ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೩೭

ಗ್ರಹಣ ಸ್ವರೂಪ ಅಸ್ಮಿತ ಅನ್ವಯಾರ್ಥವತ್ವ ಸಂಯಮಾತ್‌ ಇಂದ್ರಿಯ ಜಯ

ಇಂದ್ರಿಯಗಳನ್ನು ಗ್ರಹಿಸುವುದು, ಅಥವಾ ತಿಳಿಯುವುದು, ಅವುಗಳ ಸ್ವರೂಪ, ಅವುಗಳು ನನ್ನಲ್ಲಿವೆ ಎಂದು ತಿಳಿಯುವುದು, ಅವುಗಳ ವೈಶಾಲ್ಯತೆ, ಮತ್ತು ಅವುಗಳು ನೀಡುವ ಫಲಿತಾಂಶಗಳು, ಇವುಗಳನ್ನು ಕುರಿತು ಸಂಯಮವನ್ನು ಮಾಡಿದರೆ ; ಅವುಗಳನ್ನು ಜಯಿಸಬಹುದು.

ತತೋ ಮನೋಜವಿತ್ಥಂ ವಿಕಾರಣ ಭಾವಃ ಪ್ರಧಾನ ಯಜ

ಇಂದ್ರಿಯಗಳನ್ನು ಜಯಿಸುವುದರಿಂದ, ಮನಸ್ಸಿನ ವೇಗದಂತೆ, ಮನಸ್ಸು ಮತ್ತು ದೇಹದೊಳಗೆ ಇಂದ್ರಿಯಗಳ ಗಮನ, ಆಗಮನಗಳು ; ಬಾಹೇಂದ್ರಿಯ ಪ್ರಚಾರಗಳು, ಮತ್ತು ಮೂಲ ಪ್ರಕೃತಿಯ ಸ್ವಾಧೀನವು ಹುಟ್ಟುತ್ತದೆ.

ಕಡೆಯ ಐದು ಸೂತ್ರಗಳ ಸಿದ್ಧಿಗಳನ್ನು ಮಧುಪ್ರತೀಕವೆನ್ನುತ್ತಾರೆ. ಹಾಗೂ ಋತಂಭರ ಪ್ರಜ್ಞಾ; ಸತ್ಯವಾದ, ತಾನೇ ತಾನಾಗಿ ಲಭಿಸುವ ಅರಿವು, ಇಂತಹ ಅರಿವಿನ ಮೂಲವು ಮಧುಪ್ರತೀಕ ಎಂದೂ ಅರ್ಥಮಾಡುತ್ತಾರೆ.

ಸತ್ತ್ವ ಪುರುಷಾನ್ಯತಾ ಖ್ಯಾತಿ ಮಾತ್ರಸ್ಯ ಸರ್ವ ಭಾವಾಧಿಷ್ಠಾತೃತ್ವಂ ಸರ್ವ ಜ್ಞಾತತ್ವಂಚ

ಸತ್ವ ಮತ್ತು ಆಧಾರವಾಗಿದ್ದುಕೊಂಡು ಮನಸ್ಸನ್ನು ನಡೆಸುವ ಶಕ್ತಿ ಇವುಗಳ ಪರಸ್ಪರ ಸಂಬಂಧವನ್ನು ಕುರಿತು ಸಂಯಮವನ್ನು ಮಾಡಿದರೆ, ಸರ್ವಾಧಿಕಾರವು ಮತ್ತು ಸರ್ವಜ್ಞತೆಯೂ ಲಭಿಸುತ್ತದೆ.

ತತ್ ವೈರಾಗ್ಯತ್ ಅಪಿ ದೋಷ ಬೀಜ ಕ್ಷಯೆ ಕೈವಲ್ಯಂ'

ಈ ಸಿದ್ಧಿಗಳನ್ನು ಗಮನಿಸದಿದ್ದರೆ ಅವುಗಳಲ್ಲಿ ಉದಾಸೀನತೆಯು ಹುಟ್ಟಿದರೆ, ಬಂಧನದ ಎಳೆಗಳು ಕೂಡ ನಾಶವಾಗುತ್ತವೆ. ಆನಂತರ ಕೈವಲ್ಯ ಸ್ಥಿತಿಯು ಮನಸ್ಸಿಗೆ ದೊರೆಯುತ್ತದೆ.

ಸ್ಥಾನಿ ಉಪನಿಮಂತ್ರಿಣಿ ಸಂಗಮಯಾಕರಣಂ ಪುನಃ ಅನಿಷ್ಟ ಪ್ರಸಂಗಾತ್

ಲಭಿಸಿದ ಸಿದ್ಧಿಗಳಲ್ಲಿ ಹೆಮ್ಮೆಯನ್ನಾಗಲೀ, ಆಸಕ್ತಿಯನ್ನಾಗಲೀ ಹೊಂದಿದರೆ, ಅನಿಷ್ಟವು ಪುನಃ ಸಂಭವಿಸಬಹುದು.

ಕ್ಷಣ ತತ್ ಕ್ರಮಯೋ ಸಂಯಮಾತ್‌, ವಿವೇಕಜಂ ಜ್ಞಾನು

ಕ್ಷಣಕಾಲದ ಮುಂದಿನ ಹಾಗೂ ಹಿಂದಿನ ಕ್ಷಣಗಳಲ್ಲಿ ಸಂಯಮವನ್ನು ರೂಢಿಸಿದರೆ ವಿವೇಕಪೂರಿತವಾದ ಜ್ಞಾನವು ಲಭಿಸುತ್ತದೆ.

ಜಾತಿ ಲಕ್ಷಣ ದೇಶ: ಅನ್ಯತಾನ್ ಅವಚ್ಛೇದಾತ್ ತುಲಯೋ ತತಃ ಪ್ರತಿಪತ್ತಿ:

ಜಾತಿ ಎಂದರೆ Species ಆಕಾರ, ರೂಪವಿಶೇಷಗಳು ; ಇವುಗಳೆಲ್ಲವೂ ಸಮಾನವಾಗಿರುವಂತೆ ಕಾಣಬಹುದು. ಸಂಯಮವನ್ನು ಅವುಗಳಲ್ಲಿ