ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೪೧

ಸತ್ತರೂ, ಮಗನು ಈ ಬೇನೆಯಿಂದ ನರಳುತ್ತಾನೆ. ವಿಚಾರಪರ ಮನಸ್ಸು, ಹಿರಿಯರು ಸತ್ತಿದ್ದು, ಬಾಳ ನಿಯಮದಂತೆಯೇ, ಇದಕ್ಕೆ ದುಃಖಿಸುವುದು ಹುಡುಗತನ, ಎಂದು ಹೇಳುತ್ತದೆ. ಇನ್ನೂ ದಿನ ನನ್ನ ಬಾಳಿಗೆ ಇದ್ದ ಹಿರಿಯ ಮತ್ತು ದೃಢವಾದ ಬೆಂಬಲ ಇನ್ನಿಲ್ಲವಲ್ಲ ಎಂದು ಭಯವೂ, ಕೊರಗೂ, ಉಂಟಾಗುತ್ತದೆ. ಈ ಜಂಝಾಟದಲ್ಲಿ, ಆತಂಕವು ಮುತ್ತಿಕೊಳ್ಳುತ್ತದೆ. ಹೀಗೆ ನರಳುವವರಲ್ಲಿ ಸುಮಾರು ಜನರ ಮನಸ್ಸು ಪ್ರೌಢಸ್ಥಿತಿಗೆ ಬಂದಿರುವುದಿಲ್ಲ. ವಯಸ್ಸು ಪಂಚಾಂಗದ ರೀತ್ಯಾ ಪ್ರೌಢವಾಗಿದ್ದರೂ, ಮನಸ್ಸು ಹುಡುಗು ಹುಡುಗಾಗಿಯೇ ಇರುತ್ತದೆ. ಎಳೆಯ ಮಕ್ಕಳಂತೆ ಮುದ್ದುಗರೆಯುವ ಸ್ವಭಾವ ಇವರದು.

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಪರೀಕ್ಷೆಗಳನ್ನು ಅತಿ ಯಶಸ್ವಿಯಾಗಿ ಪ್ಯಾಸು ಮಾಡಿ, ಹಿರಿಯ ಸ್ಪರ್ಧಾ ಪರೀಕ್ಷೆಗಳಿಗೆ ಕೂಡುತ್ತಾರಲ್ಲಾ; ಅವರಲ್ಲಿ ಕೆಲವರು ಈ ಬೇನೆಗೆ ತುತ್ತಾಗುತ್ತಾರೆ. ಎಂದೂ ಸೋಲದೆ ಇದ್ದವರು ಸ್ಪರ್ಧಾ ಪರೀಕ್ಷೆಯಲ್ಲಿ ಮುಗ್ಗರಿಸುತ್ತೇವೋ ಎನ್ನುವ ಕಾತರ, ಹಾಗಾದರೆ ಅವಮಾನ ಎನ್ನುವ ಹುಡುಗು ಮನೋಭಾವ ; ಇವೆಲ್ಲವೂ ಪರೀಕ್ಷೆಗೆ ಮೊದಲೇ, ಬೇರೆಯಾಗಿ ಕಾಡಿ, ಸ್ಪರ್ಧೆಯಿಂದ ಮಾನವಾಗಿ ವಾಪಸಾಗುವುದಕ್ಕೆ ಅನುಕೂಲ ಮಾಡಿಕೊಡುತ್ತವೆ.

ಈ ಬೇನೆಯಿಂದ ನರಳುವವರು, ತಮ್ಮ ಮನಸ್ಸು ಅತಿ ದೃಢವಾದುದು; ತಾವು ಬಲು ಧೈರ್ಯಶಾಲಿಗಳು, ಕೆಚ್ಚೆದೆಯವರು, ಎಂದು ಸಂಪೂರ್ಣವಾಗಿ ನಂಬುತ್ತಾರೆ. ಹಸಿ ಇಟ್ಟಿಗೆಯ ವಾಲುತ್ತಿರುವ ಗೋಡೆಗೆ ಊರೆಗೋಲು ಕೊಡುವಂತೆ, ಆತಂಕದಿಂದ ತುಂಬಿದ ಮನಸ್ಸು ತಾನು ದೃಢವಾಗಿದ್ದೇನೆ ಎನ್ನುವ ಊರಗೋಲನ್ನು ಕೊಟ್ಟುಕೊಂಡು ಸ್ಥಿಮಿತವೂ ಸ್ಥಿರವೂ ಆಗಲೆತ್ನಿಸುತ್ತದೆ. ಇಂತಹ ಊರೆಗೋಲನ್ನು ಕಳಚುವ ವೈದ್ಯನು, ತಾನೇ ಊರೆಗೋಲಾಗಬೇಕು. ಹಾಗಾಗಲು ವೈದ್ಯನಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವು ಪೂರ್ಣವಾಗಿರಬೇಕು.

ಆಧ್ಯಾತ್ಮಿಕ ಔನ್ನತ್ಯವನ್ನು ಪಡೆದವರು, ಸ್ವತಃ ವೈದ್ಯರಲ್ಲದಿದ್ದರೂ, ಇಂತಹ ರೋಗಿಗಳನ್ನು ಕೆಲವೊಮ್ಮೆ ಗುಣಪಡಿಸುವುದು, ಈ ಕಾರಣದಿಂದಲೇ, ರೋಗಿಯ ಆತಂಕದ ಮನಸ್ಸಿಗೆ, ಅವರೇ ಸುಲಭವಾಗಿ ಊರೆಗೋಲಾಗುತ್ತಾರೆ.

೨. ಕಾಲು ಕುಸಿದ ವಸ್ತಾದಿ

ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದವ, ಹಠಾತ್ತನೆ ಕುರ್ಚಿಯಿಂದ