ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೫೯

ಅಂಜುತ್ತಿರುವವರ ಮೇಲೆ ಕಪ್ಪೆಯನ್ನು ಹಾಕಿದಂತೆ, ಅರ್ಜುನನ ಆತಂಕವನ್ನು ಉಲ್ಬಣಿಸಿರಬೇಕು. ಮನೆಗೆ ಹಿಂತಿರುಗಿದಾಗ, ಬಾಗಿಲ ಹಿಂದೆ ಮರೆಯಲ್ಲಿ ನಿಂತ ಮಗುವು ಅನಿರೀಕ್ಷಿತವಾಗಿ 'ಭೇ' ಎಂದು ಅರಚಿ ಬೆದರಿಸಿದರೆ, ದೊಡ್ಡವರು ಕೂಡ ತಟ್ಟಂತ ಬೆಚ್ಚುವುದಿಲ್ಲವೆ ?

ನಚ ಶಕ್ಟೋಮಿ ಅವಸ್ಥಾತುಂ, ಭ್ರಮತೀವಚ ಮೇ ಮನಃ ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ

ನಿಂತುಕೊಳ್ಳಲೂ ನನಗೆ ಶಕ್ತಿಯಿಲ್ಲ. ನನ್ನ ಮನಸ್ಸು ಎತ್ತೆತ್ತಲೋ ಸುತ್ತುತ್ತಿದೆ. ಕೇಡನ್ನುಂಟುಮಾಡುವ ಅಪಶಕುನಗಳನ್ನು ಕಾಣುತ್ತಿದ್ದೇನೆ.

ಸೀದಂತಿ ಮನು ಗಾತ್ತಾಣಿ ಮುಖಂ ಚ ಪರಿಶುಷ್ಕತಿ ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ

ನನ್ನ ಅವಯವಗಳು ಕುಂದಿ ಬೆಂಡಾಗುತ್ತಿವೆ. ಮುಖವೂ ಬಾಡುತ್ತಿದೆ. ಶರೀರದಲ್ಲಿ ಕಂಪನವೂ, ಮೈಗೂದಲು ನಿಮಿರಿ ನಿಲ್ಲುವುದೂ ಆಗುತ್ತಿದೆ.

ಗಾಂಡೀವಂ ಸಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ.

ಗಾಂಡೀವವು ಕೈಯಿಂದ ಜಾರುತ್ತಿದೆ. ಚರ್ಮವು ಸುಡುತ್ತಿದೆ.

ಈ ರೀತಿ ಆತಂಕದಿಂದ ನರಳುತ್ತಿರುವ ಅರ್ಜುನನ ಪರಿಸ್ಥಿತಿಯನ್ನು ವ್ಯಾಸರು ವರ್ಣಿಸಿದ್ದಾರೆ. ಆತಂಕದಿಂದ ದೇಹದಲ್ಲಿ ಕಾಣಬರುವ ಈ ಚಿಹ್ನೆಗಳೆಲ್ಲವನ್ನೂ, ಈ ಮೊದಲು ಉದಾಹರಿಸಿದ ಲಚ್ಚಮ್ಮಣ್ಣಿಯಲ್ಲೂ, ಲತೀಫ್‌ನಲ್ಲೂ ; ಎದೆಗೂಡು ತುಡಿದ ಚಿನ್ನಯ್ಯನಲ್ಲೂ ಕಂಡಿದ್ದೆವು.

ಅರ್ಜುನನ ಆತಂಕನಿವಾರಣೆಗೆ, ಅವನ ಸಾರಥಿಯಾಗಿದ್ದ ಶ್ರೀಕೃಷ್ಣ ಮಾಡಿದ್ದೇನು ? ಸಾರಥಿ ಎಂದಾಗ ಅರ್ಜುನನ ರಥದ ಸಾರಥೀ ಮಾತ್ರವಲ್ಲ. ಅರ್ಜುನನ ಮನಸ್ಸಿಗೂ ಸಾರಥಿಯಾಗಿ, ಮನಸ್ಸನ್ನು ಹದಪಡಿಸಿ ತನ್ಮೂಲಕ ಅರ್ಜುನನ ದೇಹಪರಾಕ್ರಮವನ್ನೂ ಅನುಗೊಳಿಸಿದ ಶ್ರೀಕೃಷ್ಣ

ಸ್ವಯಂ ನಿರ್ಣಯಿಸಲಾರದೆ, ಅನುಮಾನ, ಸಂಶಯಗಳಿಂದ ಕುಕ್ಕಲ್ಪಟ್ಟ ಅರ್ಜುನನನ್ನು 'ಉಪದೇಶಕ್ಕೆ ಗುರಿಮಾಡಿದ. ತಾನು, ತನ್ನ ನೆಂಟರಿಷ್ಟರು, ತನ್ನ ದಾಯಾದಿಗಳು ; ಹೋರಾಡಬೇಕಾದವನು ತಾನು ತನ್ನವರನ್ನು ತಾನೇ ಜಯಿಸಬೇಕು, ನಿರ್ಮೂಲ ಮಾಡಬೇಕು, ಎಂದು ಅರ್ಜುನ ಕಾತರಗೊಂಡಿದ್ದ ಇವೆಲ್ಲದರಲ್ಲೂ ಇರುವ ಕೂಟಸ್ಥವಾದ 'ತಾನು' ಎಂಬುದರ ನಿಜವಾದ ಪರಿಚಯವನ್ನು ಮೂಲಭೂತವಾದ ಅರಿವನ್ನು ಶ್ರೀಕೃಷ್ಣ ಅರ್ಜುನನಿಗೆ ಪ್ರತ್ಯಕ್ಷ ಮಾಡಿ ಕೊಟ್ಟ. ಅರ್ಜುನನ ಸಂಶಯಗಳೆಲ್ಲವೂ ನಿವಾರಣೆಯಾದುವು. 'ತಾನು'