ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆಸೆಯು ನಿರಾಸಯಾದರೆ
೩೭೫

ಮೂಲಕ ಮಾಡಿಸುತ್ತದೆ. ವಿರೋಧಿಗಳನ್ನು ಮಾನಸಿಕ ರೀತಿಯಲ್ಲಿ ; ಕಾಡುವುದು; ಅವಮಾನಿಸುವುದು, ಇವೆಲ್ಲವೂ Character-Assasination ಇನ ಹಲವಾರು ಅಸ್ತ್ರಗಳು, ಆಯುಧಗಳು.

Ego ವನಕ ದೃಢವಾಗಿರುತ್ತದೆ. ಭದ್ರವಾದ ಕೋಟೆಯಾಗಿರುತ್ತದೆ. ಈ ಕೋಟೆಯನ್ನು ಜಗ್ಗಿ ಆಡಿಸುವ ಪರಮಾಧಿಕಾರವು Id ಇಗೆ ಮೀಸಲಾಗಿರುತ್ತದೆ. Id ಇನಿಂದಲೇ ಸುಖವನ್ನು ಮತ್ತು ಮನ್ನಣೆಯನ್ನು ಸಮಾಜದಲ್ಲಿ ಗಳಿಸಬಹುದು ಎಂಬ ದೃಢ ನಂಬಿಕೆಯು ಇಂತಹವರ Egoಕ್ಕೆ ಇರುತ್ತದೆ. Ego ಕೋಟೆಗೆ Id ಕಂದುಕವೇ ಸಾಕ್ಷಿ ; ಮತ್ತು ರಕ್ಷಣೆ.

Id ಮತ್ತು Ego ; ತಮೋಗುಣ, ಮತ್ತು ರಜೋಗುಣ ; ಇವೆರಡೂ ಒಂದಕ್ಕೊಂದು ನೆಂಟಾಗಿ ಗಂಟು ಹಾಕಿಕೊಂಡಾಗ, ಲೌಕಿಕದಲ್ಲಿ ಸುಖವನ್ನು ಅನುಭವಿಸಬಹುದು. ಸುಖವನ್ನು 'ತಾನು' ಅನುಭವಿಸಲಾಗದಿದ್ದರೆ, ಇತರರಿಗೆ ಕಷ್ಟವನ್ನು ಕೊಟ್ಟು, ಅವರನ್ನು ವಿನಾಕಾರಣ ಕೊರಗಿಸಿ ಆ ಮೂಲಕ ತುಸು ಸಮಾಧಾನವನ್ನು ಪಡೆಯಬಹುದು.

Super-Ego ಅಥವಾ ಸತ್-ಚೈತನ್ಯಾಂಶವು ಇಂತಹವರಲ್ಲಿ ದೃಢವಾಗಿ ಬೆಳೆದಿರುವುದಿಲ್ಲ. Ego ಕಲ್ಪನೆಯು ಕಲ್ಲಿನ ಸುದೃಢ ಕೋಟೆಯಂತೆ Super- Ego ವನ್ನು ಮುತ್ತಿ ಮರೆಮಾಚಿ ಬಿಡುತ್ತದೆ. ಆದುದರಿಂದಲೇ ನಿರಾಸೆಯು ತೀವ್ರವಾದಾಗ, ಮನಸ್ಸು ವಕ್ರಗತಿಯಲ್ಲಿ ನಡೆದು, ಸಮಾಜ ವಿರೋಧಕ ಅಪರಾಧಗಳನ್ನು ಮಾಡಿಸುತ್ತದೆ. ಹಾಗೆ ವರ್ತಿಸಿದಾಗ ಅವರುಗಳ Ego ವಿಗೆ ಸ್ವಲ್ಪ ಸಮಾಧಾನವುಂಟಾಗುತ್ತದೆ. ಈ ವರ್ತನೆಯನ್ನು ಅಭ್ಯಾಸ ಮಾಡಿಕೊಂಡುಬಿಟ್ಟರೆ, ಅನಂತರ ಯಾವ ಶಿಕ್ಷಯೂ ಅವರನ್ನು ಸಭ್ಯವರ್ತನೆಯತ್ತ ತಿರುಗಿಸಲಾರದು. Habitual Offenders ಆಗಿ ಬಿಡುತ್ತಾರೆ. ಎಂತಹ ಕಠಿಣ ಶಿಕ್ಷೆಯೂ ಇವರಲ್ಲಿ 'ಶಿಕ್ಷಣ' ವಾಗುವುದಿಲ್ಲ. ಮಾನಸಿಕ ದೃಷ್ಟಿಯಿಂದ ಇವರು ಮನೋರೋಗಿಗಳು. ಶಿಕ್ಷೆಯನ್ನು ತಪ್ಪಿಸಿ ಸೂಕ್ತ ರೀತಿಯ ಶಿಕ್ಷಣವನ್ನು ಕೊಡುವುದರಿಂದ ಇವರುಗಳ ಸ್ವಭಾವವನ್ನು ಸಾಕಷ್ಟು ಮಟ್ಟಿಗೆ ಪರಿವರ್ತಿಸಬಹುದು.