ಅದರ ಸ್ಮರಣೆಯನ್ನು ಮಾಡಿಕೊಳ್ಳುವುದು. ಅತ್ಯಂತ ದುಃಖವೂ ಹೌದು ಅತ್ಯಂತ ಹಿತವೂ ಹೌದು. ಬಾಳ ಮೂಲವಾದ ತೌರಿಗೆ ಹೋದ ಮೇಲೆ ಸರ್ವಕಾಮಗಳೂ ಫಲಿಸಿದಂತೆಯೇ ! ಸುರಭಿಯು ಮನಸ್ಸಿನಲ್ಲಿ ಪ್ರತ್ಯಕ್ಷವಾದಾಗ, ಆದಿ ಮೂಲದ ತೌರಿನ ಸ್ಮರಣೆಯು ಚಿಗುರುತ್ತದೆ.
೧೦, ೧೧. ಚತುರ್ದಂತಿ ಮಹಾಗಜವು ; ಮತ್ತು ಕಾಮವೃಕ್ಷ ಅಂದರೆ ಬೇಡಿದುದನ್ನು ನೀಡುವ ಕಲ್ಪತರು, ತೇಲಿ ಬಂದುವಂತೆ Dinosauras, ಮುಂತಾದ ಮಹಾಕಾಯಗಳೂ ಪ್ರಕೃತಿಯ ಜೀವನ ಪ್ರಗತಿಯಲ್ಲಿ ಕಂಡುಬಂದುವು. ಆಗ ಗಜಗಳಿಗೆ ನಾಲ್ಕು ದಂತಗಳೂ ಇದ್ದುವು. ನಂತರ ಕಾಮವೃಕ್ಷವು ಕಾಣಿಸಿತು.
ಮನಸ್ಸು ಬೆಳೆಯತೊಡಗಿದಾಗ ಮಹಾಶಕ್ತಿಯನ್ನು ಸಂಪಾದಿಸಿಕೊಂಡಾಗ, ಚತುರ್ದಂತಿಗಳಂತೆ ಏನೆಲ್ಲವನ್ನೂ ಗೆಲ್ಲಬಹುದು, ವಶಪಡಿಸಿಕೊಳ್ಳಬಹುದು, Right of might ಇದ್ದಾಗ ಕಾಮವೃಕ್ಷ ಕರಗತವಾಗದಂತೆಯೇ ! God is always on the side of the stronger army. ಎನ್ನುವುದು ಈ ಕಾರಣದಿಂದಲೇ. ಚಂದ್ರನ ಮೇಲೆ ಅಡಿಯಾಡಿಸಬಹುದು.
೧೨. ಅಪ್ಪರ ಗಣವು ತದನಂತರ ತೇಲಿ ಬಂದುವಂತೆ. ಕಣ್ಣಂಚಿನ ಕ್ರೂರ ನೋಟವು, ಎಂತಹ ಧಾಂಡಿಗನನ್ನೂ ಈಟಿಗಿಂತಲೂ ಪರಿಣಾಮಕಾರಿಯಾಗಿ ಇರಿಯ ಬಲ್ಲುದು. ಅಪ್ಸರೆಯರು ಸರಸ್ಸಿನಲ್ಲಿ ಹುಟ್ಟಿ ಬಂದವರು. ಜಲಕನೈಯರಂತೆಯೇ ಜಲಕ್ರೀಡೆಯನ್ನು ಆಡಬಲ್ಲರು. ರತಿಯಂತೆಯೇ ರತಿಕ್ರೀಡೆಯನ್ನು ಆಡಬಲ್ಲರು. ಏನೇನನ್ನು ಮಾಡಿದರೂ ಕನ್ಯಾವಸ್ಥೆಯನ್ನು ಉಳಿಸಿಕೊಂಡಿರುವರಂತೆ, ಕಾಮವೃಕ್ಷದ ಹಿಂದೆಯೇ ಅಪ್ಸರಸಿಯರು ಉದ್ಭವಿಸುವುದು ಸ್ವಾಭಾವಿಕ.
ಮನಸ್ಸಿನ ಮಥನದಲ್ಲಿ ಕಾವ್ಯವಸ್ತುಗಳು ವಾಸ್ತವಿಕ ಪ್ರಪಂಚದಲ್ಲಿರುವುದಕ್ಕಿಂತ ಕನಸಿನಲ್ಲಿ ಮೂಡಿ ಬಂದಾಗ ಅತಿ ಸುಂದರವಾಗಿರುತ್ತವೆ. ಲೌಕಿಕ ಪ್ರಪಂಚದಲ್ಲಿ ಎಷ್ಟೋ ಮನಮೋಹಕವಾದ ವಸ್ತುವು ಇದ್ದರೂ, ಅಲ್ಪ ಸ್ವಲ್ಪವಾದರೂ ಲೋಪ ದೋಷಗಳಿರುತ್ತವೆ. ಆದರೆ ಕನಸಿನಲ್ಲಿ ಮೂಡಿ ಬಂದವುಗಳಿಗೆ ಲೋಪ ದೋಷಗಳು ಇರಬೇಕಾಗಿಲ್ಲ. ಕನಸಿನ ಕನೈಯರು ಸದಾ ರಮಣೀಯರು. ಸಂಪೂರ್ಣವಾಗಿ ಯಥಾ ಇಬ್ಬರು ; ಯಥೇಚ್ಛ ವರ್ತಿಗಳು.
ಕನಸಿನಲ್ಲಿ ಮೂಡಿ ಬಂದ ಗಂಧರ್ವರು, ಅಪ್ಸರೆಯರಿಗೆ ಸರಿಯಾದ ಜೋಡಿ. ಕನ್ನಡಿಯನ್ನು ನೋಡಿದಾಗ, ಪ್ರತಿಬಿಂಬವನ್ನು ಕಂಡಾಗ ಎಷ್ಟು ಅವಲಕ್ಷಣ ಎಂದು ಒದ್ದು ಬಿಡುವಹಾಗಾಗುತ್ತೆ ; ಸಾಕಷ್ಟು ಮಂದಿಗೆ. ಇಂತಹವರೂ ಕೂಡ