ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೪೫

ಲತೀಫನಿಗೆ ತಿಳಿಯಲೊಲ್ಲದು. ಅಪ್ಪನಂತೆ ನನಗೂ ಹೃದಯದ ಬೇನೆ ಬಂದಿರಬೇಕು; ನಾನೂ ಸಾಯುತ್ತೇನೆ ಎನ್ನುವ ಭಯ. ಹೀಗಾದಾಗ ಮನಸ್ಸಿನಲ್ಲಿದ್ದ ಆತಂಕವು, ತನ್ನ ತೀವ್ರತೆಯನ್ನು ಶಮನಗೊಳಿಸಲು, ಹೃದಯಕ್ಕೆ ವಕ್ರಿಸಿಕೊಂಡಿತು.

ಕಚೇರಿಯಲ್ಲಿ ಕುಳಿತಿದ್ದಾಗ, ಆತಂಕವು ಮೆದುಳಿನ ಬುಡದಲ್ಲಿರುವ ಕೇಂದ್ರಗಳಿಗೆ ಪಸರಿಸಿತು. ಹೃದಯಕಾರದ ಕೇಂದ್ರಗಳಿರುವುದೂ ಅಲ್ಲಿಯೇ. ಕಾರಣ ಆತಂಕವು ಹೃದಯದ ವೇಷವನ್ನು ಹಾಕಿಕೊಂಡಿತು. ಕೈ ಕಾಲುಗಳು ಕುಸಿದಂತಾಯಿತು. ಜ್ಞಾನವೇನೂ ಹೋಗಿರಲಿಲ್ಲ. ಮೂರ್ಛಯೇನೂ ಬಡಿದಿರಲಿಲ್ಲ. ಸುತ್ತಲೂ ನಡೆಯುವುದೆಲ್ಲವೂ ತಿಳಿಯುತ್ತಿತ್ತು. ಆದರೆ ಏನೂ ಮಾಡಲಾಗುತ್ತಿರಲಿಲ್ಲ. ಕೇವಲ ಮಾನಸಿಕ ಆತಂಕದಿಂದ ಹೀಗಾಗಿದೆ ; ದೇಹವು ಅಚ್ಚುಕಟ್ಟಾಗಿಯೇ ಇದೆ ; ಎನ್ನುವುದು ಈ ಚಿಹ್ನೆಗಳಿಂದ ಸ್ಪಷ್ಟವಾಗಿತ್ತು . ಮನಸ್ಸಿನ ಈ ತೆರನ ಆತಂಕವು ಕಾಲಕ್ರಮೇಣ ಶಮನವಾಗುತ್ತದೆ. ಅಂದರೆ ಈ ರೀತಿ ಕೈ ಕಾಲು ಕುಸಿದು ಬೀಳುವುದೂ ಕಡಿಮೆಯಾಗುತ್ತದೆ. ಇದು ಏಕೆ ಹೀಗಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಇನ್ನೂ ಬೇಗ ಗುಣವಾಗುತ್ತದೆ. ಏಕೆಂದರೆ ಭಯವು ಕಡಿಮೆಯಾಗುವುದರಿಂದ, ಮಡದಿ ಮಕ್ಕಳು ಆದಮೇಲೆ, ಗುಡೂಮಿಯ್ಯಾನ ನೆನಪು ಮಾಸುತ್ತ ಹೋಗುತ್ತದೆ. ಮಡದಿಮಕ್ಕಳು ನನ್ನ ಕಷ್ಟಕ್ಕೆ ಆಗುತ್ತಾರೆ ಎನ್ನುವ ಕಲ್ಪನೆಯು ಬೇರೂರುತ್ತದೆ. ಆಗ ಒಬ್ಬಂಟಿ, ತಬ್ಬಲಿ, ಎನ್ನುವ ಭಯವೂ ಕಡಿಮೆಯಾಗುತ್ತದೆ.

ಲತೀಫನ ಆತಂಕದ ಪ್ರದರ್ಶನದಲ್ಲಿ, ಇನ್ನೊಂದು ಮಾನಸಿಕ ಬೇನೆಯಾದ ಹಿಸ್ಟಿರಿಯಾದ ಛಾಯೆಯೂ ಜತೆಗೂಡಿಕೊಂಡಿದೆ. ಎರಡು ಮೂರು ತೆರನ ಮಾನಸಿಕ ಬೇನೆಗಳು, ಒಂದಿಷ್ಟು ಒಂದಷ್ಟು ಕೂಡಿಕೊಳ್ಳುವುದು, ಮಾನಸಿಕ ಬೇನೆಗಳಲ್ಲಿ ಸರ್ವೆಸಾಮಾನ್ಯ.

೩. ಅಂತರಂಗದ ಆತಂಕ “ಆರೇಳು ದಿನಗಳಿಂದಲೂ ನಿದೇನೆ ಮಾಡುಲ್ಲ. ಇದಕ್ಕೆ ಮುಂಚೆ ಮಧ್ಯಾಹ್ನ ಊಟವಾದ ಮೇಲೆ ಒಂದು ಗಂಟೆ ಗೊರಕೆ ಹೊಡೆಯುತ್ತ ಗಡದ್ದು ನಿದ್ರೆ ಮಾಡುತ್ತಿದ್ದರು. ರಾತ್ರಿ ಊಟ ಮಾಡಿ ರೇಡಿಯೋ ಕೇಳಿ ಮುಗಿಸಿ, ಆ ಮಾತು ಈ ಮಾತು ಆಡ್ತಾ ಮಲಗಿದರೆ, ಬೆಳಗಿನ ತನಕ ಪಟಾಕಿ ಹೊಡೆದರೂ ಏಳುತ್ತಿರಲಿಲ್ಲ. ಅಂತಹವರು ಈ ವಾರದಿಂದ, ಮಧ್ಯಾಹ್ನ ಉಂಡು ಮಲಗುತ್ತಾರೆ. ಆದರೆ ಒಂದೈದು ನಿಮಿಷದಲ್ಲಿಯೇ, ನಿದ್ರೆ ಹತ್ತಿದ್ದವರು ಛಕ್ಕನೆ ಎದ್ದು 'ಲೇ, ಲೇ ಎದೆಗೂಡು ಯಾಕೋ ತುಡಿಯುತ್ತಿದೆ' ಎಂದು ಕಿರಿಚುತ್ತಾ ಎದ್ದು ಬಿಡುತ್ತಾರೆ.