ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೧೧

II ಸಾಧನ ಪಾದ

ತಪಃ ಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾ ಯೋಗ:

ತಪಃ ಯೋಗ ಸಾಧನೆಗಾಗಿ ಮನಸ್ಸಿನಲ್ಲಿ ತಪ್ಪಿಸುತ್ತಾ, ಅಗತ್ಯವಾದ ವತ ಪೂಜೆ ಇತ್ಯಾದಿಗಳನ್ನು ಆಚರಿಸುವುದು. ಸ್ವಾಧ್ಯಾಯ ಪ್ರಣವಪೂರ್ವಕವಾದ ಮಂತ್ರವನ್ನು ಜಪಿಸುವುದು, ಈಶ್ವರ ಪ್ರಣಿಧಾನ=ಎಲ್ಲವೂ ಈಶ್ವರನಿಗೆ ಸಮರ್ಪಿತ ಎನ್ನುವ ಪೂರ್ಣ ನಂಬುಗೆ. ಈ ಮೂರೂ ಕೂಡಿ ಕ್ರಿಯಾಯೋಗ ಎಂದೆನಿಸಿಕೊಳ್ಳುತ್ತದೆ.

ಯೋಗದ ವಿವರಗಳನ್ನು, ಚಿತ್ತದ ವಿವಿಧ ವೃತ್ತಿಗಳನ್ನು, ವೃತ್ತಿಗಳ ಮೇಲೆ ಹತೋಟಿಯನ್ನು ಪಡೆಯುವ ರೀತಿಗಳನ್ನೂ ಮೊದಲನೆಯ ಪಾದದಲ್ಲಿ ಹೇಳಲಾಯಿತು. ಎರಡನೆಯ ಈ ಪಾದದಲ್ಲಿ ಅವನ್ನು ಸಾಧಿಸುವ ರೀತಿಗಳನ್ನು ವಿವರಿಸಲಾಗುತ್ತದೆ. ಆದುದರಿಂದ ಈ ಭಾಗವನ್ನು 'ಕ್ರಿಯಾಯೋಗ' ಎಂದು ಕರೆಯುತ್ತಾರೆ.

ಸಮಾಧಿ ಭಾವನಾರ್ಥಃ ಕ್ಷೇಶ ತನೂ ಕರಣಾರ್ಥಷ್ಟ

ಕ್ರಿಯಾಯೋಗವನ್ನು ಸಾಧನೆ ಮಾಡುವುದರಿಂದ ಸಮಾಧಿಸ್ಥಿತಿಯು ಸ್ಥಿರವಾಗುವುದಕ್ಕೂ ಮತ್ತು ಕೇಶಗಳು ಅಥವಾ ವಿಘ್ನಗಳು ನಾಶವಾಗುವುದಕ್ಕೂ ಸಹಾಯವಾಗುತ್ತದೆ.

ಅವಿದ್ಯಾ ಅಸ್ಮಿತ, ರಾಗ, ದ್ವೇಷ, ಅಭಿನಿವೇಶಾ ಕ್ಷೇಪಾ ಕ್ಲೇಷಗಳು ಎಂದರೆ : ಅವಿದ್ಯಾ=ಅಜ್ಞಾನ ಅಥವಾ ಸರಿಯಾದ ಸತ್ಯವಾದ ಜ್ಞಾನವು ಇಲ್ಲದಿರುವುದು. ಅಸ್ಮಿತ=ನಾನು ನನ್ನ ಬಾಳು ಎಂಬ ಭಾವನೆ. ರಾಗ=ಸುಖ ಕಾಮ್ಯಗಳ ಬಗ್ಗೆ ಇರುವ ಆಸೆ. ದ್ವೇಷ ಇಷ್ಟಾರ್ಥ ಸಾಧನೆಗೆ ಅಡ್ಡಿ ಬರುವವುಗಳ ಬಗೆಗೆ ಉಂಟಾಗುವ ಭಾವನೆ. ಅಭಿನಿವೇಶ=ಸೊಬಗು ಸೌಖ್ಯಗಳಿಂದ ಬದುಕಬೇಕು ಎಂಬ ಹೆಬ್ಬಯಕೆ. ಮೆದುಳಿನಲ್ಲಿರುವ ಆನಂದದ ಕೇಂದ್ರಗಳ ಬಳಿಗೆ ಮನಸ್ಸು ಹರಿಯುವಾಗ, ಈ ಕ್ಷೇಶಗಳು ಅಡ್ಡ ಬಂದು ತಮ್ಮ ಬಳಿಗೆ ಸೆಳೆಯುತ್ತವೆ. ಅವಿದ್ಯಾ ಕ್ಷೇತ್ರ ಉತ್ತರೇಷಾಂ ಪ್ರಸುಪ್ತ ತನುವಿಚ್ಛಿನ್ನ ಉದಾರಾಕಾಂ ಕ್ಷೇಶಗಳೆಲ್ಲವೂ ಸುಪ್ತವಾಗಿರಲಿ, ಅಲ್ಪವಾಗಿರಲಿ, ಅಥವಾ ಉಲ್ಬಣಗೊಂಡಿರಲಿ, ಅವುಗಳೆಲ್ಲಕ್ಕೂ ಅವಿದ್ಯೆಯೇ ಪ್ರಧಾನ ಕಾರಣವಾಗಿರುತ್ತದೆ. ಅವಿದ್ಯೆ ಅಥವಾ ಅಜ್ಞಾನದಿಂದಲೇ ಮಿಕ್ಕ ವಿಘ್ನಗಳು ಮನಸ್ಸಿನಲ್ಲಿ