ಮನಮಂಥನ
ಹತ್ತು ಹದಿನೈದು ನಿಮಿಷಗಳಲ್ಲಿ, ಈಗ ಸ್ವಲ್ಪ ಸಮಾಧಾನಕ್ಕೆ ಬಂದಿದೆ ಎನ್ನುತ್ತಾರೆ. ತಿರುಗಿ ಮಲಗುತ್ತಾರೆ, ಆದರೆ ಹಾಸಿಗೆಯಲ್ಲಿ ಹೊರಳಾಡುತ್ತಾ ಇರುತ್ತಾರೆಯೇ ವಿನಹಾ ನಿದ್ರೆಯೇ ಬರುಲ್ಲ. ರಾತ್ರಿಯಲ್ಲನಕ ಮೂರು ನಾಲ್ಕು ಬಾರಿ ಹೀಗೇ ಹೇಳುತ್ತಾರೆ. ಅರ್ಧ ಗಂಟೆ ಒಂದು ಗಂಟೆ ಒದ್ದಾಡಿದ ಮೇಲೆ ಜೊಂಪು ಹತ್ತುತ್ತೆ. ಒಂದೆರಡು ದಿನಗಳಲ್ಲಿ ಸರಿ ಹೋಗುತ್ತೆ ಅಂತಾರೆ. ಆದರೆ ದಿನದಿನಕ್ಕೂ ನಿದ್ರೆ ಕಡಿಮೆಯಾಗುವುದರ ಜೊತೆಗೆ ತುಂಬಾ ಗಾಬರಿಯಾದವರಂತೆಯೂ ಆಡ್ತಾರೆ. ನಿನ್ನೆ ಬೈಂದೂರಿನ ಸಂತೆ. ವಾರ ವಾರವೂ ಅಲ್ಲಿಗೆ ಹೋಗಿ, ಹತ್ತಿಪ್ಪತ್ತು ಲಾರಿ ದಿನಸಿಯನ್ನು ಕೊಂಡು ತರುವ ಮಾಮೂಲು, ಇವರದು. ಅದೇ ವ್ಯಾಪಾರ. ಈ ಸರ್ತಿ ನಾನು ಹೋಗುಲ್ಲ ; ಅಲ್ಲೇನಾದರೂ ಕಾಯಿಲೆ ಬಿದ್ದರೆ ? ಮತ್ತೆ ಲಾರಿಯಲ್ಲೇ ಹಿಂತಿರುಗಿ ಬರಬೇಕು. ಅಂತಹ ಕಠಿಣ ಪ್ರಯಾಣ ಈಗ ನನ್ನಿಂದ ಸಾಧ್ಯವಿಲ್ಲ ; ಎಂದು ಹೇಳಿ ವ್ಯಾಪಾರಕ್ಕೆ ಹೋಗಲೇ ಇಲ್ಲ. ಸಂತೆಗೆ ಹೋಗುವುದನ್ನು ಹಿಂದೆಂದೂ ಇವರು ತಪ್ಪಿಸಿಕೊಂಡವರಲ್ಲ. ಅದಕ್ಕೇ ನನಗೂ ಗಾಬರಿಯಾಯಿತು. ಹಠ ಹಿಡಿದು ಕರೆದುಕೊಂಡು ಬಂದೆ, ಸ್ವಲ್ಪ ಪರೀಕ್ಷೆ ಮಾಡಿ ನೋಡಿ.
ಎಂದು ವೆಂಕಮ್ಮ, ಗಂಡನನ್ನು ಡಾಕ್ಟರೆದುರಿಗೆ ಕೂರಿಸಿ ಹೇಳಿದಳು. ಸುಮಾರು ವರ್ಷಗಳ ಪರಿಚಯ. ಡಾಕ್ಟರ ಹತ್ತಿರ ಸದರ ಹೆಚ್ಚು ವಿಶ್ವಾಸವೂ ಉಂಟು ; ಸಂಕೋಚವೇನೂ ಇರಲಿಲ್ಲ.
'ನಿನಗೇನು ಬಂತೋ ಚಿನ್ನಯ್ಯ ! ಗರಡಿ ಮನೆಗೆ ಹೋಗಿ ಬರೋನು, ನೀನು. ಪಟ್ಟಾಗಿ ತಿಂದು ಪಗದನ್ನೂ ನಿದ್ರೆ ಮಾಡೋನು. ನಿಂಗ್ಯಾಕೆ ಹೀಗಾಯಿತು? ಹೆರಿಗೆಯ ಆಸ್ಪತ್ರೆಗೆ ಹೆಂಡತಿಯನ್ನು ಮರುಚಲ ಬಸುರಿಗೆ ಕರೆದುಕೊಂಡು ಹೋದಾಗಲೂ, ನೀವು ನೋಡಿಕೊಳ್ಳಿ ಡಾಕ್ಟರೇ ! ಸಂತೆ ವ್ಯಾಪಾರಕ್ಕೆ ಹೋಗಲೇಬೇಕು, ಎಂದು ಹೊರಟುಹೋದ ಧೀರ, ನೀನು, ವ್ಯಾಪಾರ ಸಂಪಾದನೆ ಅಂದರೆ ಅಷ್ಟು ಮೋಜು, ನಿನಗೆ, ಅಂತಹ ಜುಗ್ಗ ; ಸಂತೆಗೆ ಹೋಗಲಿಲ್ಲ ಎಂದರೆ, ಏನೋ ಮಹತ್ತಿನದಾಗಿರಬೇಕು. ಏನಾಗುತ್ತೆ ಹೇಳು ; ವಿವರವಾಗಿ ಹೇಳು, ಸಂಕೋಚ ಪಡಬೇಡ' ಎಂದರು ಡಾಕ್ಟರು.
ಮಂಡೀ ವ್ಯಾಪಾರವನ್ನು ಭಾರೀ ಪ್ರಮಾಣದಲ್ಲಿ ಮಾಡುವವರಿಗೆ, ಎಂತಹ ಸಂಕೋಚವೂ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ಮದುವೆಯಾದ ಹೆಂಡತಿಯ ಎದುರಿಗೆ ಹೇಳಿಕೊಳ್ಳಲು ವಾಮಾನಿಕೆ ಇರಬಹುದು. ಬೈಂದೂರಿನ ಸಂತೆಯಲ್ಲಿ ಸೀರೆಯನ್ನು ಯಾರಾದರೂ ಹರವು ಹಾಕಿದ್ದರೆ ; ಆದಕಾರಣ ಒಳಕೊಠಡಿಗೆ ಕರೆದು ಕೊಂಡು ಹೋದೆ, ಈಗ ಹೇಳು ಎಂದೆ.