80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ.
ಎದೆ ತುಡಿದಂತಾಗುವುದು,ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ.ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ.ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು.ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು.
೪. ತಕ್ಕ ಹೆಂಡತಿಯಲ್ಲ
ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ.ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು.
ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು,ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು.ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು.ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ,ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು.ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.