ಸುರಿಸಿ, ಸಸ್ಯಗಳನ್ನು ಪ್ರಚೋದಿಸಿ ಮೊಳಕೆ ಒಡೆದು ಬೆಳೆಸುವಂತೆ, ಈ 'ಧರ್ಮಮೇಘ'ವು 'ಸಮಾಧಿಸ್ಥಿತಿ'ಯನ್ನು ಪ್ರಚೋದಿಸಿ ಬೆಳೆಸಿ ಅಭಿವೃದ್ಧಿಸುತ್ತದೆ.
ತತಃ ಕ್ಷೇಶ ಕರ್ಮ ನಿವೃತ್ತಿ
'ಧರ್ಮಮೇಘ' ಸಮಾಧಿಯಿಂದ, ಕೇಶ ಕರ್ಮಗಳು, ಎಂದರೆ ಅವಿದ್ಯಾ ಪಾಪಪುಣ್ಯ ಕರ್ಮಗಳೆಂಬ ಭೇದ ; ಇತ್ಯಾದಿಗಳು ನಿವೃತ್ತಿಯಾಗುತ್ತವೆ. ಅಂದರೆ ಯಾವ ಲೌಕಿಕ ಕೆಲಸಗಳನ್ನು ಇಂತಹ ಯೋಗಿಯು ಮಾಡಿದರೂ, ಅವುಗಳ ಫಲಗಳು, ಅವನಿಗೆ ಅಂಟುವುದಿಲ್ಲ. ಇಂತಹ ಯೋಗಿಯು, ಸ್ವಾರ್ಥ ಫಲವೀಯು ವಂತಹ ಕಾರ್ಯಗಳನ್ನು ಮಾಡುವುದೇ ಇಲ್ಲ, ಏಕೆಂದರೆ 'ಆಸೆ'ಯೇ ಇರುವುದಿಲ್ಲವಾದ್ದರಿಂದ.
ತದಾ ಸರ್ವಾವರಣ ಮಲಾದೇತಸ್ಯ ಜ್ಞಾನ ಗ್ಯಾನಂತಾತ್ ಜೈಯಂ ಅಲ್ಪಂ
ಸರ್ವಾವರಣ ಮಲಾಪೇತಸ್ಯ ಎಂದರೆ ಸುತ್ತಲೂ ಆವರಿಸಿಕೊಂಡಿರುವ, ಆಸೆಯಿಂದುಂಟಾದ ಕ್ಷೇಶಗಳು ಮತ್ತು ಕರ್ಮಗಳು, ಈ ಕಲ್ಮಷದಿಂದ ತೊಡೆದು ಹಾಕಲ್ಪಟ್ಟ ಜ್ಞಾನಕ್ಕೆ, ಆನಂತರ ಅರಿಯಬೇಕಾದುದು ಅತ್ಯಲ್ಪವಾಗಿರುತ್ತದೆ. ಅಂದರೆ ರಜಸ್ಸು ಮತ್ತು ತಮ, ಈ ಗುಣಗಳಿಂದ ಬಿಡುಗಡೆಯನ್ನು ಪಡೆದ ಮೇಲೆ, ಸತ್ವ ಗುಣಾಧಿಕ್ಯದಿಂದ, ಅತ್ಯಧಿಕವಾದ ಜ್ಞಾನವನ್ನು ಪಡೆಯಬಹುದು. ಲೌಕಿಕವಾಗಿ ಸಾಮಾನ್ಯ ಮನುಷ್ಯನು ಪಡೆಯುವ ಜ್ಞಾನವು, ಯೋಗಿಯು ಪಡೆಯುವ ಪರಮ ಜ್ಞಾನಕ್ಕೆ ಹೋಲಿಸಿದರೆ, ಅತ್ಯಲ್ಪವಾಗಿರುತ್ತದೆ. Insignificant ಎನ್ನಬೇಕು. ಯೋಗಿಯು ಈ ಹಂತದಲ್ಲಿ ಸರ್ವಜ್ಞನಾಗಿರುತ್ತಾನೆ.
ತತಃ ಕೃತಾರ್ಥಾನಾಂ ಪರಿಣಾಮಕ್ರಮ ಸಮಾಪ್ತಿ: ಗುಣಾನಾಂ
ಧರ್ಮಮೇಘದ ಸಂಪೋಕ್ಷಣೆಯ ನಂತರ, ಮೂರೂ ಗುಣಗಳ ಚೆಲ್ಲಾಟವು ಸ್ತಬ್ಧವಾಗುತ್ತದೆ. ಅವುಗಳ ನಿಯಮಿತ ಕಾರ್ಯವು ನೆರವೇರಿಸಲ್ಪಟ್ಟಿರುವುದರಿಂದ, ಮೂರು ಗುಣಗಳು, ಸತ್ವ ರಜಸ್ ತಮಗಳು, 'ಪುರುಷ'ನ ; ಮನಸ್ಸಿನ ಪ್ರಭುವಿನ ಅಣತಿಯನ್ನು ನೆರವೇರಿಸಿದ ನಂತರ, ಸ್ತಬ್ಧವಾಗುತ್ತವೆ. ಮಾನವ ಮನಸ್ಸಿನ ಅಂತಹ ಸ್ಥಿತಿಯನ್ನು 'ತ್ರಿಗುಣಾತ್ಮಕ ಪ್ರಧಾನ'ವೆನ್ನುತ್ತಾರೆ. ಆಗ ಚಿತ್ತವು ಶಾಂತಿಯನ್ನು ಪಡೆಯುತ್ತದೆ. ಲೌಕಿಕದಲ್ಲಿ ಇದ್ದು ಬಾಳುತ್ತಿರುವಾಗಲೂ ಕೂಡ.
ಕ್ಷಣ ಪ್ರತಿಯೋಗೀ ಪರಿಣಾಮ ಪರಾಂತ ನಿರ್ಗಾತ್ಯ ಕ್ರಮ
ಚಿತ್ತವು ಎಂದರೆ ಮನಸ್ಸು ವೃತ್ತಿಗಳನ್ನು ಹೊಂದುವಾಗ, ವೃತ್ತಿಯೊಂದೊಂದಕ್ಕೂ ಕಾಲಾವಧಿಯು ಇರಬೇಕು. ಅತ್ಯಂತ ಸೂಕ್ಷ್ಮವೂ, ವಿಭೇದಿಸಲಾಗದದೂ ಆದ ಕಾಲಾವಧಿಯನ್ನು ಸಾಂಖ್ಯಕಾರರು “ಕ್ಷಣ' ಎಂದು