ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ

೪೪೩

ವಾಸನೆಗಳು ಉಳಿದಿರಬಹುದು. ಆಗ 'ಸಂಯಮ'ದಿಂದಾಗಿ ಯೋಗಿಯಾದವನು ಮನಸ್ಸನ್ನು ನಡಸುವ ಮಹತ್ ತತ್ತ್ವದಿಂದ ಸ್ಮರಿಸಿದ ತತ್‌ಕ್ಷಣ ಅನೇಕ ಮನಸ್ಸುಗಳನ್ನೂ, ಅವುಗಳಿರುವ ಅನೇಕ ದೇಹಗಳನ್ನೂ ಸೃಷ್ಟಿಸಬಲ್ಲನು. ಅವುಗಳ ಮೂಲಕ, ಪೂರ್ವಜನ್ಮಗಳಿಂದ ಉಳಿದಿರಬಹುದಾದ ವಾಸನೆಗಳನ್ನು ಪೂರೈಸಿ, ಏಕಕಾಲದಲ್ಲಿ ಅವುಗಳನ್ನು ನಾಶಪಡಿಸಬಹುದು.

ಪ್ರವೃತ್ತಿ ಭೇದೇ ಪ್ರಯೋಜಕು ಚಿತ್ತಮೇಕಂ ಅನೇಕೇಷಾಂ

ಅನೇಕ ಮನಸ್ಸು ಮತ್ತು ದೇಹಗಳಲ್ಲಿ, ಚಿತ್ತವೃತ್ತಿಗಳು ನಡೆಯುತ್ತಿದ್ದರೂ, ಯೋಗಿಯ ಚಿತ್ತವು ಸ್ಥಿರವಾಗಿ, ಸ್ವಯಂಪೂರ್ಣವಾಗಿ ಇರುತ್ತದೆ. ಅಂದರೆ ಸಂಯಮವನ್ನು ಸಾಧಿಸಿದ ಯೋಗಿಯು, ಮನಸ್ಸನ್ನು ಅತಿಕ್ರಮಿಸಿರುತ್ತಾದ್ದರಿಂದ, ಇತರ ಮನಸ್ಸು ಮತ್ತು ದೇಹಗಳನ್ನು ಸೃಷ್ಟಿಸಿದರೂ, ತಾನು ಒಂದೇ ರೀತಿಯಲ್ಲಿ ಸ್ಥಿರವಾಗಿರುತ್ತಾನೆ.

ತತ್ರ ಧ್ಯಾನ ಜಂ ಅನಾಶಯಂ

ಧ್ಯಾನ ಸಮಾಧಿಗಳಿಂದ ಅರಿಯಲ್ಪಟ್ಟ ಚಿತ್ತವು, ಹಿಂದಿನ ಜನ್ಮಗಳ ಕರ್ಮ ವಾಸನಾರಹಿತವಾಗಿರುತ್ತದೆ. ಜನ್ಮ ಔಷಧಿ, ಮಂತ್ರ ತಪಸ್ಸು ಈ ಎಲ್ಲವುಗಳಿಂದಲೂ ಲಭಿಸಿದ ಸಿದ್ಧಿಗಳಿಗೆ ಕರ್ಮವಾಸನೆಗಳಿರುತ್ತವೆ. ಆದರೆ ಸಮಾಧಿಯಿಂದ ಲಭಿಸಿದ ಚಿತ್ತವು ಕರ್ಮವಾಸನಾ ರಹಿತವಾಗಿರುತ್ತದೆ.

ಕರ್ಮ ಶುಕ್ಲ ಕೃಷ್ಣಂ ಯೋಗಿನವಿದ್ದಂ ಇತರೇಷಾಂ

ತತಸ್ ತದ್ ವಿಪಾಕಾನು ಗುಣಾನಾಂ ಏವಾಭಿವ್ಯಕ್ತಿರ್ವಾಸನಾನಾಂ

ಜಾತಿ ದೇಶ ಕಾಲ ವ್ಯವಹಿತಾನಾಂ ಅಪಿ ಅನಂತರ್ಯಂ ಸ್ಮೃತಿ ಸಂಸ್ಕಾರಯೋ ಏಕ ರೂಪತ್ವಾತ್

ತಾಸಾಂ ಅನಾದಿತ್ವಂ ಚ ಆಶಿಸೋ ನಿತೃತ್ವಾತ್

ಹೇತು ಫಲಾಶ್ರಯಾಲಂಬನೆ ಸಂಗ್ರಹೀತತ್ವಾದ್ ಏಷ ಅಭಾವ ತದಭಾವ

ಅತೀತಾನಾಗತಂ ಸ್ವರೂಪತೋಽ ಸ್ವರಭೇದತ್‌ ಧರ್ಮಾಣಾಂ

ಈ ಸೂತ್ರಗಳಲ್ಲಿ, ಕರ್ಮಗಳು, ಅವುಗಳ ಮೂರು ಬೇಧಗಳು ; ಪುಣ್ಯ ಪಾಪ ಮಿಶ್ರ ಕರ್ಮಗಳು ; ಜನ್ಮಾದಿ ವಾಸನೆಗಳು ಚಿತ್ರದಲ್ಲಿದ್ದು ಸಮಾನ ದೇಹಗಳು ದೊರೆತಾಗ ಕಾಣಿಸಿಕೊಳ್ಳುವುದು ; ಸ್ಮೃತಿ ಸಂಸ್ಕಾರಗಳ ಪರಿಹಾರ ಮಾಡಿಕೊಳ್ಳುವ ಉಪಾಯಗಳು ; ಇತ್ಯಾದಿ ಇತ್ಯಾದಿ ವಿವರಿಸುತ್ತಾರೆ.

ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ; ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಕರ್ಮ ಫಲಗಳನ್ನು ನಿಖರವಾಗಿ ನಿರ್ಧರಿಸುವುದು ಸಾಧ್ಯವಾಗಿಲ್ಲ. ಆದರೆ