ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೦೮

ಮನಮಂಥನ

ನೆರವಾಗಬಹುದು. ಸಾಮಾನ್ಯರಿಗೆ ಅಸಂಭವ, ಆದಕಾರಣ ಇಲ್ಲಿ ಅಪಕೃತ. ಆದರೆ ಒಂದೆರಡು ಮಾತುಗಳನ್ನು ಹೇಳಬಹುದು.

ವಿದೇಹಿಗಳು ಎನ್ನುವ ಸ್ಥಿತಿಯು ಸಾನಂದದ ರೂಪಿನದು. ಆನಂದಾನುಭವಿಗಳು ; ದೇಹದ ಬಂಧನವಿರದೆ ಪ್ರಕೃತಿಲಯರು ಎಂದರೆ ಸಾಸ್ಮಿತ ಸ್ಥಿತಿಯಲ್ಲಿರುವವರು. ಸ-ಅಸ್ಮಿತ. 'ನಾನು' ಎಂಬುದನ್ನು ಅರಿತವರು, ಆನಂದಾನುಭವವು ಇವೆರಡು ರೀತಿಯ ಸಮಾಧಿ ಸ್ಥಿತಿಯಲ್ಲಿ ದೊರಕಿದರೂ, 'ಕೇವಲ ಒಂದೇ' ಎನ್ನುವ ಕೈವಲ್ಯದ ಅನುಭವವು ಸಿಗುವುದಿಲ್ಲವಂತೆ.

ಈ ವಿಧಿಗಳಲ್ಲದೆ, ಕೇವಲ ಈಶ್ವರೋಪಾಸನೆಯಿಂದ, ಭಕ್ತಿಯಿಂದ ಕೂಡಿದ ಉಪಾಸನೆಯಿಂದ ಸಮಾಧಿ ಸ್ಥಿತಿಯನ್ನು ಪಡೆಯಬಹುದಂತೆ.

ಈಶ್ವರ ಪ್ರಣಿದಾನಾತ್ ವಾ

ಪ್ರಣಿದಾನವೆಂದರೆ ನಿರಂತರವಾದ ಅಚಲವಾದ ನಂಬಿಕೆ ಅಥವಾ ಭಕ್ತಿ.

ಈ ವಿಧಾನದಿಂದಲೂ, ನಮ್ಮ ಇಂದಿನ ಭಾಷೆಯಲ್ಲಿ ಮನಸ್ಸನ್ನು ನಡಸುವ; ಋಷಿಗಳ ಕಾಲದ ಭಾಷೆಯಲ್ಲಿ ಚಿತ್ತವೃತ್ತಿಗಳನ್ನು ನಿರೋಧಿಸುವ, ಚೇತನವನ್ನು ಅರಿಯಬಹುದು. ಅಂತಹ ಚೇತನವು 'ಈಶ್ವರ' ಎಂದು ಕರೆಯಲ್ಪಟ್ಟಿತ್ತು. 'ಓಂ' ಕಾರವೆಂಬುದು ಇನ್ನೊಂದು ಹೆಸರು, ಈಶ್ವರನಿಗೆ.

ಋಷಿಗಳ ಕಾಲದ ಈಶ್ವರನು ನಮ್ಮ ಕಾಲದ ಶಿವನಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಆ ಕಾಲದ ಈಶ್ವರನು ಮಾನಸಿಕ ಚಟುವಟಿಕೆಯ ಅತ್ಯುನ್ನತ ಸಾಧನೆ. ಶಿವನು ಈ ಕಾಲದ ಗಣನಾಯಕ, ಗಣಶಿಕ್ಷಕ, ಗಣಶಿಕ್ಷಣಕಾರ, ಈಶ್ವರ ವ್ಯಕ್ತಿಗೆ ಮೀಸಲಾದವನು. ಅವನು ಸಮಾಜಕ್ಕೆ 'ಗುರು'ವಾದವನು ಎನ್ನಬಹುದು.

ಯೋಗವನ್ನು ಅಭ್ಯಾಸ ಮಾಡತೊಡಗಿದರೆ, ವಿಘ್ನಗಳು ಲೌಕಿಕದಲ್ಲಿ ತಡೆ ಬರಬೇಕು. ಇವುಗಳನ್ನು ಅಂತರಾಯಗಳು ಎನ್ನುತ್ತಿದ್ದರು. ಅವುಗಳು ಒಂಭತ್ತು. ಹೀಗೆ ವಿವರಿಸಲ್ಪಟ್ಟಿವೆ ಸೂತ್ರದಲ್ಲಿ, ಸುಲಭವಾಗಿ ಅರ್ಥವಾಗುವವುಗಳನ್ನು ಬಿಟ್ಟು ಮಿಕ್ಕವನ್ನು ಅರ್ಥ ಮಾಡುತ್ತೇನೆ.

'ವ್ಯಾದಿ,' 'ಸ್ವಾನ,' 'ಸಂಶಯ', 'ಪ್ರಮಾದ', 'ಆಲಸ್ಯ', 'ಅವಿರತಿ, ಭ್ರಾಂತಿ', 'ದರ್ಶನ'-ಆಲಭ್ಯ, ಭೂಮಿಕತ್ವ, ಅನವಸ್ಥಿತತ್ವಾನಿ : ಚಿತ್ರ ವಿಕ್ಷೇಪಾ ಅಂತರಾಯಃ

ಸ್ನಾನ ಅಂಗಪಾಟವು ತಪ್ಪಿ ಚಿತ್ತವು ಕೆಲಸವನ್ನು ಮಾಡಲಾಗದುದು ಸ್ಥಾನ.