ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨೪

ಮನಮಂಥನ

ಅರಿವಾಗದಂತೆ ಮಾಡಬಹುದು. ೨೧ನೇ ಸೂತ್ರವನ್ನು ಒಪ್ಪಿದರೆ ಇದನ್ನೂ ಒಪ್ಪಬೇಕು.

ಸೋಪಕ್ರಮಂ, ನಿರುಪಕ್ರಮಂಚ ಕರ್ಮ ತತ್ ಸಂಯಮಾಜ್‌ ಅಪರಾಂತ ಜ್ಞಾನಂ ಅರಿಷ್ಟೇಭ್ಯವಾ

ಸಂಯಮಿಯು ; ಫಲ ನೀಡುವ ಕರ್ಮ ಮತ್ತು ನೀಡದೆ ಇರುವ ಕರ್ಮ ; ಇವುಗಳಲ್ಲಿ ಸಂಯಮವನ್ನು ಕೇಂದ್ರಿಕರಿಸಿದರೆ, ಮರಣ ಕಾಲವು ತಿಳಿಯುತ್ತದೆ. ಹಾಗೂ ಅರಿಷ್ಟಗಳು ಅಂದರೆ ಅಪಶಕುನಗಳಿಂದಲೂ ತಿಳಿಯಬಹುದು. ಅರಿಷ್ಟಗಳಲ್ಲಿ ದೇಹಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ; ಲೋಕಕ್ಕೆ ಸಂಬಂಧಿಸಿದ ಆದಿಭೌತಿಕ, ಮತ್ತು ಅಗೋಚರವಾದ ಲೋಕಗಳಿಗೆ ಸಂಬಂಧಿಸಿದ ಆದಿದೈವಿಕ ಎಂದು ಮೂರು ತೆರಗಳುಂಟಂತೆ.

ಹೃದಯಾಘಾತವಾಗುವಾಗ, ಸಾವು ಸನ್ನಿಹಿತವಾಗಿದೆ ಎಂಬ ತೀವ್ರ ಭಯವು ಮನಸ್ಸಿನ ತುಂಬಾ ಮುತ್ತಿರುತ್ತದೆ. ಮತ್ತೆ ಯಾವ ಲೌಕಿಕ ವಿಚಾರಗಳೂ ಅವನ ಮನಸ್ಸನ್ನು ಅಂಟುವುದಿಲ್ಲ. ಒಂದು ರೀತಿಯಲ್ಲಿ ಅಂತಹ ರೋಗಿಯ ಮನಸ್ಸು, ಧಾರಣ, ಧ್ಯಾನ, ಸಮಾಧಿಯನ್ನು ಬದುಕು ಸಾವುಗಳಲ್ಲಿ ಸಂಯಮವನ್ನು ಮಾಡಿದೆ ಎನ್ನಬಹುದು.

ಆದರೆ ಸಾವಿನ ಅರಿವು, ರೋಗಿಗಳಲ್ಲಿ ಭಯದಿಂದ ತುಂಬಿರುತ್ತದೆ. ನಿಜವಾಗಿ 'ಸಂಯಮ'ವನ್ನು ಯೋಗ ಮಾರ್ಗದಲ್ಲಿ ಸಾಧಿಸಿದವನಿಗೆ ಸಾವಿನ ಅರಿವು, ಯಾವ ಭಯವನ್ನೂ ಉಂಟುಮಾಡುವುದಿಲ್ಲ. ಸಮಾಧಾನ ಮನಸ್ಸಿನಿಂದಲೇ ಇರುತ್ತಾನೆ.

ಮಿಕ್ಕ ಅರಿಷ್ಟಗಳು, ಒಂದೊಂದು ಸಮಾಜವೂ ಕಾಲಾನುಕಾಲದಿಂದ ರೂಢಿಸಿಕೊಂಡು ಬಂದ ಅಪಶಕುನ ಎಂಬ ನಂಬಿಕೆಗಳು ಎಂದಷ್ಟೇ ಹೇಳಬೇಕು; ಇಂದಿನ ವೈಜ್ಞಾನಿಕ ಹಂತದಲ್ಲಿ.

ಮೃತ್ತಾದಿಷು ಬಲಾನಿ

ಮೈತ್ರಿ ; ಮುದಿತ ; ಕರುಣ ; ಉಪೇಕ್ಷೆ, ಎಂಬಿವುಗಳಲ್ಲಿ 'ಸಂಯಮ'ವನ್ನು ಕ್ರೋಡೀಕರಿಸಿದರೆ, ಆ ಗುಣಗಳೆಲ್ಲವೂ ಬಲಗೊಂಡು ಅಭಿವೃದ್ಧಿಯಾಗುತ್ತದೆ. ಸಂಯಮಿಗೆ ಸ್ವಾರ್ಥದ ಹಾಗೂ ಲೌಕಿಕದ ಆಸೆಗಳಿರುವುದಿಲ್ಲ. ಅಂದಮೇಲೆ ಮೈತ್ರಾದಿಗಳು ಬಲಗೊಳ್ಳಲೇಬೇಕು.

ಬಲೇದು ಹಸ್ತಿ ಬಲಾನಿ

ಆನೆ, ಸಿಂಹ, ಹುಲಿ ಮೊದಲಾದುವುಗಳ ಬಲದಲ್ಲಿ 'ಸಂಯಮ'ವನ್ನು