ಅವ ತುಸು ತೃಪ್ತಿಯನ್ನು ಅನುಭವಿಸಬಹುದು.
೫. ಹಸ್ತ ಸಾಮುದ್ರಿಕನ ಬಳಿಗೆ ಹೋಗಿ ಅಂಗೈ ರೇಖೆಗಳನ್ನು ತೋರಿಸಿ ಇನ್ನೂ ಅರು ತಿಂಗಳುಗಳಾದ ಮೇಲೆ ಸಿನಿಮಾ ತಾರೆಯನ್ನೋ ರಾಜನ ಮಗಳನ್ನೋ ಸಂಗೀತ ವಿದುಷಿಯನ್ನೋ ಮದುವೆಯಾಗುವ ಯೋಗವು ಇದೆ' ಎಂದು ಅವ ಭವಿಷ್ಯವನ್ನು ಹೇಳಿದರೆ, ಹುದುಗಿದ್ದ ಆಸೆಯು ತುಸು ಸಾಂತ್ವನಗೊಳ್ಳುತ್ತದೆ. ಜಾತಕವನ್ನು ನೋಡುವವರನಕ 'ಇನ್ನೊಂದು ಎಂಟು ತಿಂಗಳಲ್ಲಿ ಗುರು ಉಚ್ಚನಾಗುತ್ತಾನೆ. ಶುಕ್ರ ಸ್ವಸ್ಥಾನಕ್ಕೆ ಬರುತ್ತಾನೆ. ಅನಿರೀಕ್ಷಿತವಾಗಿ ನಿಮಗೆ ಅಪ್ಸರೆಯೇ ದೊರೆಯುತ್ತಾಳೆ. ಮೇಲೆ ಬಿದ್ದುಕೊಂಡು ಬಂದು ಮದುವೆಯಾಗುತ್ತಾಳೆ' ಎಂದು ಹೇಳಿದರು, ಅನ್ನಿ, ಇದನ್ನು ಸಂಪೂರ್ಣವಾಗಿ ನಮ್ಮ ತರುಣ ನಂಬದೆ ಇದ್ದರೂ, ಗ್ರಹಗತಿಯು ಚೆನ್ನಾಗಿದ್ದರೆ ಬಯಸಿದ್ದೆಲ್ಲಾ ನನಸಾಗಬಹುದು ಎಂದು ಕಿಂಚಿತ್ತಾದರೂ ಸುಖಪಡುತ್ತಾನೆ. ಅಷ್ಟರ ಮಟ್ಟಿಗೆ ಅವನ ಆಸೆಯು ಪೂರೈಸಿರುತ್ತದೆ. ಎಂಟು ತಿಂಗಳ ಕಾಲ ಸ್ವಲ್ಪ ಹುಮ್ಮಸ್ಸಿನಿಂದಲೇ ಇರುತ್ತಾನೆ. ಅಷ್ಟು ಕಾಲವಾದರೂ ಆಸೆಯು ಈಡೇರಬಹುದು ಎಂದು ಭುಜ ಹಾರಿಸುತ್ತಾನೆ.
೬. ಕಲಾಕಾರನಾಗಿದ್ದರೆ, ಆ ತರುಣ ಸಿನಿಮಾ ತಾರೆಯನ್ನು ಕುರಿತು ಪ್ರೇಮ ಗೀತೆಗಳನ್ನು ಬರೆದು ಆಸೆಯನ್ನು ಆರೀತಿ ಪರಿವರ್ತಿಸಿ ಪೂರೈಸಬಹುದು. ವರ್ಣಚಿತ್ರಕಾರನಾಗಿದ್ದರೆ, ತಾರೆಯ ವರ್ಣಚಿತ್ರವನ್ನು ಬರೆದು ತೃಪ್ತಿಪಡಬಹುದು. ಶಿಲ್ಪಿಯಾಗಿದ್ದರೆ, ಆಕೆಯ ಪ್ರತಿಮೆಯನ್ನು ರಚಿಸಿ, ಆ ಮೂಲಕ ತನ್ನ ಆಸೆಯನ್ನು ಪೂರೈಸಿಕೊಳ್ಳಬಹುದು. ಆಸೆಯನ್ನು ವಾಸ್ತವಿಕವಾಗಿ ಪೂರೈಸಲಾಗದಿದ್ದಾಗ, ಅದು ಕಲೆಯಲ್ಲಿ ಹೊರಹೊಮ್ಮಿ ಸಂತಸವನ್ನು ನೀಡುತ್ತದೆ : ಕಲಾಪ್ರವೃತ್ತಿಯು ಇದ್ದವರಲ್ಲಿ.
ಆಸೆಗಳ ಪೂರೈಕೆಯು ಈ ರೀತಿ ಹಲವಾರು ಚಿತ್ರ ವಿಚಿತ್ರ ಮಾರ್ಗಗಳಲ್ಲಿ ಅಷ್ಟು ಇಷ್ಟು ಆಗಬಹುದು. ವ್ಯಕ್ತಿಯ ಸಂಸ್ಕೃತಿ, ಹುಟ್ಟುಗುಣ ; ಇವು ಮಾರ್ಗಗಳನ್ನು ಆಯ್ಕೆ ಮಾಡುವುವು. ಒಬ್ಬರಿಗೆ ಸರಿ ಎನಿಸಿದ ವಿಧಾನವು ಇನ್ನೊಬ್ಬರಿಗೆ ಬೇಸರವನ್ನುಂಟು ಮಾಡಬಹುದು. ಪದ್ಯವನ್ನು ಬರೆದು ಪ್ರೀತಿಯ ಛಟವನ್ನು ತೀರಿಸಿ ಕೊಳ್ಳುತ್ತಾನೆ, ಮಂಕ, ಎಂದು ತಮೋಗುಣ ಪ್ರಧಾನವಾದವರು ನಗಬಹುದು, ಮೂದಲಿಸಬಹುದು ವಯೂರಿಸಂ ಅಂತ ಹೇಡಿಗಳ ಹೆಗ್ಗುರುತು, ಎಂದು ರಜೋ ಗುಣ ಪ್ರಧಾನವಾದರೂ ಜುಗುಪ್ಪೆ ಪಡಬಹುದು, ಮೂರೂ ಗುಣಗಳಿಗೆ ತಕ್ಕಂತೆ ಆಸೆಗಳ ಈಡೇರಿಕೆಯು ನಡೆಯುತ್ತದೆ.