ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆಸೆ-ಮೂಲ ಪ್ರೇರಕ

೩೬೫

ಆಸೆಯು ಈಡೇರಬೇಕಾದರೆ, ಸುತ್ತಲಿರುವ ಪರಿಸರವು, ತಾನಿರುವ ಸಮಾಜವು ನೆರವಾಗಬೇಕು. ಈ ತೆರನ ನೆರವು ಬಯಸಿದಂತೆ ದೊರೆಯುವುದಿಲ್ಲ. ಅಂದಮೇಲೆ ನಿರಾಶೆಯು, ಆಸೆಯ ನೆರಳು. ನಮ್ಮ ನೆರಳಿನಿಂದ ಹೊರ ಜಿಗಿಯಲು ನಮಗೆ ಹೇಗೆ ಸಾಧ್ಯವಾಗುವುದಿಲ್ಲವೋ, ಹಾಗೆಯೇ, ನಿರಾಸೆಯ ನೆರಳಿನಿಂದ ಆಸೆಯೂ ಜಿಗಿದು ಹೋಗಲು ಸಾಧ್ಯವಿಲ್ಲ. ಆದುದರಿಂದಲೇ ಭಗವಾನ್ ಬುದ್ಧನು ಆಸೆಯ ಹಿಂದೆಯೇ ದುಃಖವೂ ಹಿಂಬಾಲಿಸುತ್ತದೆ ಎಂದು ನುಡಿದುದು.

ಮನಸ್ಸಿನ ವಿವಿಧ ಚಟುವಟಿಕೆಗಳಿಗೆ ಮೂಲ ಪ್ರೇರಕವಾದ ಆಸೆಯು, ಮನುಷ್ಯರಲ್ಲಿ ವಿಧವಿಧವಾಗಿರುತ್ತವೆ.

Ego-drive ನಿರ್ಬಲವಾಗಿದ್ದವರು, 'ಸಿಕ್ಕಿದ್ದನ್ನು ಬಿಡುವುದಿಲ್ಲ ; ತಂಟೆಗೆ ಸಿಗುವುದಿಲ್ಲ' ಎಂಬ ನಾಣ್ಣುಡಿಗೆ, ನಿದರ್ಶನ. ಸ್ವಲ್ಪಮಟ್ಟಿಗೆ ತಮೋಗುಣ ಪ್ರಧಾನರು ಇವರು. ಮಾನಸಿಕ ತಳಮಳವು ಇಂತಹವರಲ್ಲಿ Depression ಅಥವಾ, ಬೆಪ್ಪು, ಮಂಕು, ಜಡತೆ, ಈ ರೀತಿ ಕಾಣಿಸಿಕೊಳ್ಳುತ್ತದೆ.

Ego-drive ಸಾಕಷ್ಟು ಪ್ರಬಲವಾಗಿದ್ದವರಲ್ಲಿ, 'ಅಟ್ಟಿಸಿಕೊಂಡು ಹೋಗಿ ಗಿಟ್ಟಿಸಿಕೊಳ್ಳಲೇಬೇಕು' ಎನ್ನುವ ಹೆಬ್ಬಯಕೆಯು ಇರುತ್ತದೆ. ಆಸೆಯು ಇವರಲ್ಲಿ ಹೊರವಾಗಿದ್ದು Ambition ಎನಿಸಿಕೊಳ್ಳುತ್ತದೆ. ಫಸ್ಟ್ಬ್ಯಾಂಕ್ ಪಡೆಯುತ್ತೇನೆ, ಟೆನ್ನಿಸ್ ಚಾಂಪಿಯನ್ ಆಗುತ್ತೇನೆ, ನಟಸಾರ್ವಭೌಮನಾಗುತ್ತೇನೆ, ಜನನಾಯಕನಾಗುತ್ತೇನೆ; ಎನ್ನುವ ಉನ್ಮಾದದಂತಹ ಆಸೆಯು ಇವರನ್ನು ಪಿಶಾಚಿಯಂತೆ ಹಿಡಿಯುತ್ತದೆ. ಆದರೆ ಆಸೆಯನ್ನು ಈಡೇರಿಸುವ ಸಾಮರ್ಥ್ಯವು, ಇರುವುದಿಲ್ಲ. ಸಾಧನೆಯನ್ನೂ ಏಕಾಗ್ರ ಚಿತ್ತತೆಯಿಂದ ಮಾಡುವ ಸಂಯಮವೂ ಇರುವುದಿಲ್ಲ ಇಂತಹವರ ಮನಸ್ಸು Inature, ಅಥವಾ ಶೈಶವಾವಸ್ಥೆಯಲ್ಲಿರುತ್ತದೆ. ಪಂಚಾಂಗದ ಪ್ರಕಾರದ ಅವರ ವಯಸ್ಸಿಗೂ, ಮಾನಸಿಕ ಬೆಳವಣಿಗೆಯ ಹಂತಕ್ಕೂ ಸಮನ್ವಯವೇ ಇರುವುದಿಲ್ಲ. ಹಾಗಾಗಿ ಇವರುಗಳ ಮನಸ್ಸಿನ ತಳಮಳವು, ಮನಸ್ಸನ್ನು ಛಿದ್ರಗೊಳಿಸುತ್ತದೆ. ಆಸೆಯ ಲೋಕದಲ್ಲಿ ಬಹಳಷ್ಟು ವಿಹರಿಸುತ್ತಾರೆ, ವಾಸ್ತವಿಕ ಲೋಕದ ಅರಿವು ಮಸುಕಾಗತೊಡಗುತ್ತದೆ. Schizo-Phrenia, ಅಥವಾ ಹುಚ್ಚಿನ ಬೇನೆಗಳಿಂದ ಇವರುಗಳು ನರಳುವುದು ಹೆಚ್ಚು. ಇದರಲ್ಲಿಯೂ ಹಲವಾರು ವಿಧಗಳಿರುತ್ತವೆ. ಎಲ್ಲರೂ ನನ್ನ ಶತ್ರುಗಳು ಎನ್ನುವ ಪ್ಯಾರನ್ಯಾಯ್‌ ಪಿಶಾಚಿಯು ಕೆಲವರನ್ನು ಕಾಡುತ್ತದೆ. ದೇಹವನ್ನು ವಕ್ರವಕ್ರವಾಗಿ ಜಗ್ಗಿಸಿ ನಿಲ್ಲಿಸುವ ಕ್ಯಾಟಟೋನಿಕ್ ದೆವ್ವಗಳು ಕೆಲವರನ್ನು ಅಮರಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಬಿಫೋನಿಕ್ ಭೂತವು ಹಲವರಲ್ಲಿ ಚೇಷ್ಟೆಯಾಡುತ್ತದೆ. ಮತ್ತೂ ಕೆಲವು ಬ್ರಹ್ಮ ರಾಕ್ಷಸಗಳು