ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೪೯

ಮಗಳ ಮದುವೆ, ಮಗನ ಮುಂಜಿ, ಮೊಮ್ಮಗುವಿಗೆ ಆರತಿ, ಇತ್ಯಾದಿ ಏನಾದರೂ ಕಾರಣ ನೀಡಿ ಇನ್ನೂರು ಮುನ್ನೂರು ಹಾಗಿರಲಿ ಸಾವಿರ ಎರಡು ಸಾವಿರ ಕೇಳಲು ಶುರು ಮಾಡಿದ್ದ. ಆ ಕಾಟವು ತಪ್ಪಿತು. ಈಗ ನಿಸೂರಾಗಿರಬಹುದು' ಎಂದ.

ಆಗ ನನಗೆ ಸ್ವಲ್ಪ ಜ್ಞಾನೋದಯವಾಯಿತು.

'ಮಂಡಿಯ ಲೆಕ್ಕದ ಪುಸ್ತಕಗಳಲ್ಲಿ ಜಾದೂ ಮಾಡುತ್ತಾರೆ ಎಂದು ಪ್ರತೀತಿ, ಚಿನ್ನಯ್ಯ, ಮಾಲೀಕರಿಗಾಗಿ ಒಂದು ಲೆಕ್ಕ, ದುಡಿಯುವವರದು ಒಂದು ಲೆಕ್ಕ ವರಮಾನ ತೆರಿಗೆ, ಮಾರಾಟ ತೆರಿಗೆ, ಇವರಿಗಾಗಿ ಒಂದು ಲೆಕ್ಕ, ಎಂದನ್ನುತ್ತಾರೆ. ನಿನ್ನ ಮುದಿ ಮುತ್ಸದ್ದಿಗೆ ಇವೆಲ್ಲದರ ಪರಿಚಯವೂ ಇದ್ದಿರಬಹುದು ಅಲ್ಲವೇ?' ಎಂದು ಯಾವ ಕುತೂಹಲವನ್ನೂ ತೋರಿಸದೆ, ಕೇಳಿದೆ.

ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ಚಿನ್ನಯ್ಯ, 'ಏನೋ ಅಂತಿದ್ದೆ, ನಮ್ಮ ಡಾಕ್ಟರು ಬಲು ಪಾಖಡಾ ಆಸಾಮಿ, ಸತ್ತು ಸ್ವರ್ಗದಲ್ಲಿರುವವರ ಮಾತು ಯಾಕೆ ಎತ್ತಬೇಕು, ಸಾರ್ !” ಎಂದ.

ಇದಾಗಿ ಈಗ್ಗೆ ಮೂರು ನಾಲ್ಕು ವರ್ಷಗಳಾಗಿವೆ. ಎದೆ ತುಡಿಯುತ್ತದೆ, ಗಾಬರಿಯಾಗುತ್ತಿದೆ, ಎಂದು ಒಂದು ಬಾರಿಯೂ ಚಿನ್ನಯ್ಯ ನನ್ನ ಬಳಿಗೆ ಬಂದೇ ಇಲ್ಲ. ಮೊನ್ನೆ ಸಾಹುಕಾರ್ ಸೀನಪ್ಪನವರ ಮದುವೆ ಮನೆಯಲ್ಲಿ ಸಿಕ್ಕಿದ್ದ. ಹೇಗಿದೆ ಎಂದು ಕೇಳಿದೆ. 'ಗೂಳಿಹಾಗಿದ್ದಾರೆ. ಅವರಿಗೇನು ಕಷ್ಟ?' ಎಂದು ಪಕ್ಕದಲ್ಲಿದ್ದ ಅವನ ಹೆಂಡತಿಯು ಯೋಗಕ್ಷೇಮವನ್ನು ಉತ್ತರಿಸಿದಳು.

ಅಂಗಡಿಯ ಅಂತರಂಗದ ಲೆಕ್ಕವನ್ನು ಮುತ್ಸದ್ದಿಯು ಎಂದು ಬಹಿರಂಗ ಪಡಿಸಿ ಬಿಡುತ್ತಾನೆ! ಎಂಬ ತೀವ್ರ ಆತಂಕವು ಚಿನ್ನಯ್ಯನಿಗೆ ಹತ್ತಿಕೊಂಡಿದ್ದಿರಬೇಕು. ಇಂತಹ ತೊಂಚಾವಂಚದ ಪರಿಸ್ಥಿತಿಯನ್ನು ಯಾರೆದುರಿಗೂ ಹೇಳಿಕೊಳ್ಳುವಂತಿಲ್ಲ. ಅನುಭವಿಸುವುದಕ್ಕೂ ಅಸಾಧ್ಯವಾದುದು. ರಹಸ್ಯವನ್ನು ತೆರಿಗೆಯವರಿಂದ ದೂರ ಇರಿಸುತ್ತೇನೆ ಎನ್ನುವ ಕಾರಣದಿಂದಲೇ ನೂರು, ಸಾವಿರ ಅಂತ ಮುತ್ಸದ್ದಿಯು ಉಪಾಯವಾಗಿ ಪೀಕುತ್ತಿದ್ದ. ಸಂಬಳವನ್ನು ಕೊಟ್ಟು ಕೈಕೆಳಗೆ ಇಟ್ಟುಕೊಂಡ ಯಃಕಶ್ಚಿತ್ ನೌಕರನಿಗೆ ಹೆದರಬೇಕಲ್ಲ ಎಂದು ಚಿನ್ನಯ್ಯನಿಗೆ ತುಂಬಾ ಬೇಸರ ಬಂದಿರಬೇಕು. ಆದರೆ ಮುತ್ಸದ್ದಿಯನ್ನು ಎದುರು ಹಾಕಿಕೊಳ್ಳುವಂತಿಲ್ಲ. ಮುಳ್ಳಿನ ಮೇಲೆ ಬಿದ್ದ ಸೆರಗನ್ನು ಉಪಾಯವಾಗಿ ತೆಗೆಯಬೇಕೇ ಹೊರತು, ಕಿತ್ತೆಳೆಯುವಂತಿಲ್ಲ. ಹಾಗಾಗಿತ್ತು. ಚಿನ್ನಯ್ಯನಿಗೆ ಮುತ್ಸದ್ದಿ ಮುಳ್ಳು ಸತ್ತು ಹೋಯಿತು. ಚಿನ್ನಯ್ಯ ಈಗ ನಿಶ್ಚಿಂತನಾದ. ಆತಂಕವೇನೂ