೪೦೫
ನಿರೋಧಿಸುವುದು, ಅಥವಾ ತಡೆಗಟ್ಟುವುದು 'ಯೋಗ'.
ಅಂದರೆ ಭೋಗಕ್ಕೂ ಆನಂದದ ಅನುಭವಕ್ಕೂ, ಸೇತುವೆಯನ್ನು ಕಟ್ಟುವುದು, ಅಥವಾ ಸಂಪರ್ಕವನ್ನು ಕಲ್ಪಿಸುವುದು, ಯೋಗ ಭೋಗಗಳನ್ನು ಅನುಭವಿಸುವಾಗ ಚಿತ್ತವು ಸಹಸ್ರಾರು ವೃತ್ತಿಗಳನ್ನು ಪಡೆಯುತ್ತಿರುತ್ತದೆ. ಅವುಗಳನ್ನು ತಡೆಹಿಡಿದರೆ, ಆನಂದದ ಅಥವಾ ನೆಮ್ಮದಿಯು ಕೇಂದ್ರಗಳೊಡನೆ ಸುಲಭವಾಗಿ ಸಂಪರ್ಕವನ್ನು ಪಡೆಯಬಹುದು. ಇದೇ ಯೋಗ ಮಾರ್ಗ, ಯೋಗ್ಯ ಮಾರ್ಗ,
ಯೋಗದ ನಿರಂತರ ಅಭ್ಯಾಸದಿಂದ, ಚಿತ್ತದ ವೃತ್ತಿಗಳನ್ನು, ಅಂದರೆ ಭೋಗದ ಕ್ಷೇಶಗಳನ್ನು ಪೂರ್ತಿಯಾಗಿ ನಿವಾರಿಸಬಹುದು. ಆನಂದದ ಅನುಭವವನ್ನು ಪಡೆಯಬಹುದು.
ಆಗ ಚಿತ್ತವನ್ನು ನಡೆಸುವ, ಮನಸ್ಸನ್ನು ನಿಯಂತ್ರಿಸುವ, ಶಾಶ್ವತವಾದ ಯಾವುದೋ ಅದನ್ನು' ಪ್ರತ್ಯಕ್ಷವಾಗಿ ಅರಿಯಬಹುದು. ಇದನ್ನು ಎರಡನೆಯ ಸೂತ್ರದಲ್ಲಿ ನುಡಿದರು.
“ತದಾ ಇಷ್ಟು: ಸ್ವರೂಪೇ ಅವಸ್ಥಾನ”
ಆನಂದದ ಅನುಭವವು ಇರದೆ ಇದ್ದಾಗ, ಚಿತ್ತವೃತ್ತಿಗಳು ಇರುತ್ತವೆ. ಇವುಗಳನ್ನು ಮುಖ್ಯವಾದ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಕ್ಲಿಷ್ಟ ಅಥವಾ ದುಃಖಗಳಿಗೆ ಕಾರಣವಾದವು. ಅಕ್ಲಿಷ್ಟ ಅಂದರೆ ಸುಖದ ಅನುಭವವನ್ನು ನೀಡುವುವು. ಕ್ಲಿಷ್ಟ ಅಥವಾ ದುಃಖಗಳನ್ನು ಬಹಿಷ್ಕರಿಸುವುದು ; ಮತ್ತು ಅಕ್ಲಿಷ್ಟ ಅಂದರೆ ಸುಖವನ್ನು ಅರಸುವುದು. Avoidance of pain and Pursuit of Pleasure, ಇವೆರಡೇ ಲೌಕಿಕ ಬಾಳಿನ ಪ್ರಾಣಿವರ್ಗದ ಪ್ರೇರಕಗಳು.
ವೃತ್ತಯಃ ಪಂಚತಮ್ಯ: ಕ್ಲಿಷ್ಟ ಅಕ್ಲಿಷ್ಟಾ
ಪಂಚ, ಐದು ತೆರನಾದ ಚಿತ್ತ ವೃತ್ತಿಗಳು ಯಾವುವು ? ೧. ಪ್ರಮಾಣ. (೩) ಪ್ರತ್ಯಕ್ಷವಾಗಿ ಕಂಡುದು : ಹಾಗೂ ಪಂಚೇಂದ್ರಿಯಗಳ ಮೂಲಕ ತಿಳಿದುದು. (b) ಅನುಮಾನ. ವಿಚಾರ ಪೂರ್ವಕವಾಗಿ ; ಹಿಂದಿನ ಅನುಭವದಿಂದ ಊಹಿಸುವುದು. ಹೊಗೆಯನ್ನು ಕಂಡಾಗ, ಬೆಂಕಿಯು ಕಾಣಿಸದೆ ಇದ್ದರೂ, ಬೆಂಕಿಯು ಇದೆ ಎಂದು ಊಹಿಸುವುದು ಅನುಮಾನ. ನಮ್ಮ ಕಾಲದ ಭಾಷೆಯಲ್ಲಿ ಅನುಮಾನ ಎಂದರೆ ಸಂಶಯ ಸಂದೇಹ ಎಂಬ ಅರ್ಥವು ಮಾತ್ರ ಬರುತ್ತದೆ. ೨,೦೦೦ ವರ್ಷಗಳ ಹಿಂದೆ ಅನುಮಾನ ಎಂಬ ಪದಕ್ಕೆ ಅಂತಹ ಅರ್ಥವು ಇರಲಿಲ್ಲ. (c) ಆಗಮ, ಹಿರಿಯರು, ಅರಿತವರು ನುಡಿದ ಶಬ್ದಗಳು ಅಥವಾ ವಾಕ್ಯಗಳು, ವೇದಗಳು, ಶ್ರುತಿ, ಸ್ಮೃತಿಗಳು ಇತ್ಯಾದಿ. ಇವುಗಳೂ ನಮ್ಮ