ. ಸಮಾಜದಲ್ಲಿ ಸ್ಪರ್ಧೆಯನ್ನೆದುರಿಸಿ, ತಲೆಯನ್ನು ಎತ್ತಿ ನಿಲ್ಲಬೇಕಾದರೆ, ರಜೋಗುಣವು ಪ್ರಬಲವಾಗಿರಬೇಕು. Ego-Drive ಎಂಬ ಈ ಪ್ರೇರಕವು ಬಲವಾಗಿದ್ದರೆ, ಬಾಳಿನಲ್ಲಿ ಲೌಕಿಕ ಜಯವನ್ನು ಗಳಿಸಬಹುದು. ಇದು ನಿರ್ಬಲವಾಗಿದ್ದರೆ, ಗಾಣದ ಎತ್ತುಗಳಂತೆ ಸುತ್ತಿ ಸುತ್ತಿ ನಡೆಯಬೇಕು, ಗೊತ್ತಿಲ್ಲ. ಗುರಿಯಿಲ್ಲ. ಸಾವಿರಕಾಲುಗಳಂತೆ ಹರಿದಾಡಬೇಕು. ತಲೆಯನ್ನೆತ್ತುವಂತೆಯೇ ಇಲ್ಲ.
Ego-Drive Id ಇನ ಸೆಳೆತಕ್ಕೆ ಒಲಿದರೆ, ಶ್ವೇಚ್ಛಾಚಾರಿಯಾಗುವುದರಲ್ಲಿ ಅವ ಯಶಸ್ವಿಯಾಗುತ್ತಾನೆ. ಪುಂಡು ಪೋಕರಿಯಾದರೂ ಪ್ರಖ್ಯಾತನಾಗುತ್ತಾನೆ. ಕಾಲಕ್ಕೆ ತಕ್ಕಂತೆ ಡಕಾಯಿತನೋ, ಅಧಿಕಾರ-ಶಾಹೀ ರಾಜಕಾರಿಣಿಯೋ ಆಗುತ್ತಾನೆ.
Ego-Drive Super-Ego ವಿನ ಪ್ರಭಾವಕ್ಕೆ ಒಳಗಾದರೆ, ಆಗ ಮನನದಲ್ಲಿ ಹಾಗೂ ಚಿಂತನದಲ್ಲಿ ಆಸಕ್ತನಾಗುತ್ತಾನೆ. Ego, ನಾನು ಎಂದರೆ ಏನು ಎಂಬ ಜಿಜ್ಞಾಸೆಯನ್ನು ಮಾಡತೊಡಗುತ್ತಾನೆ. ಮನಸ್ಸಿನಲ್ಲಿ ನೆಮ್ಮದಿಯು ಇರಬೇಕಾದರೆ, Ego ವನ್ನು ಕರಗಿಸಬೇಕು. ಆಗ Id ಮತ್ತು Super-Ego ಗಳು ಸೆಳೆತವನ್ನು ಯಾತರ ಮೇಲೆ ಪ್ರಯೋಗಿಸಲು ಸಾಧ್ಯ ? ಅವುಗಳ ಝಂಝಾಟವಿರದಿದ್ದರೆ