ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೩೮
ಮನಮಂಥನ

ಮಾಡುವುದರಿಂದ, ಅವುಗಳಲ್ಲಿರುವ ವ್ಯತ್ಯಾಸವು ಮತ್ತು ವಿವೇಕ ಜ್ಞಾನವು ಲಭಿಸುತ್ತದೆ.

ತಾರಕಂ ಸರ್ವ ವಿಷಯಂ ಸರ್ವಧಾ ವಿಷಯಂ ಅಕ್ರಮಂ ಚ ಇತಿ ವಿವೇಕಜಂ ಜ್ಞಾನಂ

ವಿವೇಕದಿಂದ ಹುಟ್ಟಿದ ಜ್ಞಾನಕ್ಕೆ ತಾರಕವೆಂದು ಹೆಸರು. ಸಮಸ್ತ ವಿಷಯಗಳೂ ಏಕಕಾಲದಲ್ಲಿ ಅರಿವಾದಾಗ ತಾರಕ ಎನ್ನುತ್ತಾರೆ. ಅರಿವನ್ನುಂಟುಮಾಡುವ ಸಾಮಾನ್ಯವಾದ ವಿಧಾನಗಳಿಂದ, ಈ ವಿಧಾನವು ಪ್ರತ್ಯೇಕವಾದುದು. ಈ ಜ್ಞಾನಕ್ಕೆ ಇಂತಹ ಕ್ರಮ ಎಂಬುದಿಲ್ಲ.

ಸ ಪುರುಷಯೋಃ ಶುದ್ಧಿ ಸಾಮ್ಯ ಕೈವಲ್ಯಂ

ಸತ್ ಅಂಶವು ರಜಸ್ತಮಗಳಿಂದ ಶುದ್ಧಿಯಾಗಿ, ಮನಸ್ಸಿಗೆ ಆಧಾರವಾದ, ಮೂಲಭೂತವಾದುದರೊಂದಿಗೆ (ಅದನ್ನು 'ಪುರುಷ' ಎನ್ನುತ್ತಾರೆ) ಸಮಸಮವಾದಾಗ ಕೈವಲ್ಯ ಸ್ಥಿತಿಯು ಲಭಿಸುತ್ತದೆ.

ಕೈವಲ್ಯ ಪಾದ

ಸಂಯಮದಿಂದ, ಸಮಾಧಿ ಸ್ಥಿತಿಯನ್ನು ದೃಢಪಡಿಸಿದ ಮೇಲೆ, ಮನಸ್ಸಿನಲ್ಲಿ 'ಪ್ರಜ್ಞೆಯು ಕೇವಲ ಒಂದೇ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದು' ಎಂಬ ಅರಿವು ಮೂಡುತ್ತದೆ. ಕೈವಲ್ಯ ಸ್ಥಿತಿಯ ವಿವರಣೆಗಳನ್ನು ಈ ಭಾಗದಲ್ಲಿ ಕೊಡಲಾಗಿದೆ. 'ಪುನರ್ಜನ್ಮವು ಖಂಡಿತ, ಒಂದು ಜನ್ಮದಲ್ಲಿ ನಡೆಸಿದ ಯೋಗ ಅಭ್ಯಾಸವು, ಸಮಾಧಿ ಸ್ಥಿತಿಯನ್ನು ಪಡೆಯದೆ ಇರಬಹುದು. ಸಂಯಮವು ಲಭಿಸದೆ ಇರಬಹುದು. ಮುಂದಿನ ಜನ್ಮದಲ್ಲಿ ಹಕ್ಕಿಯಾಗಿ ಹುಟ್ಟಿದರೆ, ಗಾಳಿಯಲ್ಲಿ ಹಾರಾಡುವ ಸಿದ್ಧಿಯನ್ನು ಪಡೆಯಬಹುದು. ಗೂಬೆಯಾಗಿ ಹುಟ್ಟಿದರೆ ಕತ್ತಲೆಯಲ್ಲಿ ಕಾಣುವ ಸಿದ್ಧಿಯನ್ನು ಹೊಂದಬಹುದು. ಈ ವಿಷಯಗಳನ್ನು ನಿಸ್ಸಂಶಯವಾಗಿ ನಂಬಿದವರಿಗೆ ಕೈವಲ್ಯ ಪಾದದ ಸೂತ್ರಗಳು ಅರ್ಥವಾಗುತ್ತವೆ.

ಜನ್ಮ, ಔಷಧಿ, ಮಂತ್ರ, ತಪಸ್, ಸಮಾಧಿ, ಜಾ ಸಿದ್ಧಯ

ಐದು ಪ್ರಮುಖ ಭಾಗಗಳನ್ನಾಗಿ ಸಿದ್ಧಿಗಳನ್ನು ವಿಂಗಡಿಸಬಹುದು.

(ಆ) ಜನ್ಮಾದಿಗಳಿಗೆ ಅನ್ವಯಿಸುವಂತೆ ಆಕಾಶದಲ್ಲಿ ಸಂಚರಿಸುವಿಕೆ, ಪಕ್ಷಿಗಳಂತೆ ಅಥವಾ ಜಲಸ್ಥಂಭನವನ್ನು ಮೀನು ಮೊಸಳೆಗಳಂತೆ ಮಾಡುವಿಕೆ. ಊಸರವಳ್ಳಿಯಂತೆ ರೂಪವನ್ನು ಬದಲಾಯಿಸುವಿಕೆ, ಮರಗಳಂತೆ ಬಹುಕಾಲ ಬದುಕಿರುವಿಕೆ. ಇಂತಹ ಸಿದ್ಧಿಗಳು, ಆಯಾ ಪ್ರಾಣಿಗೆ ಹುಟ್ಟಿದಂದಿನಿಂದಲೇ ಲಭಿಸಿರುವ 'ಸಿದ್ಧಿಗಳು' ಪ್ರಾಣಿ ಜನ್ಮವು ಮುಗಿದ ನಂತರ ಹೊಸ ಜನ್ಮವನ್ನು ಪಡೆಯುವಾಗ, ಇತರ ರೀತಿಯ ಸಿದ್ಧಿಗಳು ಆಜನ್ಮ ಬಳುವಳಿಗಳಾಗಿರುತ್ತದೆ.

(ಆ) ಔಷಧಿಗಳು ಎಂದರೆ ಗಿಡ ಮರ ಬಳ್ಳಿಗಳಿಂದ ಉತ್ಪಾದಿತವಾದುವು.