ಮನಮಂಥನ
ದೊರಕುತ್ತದೆ ; ಎಲ್ಲಿ ಸಿಮೆಂಟನ್ನು ಗಿಟ್ಟಿಸಬಹುದು ; ಎಲ್ಲಿ ಕಬ್ಬಿಣದ ಕಂಬಿಗಳು ದೊರಕುತ್ತವೆ ; ಮತ್ತೆಲ್ಲಿ ಅಗತ್ಯಬಿದ್ದರೆ ಸಾಲವು ಹುಟ್ಟಬಹುದು ; ಇವನ್ನೇ. ಗೃಹಪ್ರವೇಶವನ್ನು ಮಾಡಿ, ಲೆಕ್ಕಗಳನ್ನು ಸರಿಗೂಡಿಸಿ ಫೈಸಲ್ ಮಾಡುವತನಕ, ಮನೆಯ ವಿವರಗಳು ಹೊರತು ಮತ್ತೆ ಯಾವುದೂ ಅವನ ಮನಸ್ಸಿನಲ್ಲಿ ಸುಳಿಯುತ್ತಿರಲಿಲ್ಲ. ಈ ಅವಧಿಯಲ್ಲಿ ಯಾರು ಮಂತ್ರಿಗಳಾದರು, ಯಾವ ಗಣ್ಯರು ನೆಗೆದು ಬಿದ್ದರು. ಯಾವ ಊರಿನಲ್ಲಿ ಪ್ಲೇಗಿನ ಪಿಡುಗು ಕಾಡಿತು ; ಯಾವ ಸಿನಿಮಾ ಹೀರೋ ಯಾವ ಚಿಟ್ಟೆ ಹುಳವನ್ನು ಮದುವೆಯಾದ ; ಇದಾವ ಸುದ್ದಿಯೂ ಅವನಿಗೆ ತಿಳಿಯಲೇ ಇಲ್ಲ. ದಿನಪತ್ರಿಕೆಯನ್ನು ಓದಲಿಲ್ಲ. ಆಕಾಶವಾಣಿಯನ್ನು ಹಚ್ಚಲಿಲ್ಲ. ಕಡೆಗೆ ಟೆಸ್ಟ್ ಸ್ಕೋರ್ ಕೂಡ ಅವನ ಗಮನಕ್ಕೆ ಬರಲೇ ಇಲ್ಲ. ಮನೆ, ಮನೆ, ಮನೆ, ಇದೇ ಅವನ ಮನಸ್ಸನ್ನು ತುಂಬಿಕೊಂಡಿತ್ತು. ದೈನಂದಿನ ಕೆಲಸಗಳನ್ನು ಅವ ಮಾಡುತ್ತಿದ್ದ. ದಿಟ. ಆದರೆ ಯಾಂತ್ರಿಕವಾಗಿ ಮನಸ್ಸೆಲ್ಲಾ ಮನೆ ಮಯವಾಗಿತ್ತು.
ಬಾಹ್ಯ ಪ್ರಪಂಚದಲ್ಲಿ, ಸ್ವಾರ್ಥಿಯಾದ, ಆಸೆಯ ಪೂರೈಕೆಗೆ ಅವನ ಮನಸ್ಸು ಮೀಸಲಾಗಿತ್ತು. ಮನಸ್ಸಿನ ಇಂತದೇ ಸ್ಥಿತಿಯು, ಯಾವುದಾದರೂ ಪವಿತ್ರವಾದ ಕಲ್ಪನೆಗೆ ಮೀಸಲಾದರೆ ಅದನ್ನು ಒಂದು ರೀತಿಯ ಧಾರಣ ಎನ್ನಬಹುದು.
ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೆ? ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರ ? ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣರೆ, ನೀವು ಕಾಣಿರ ? ಕೊಳನ ತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರ, ನೀವು ಕಾಣಿರೆ? ಗಿರಿಗಹ್ವರದೊಳಾಡುವ ನವಿಲುಗಳಿರಾ ನೀವು ಕಾಣಿರೆ, ನೀವು ಕಾಣಿರೆ? ಚೆನ್ನಮಲ್ಲಿಕಾರ್ಜುನನೆಲ್ಲಿಹನೆಂದು ನೀವು ಹೇಳಿದೆ, ನೀವು ಹೇಳಿದೆ ?
ಎಂದು ಮನದಾಳದಿಂದ ನುಡಿದ ಅಕ್ಕಮಹಾದೇವಿಯು, ಚೆನ್ನಮಲ್ಲಿಕಾರ್ಜುನ ಎಂಬ ಇಷ್ಟದೇವನಲ್ಲಿ, ತನ್ನ ಮನಸ್ಸನ್ನು ಐಕ್ಯಗೊಳಿಸಿದ್ದಳು. ಸದಾ ಶಿವನ ಈ ಮೂರ್ತಿಯನ್ನು ಧ್ಯಾನಮಾಡುತ್ತಿದ್ದುದರಿಂದ, ಆಕೆಯಾಡಿದ ನುಡಿಗಳು ಚಿರಂಜೀವಿಗಳಾದುವು. ಎಲ್ಲರಂತೆ ಹುಟ್ಟಿಬೆಳೆದ ಹೆದ್ದೂಬ್ಬಳು, ಉನ್ನತ ಹಂತದ ಧ್ಯಾನವನ್ನು ಸಾಧಿಸಿಕೊಂಡಳು. ಇಷ್ಟದೇವನೊಂದಿಗೆ ಸಮಾಧಿ ಸ್ಥಿತಿಯನ್ನು