ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೬೮

ಮನಮಂಥನ

ಅತ್ತಿಗೆಯ ಮೇಲೆ ಬಿದ್ದಿತ್ತು. ಹೊಸದಾಗಿ ಬಂದ ಕಿರಿಯ ವಾರಗಿತ್ತಿಯೂ, ಮನೆಯಲ್ಲಿದ್ದಾಗ ಅಡಿಗೆಯ ಮನೆಯಲ್ಲಿ ನೆರವಾಗುತ್ತಿದ್ದಳು. ಹೇಳಿದ ಕೆಲಸವನ್ನು ನಗುನಗುತ ಮಾಡುತ್ತಿದ್ದಳು. 'ಇಂತಹ ಒಳ್ಳೆಯ ಹೆಣ್ಣು ನನ್ನ ಮೈದುನನಿಗೆ ಸಿಕ್ಕಿದಳಲ್ಲಾ' ಎಂದು ದೊಡ್ಡಾಕೆಯು ಹಿಗ್ಗಿಯೂ ಇದ್ದಳು.

ಒಂದು ಸಂಜೆ ಮೈದುನ ಮನೆಗೆ ಬಂದ. ಅಡಿಗೆಯ ಮನೆಯಲ್ಲಿ ಅತ್ತಿಗೆಯು ಇದ್ದಳು. ಕೈಕಾಲು ತೊಳೆದುಕೊಂಡ ಮೇಲೆ ಅತ್ತಿಗೆಯ ಬಳಿಗೆ ಹೋಗಿ ಎಂದಿನಂತೆ 'ಕಾಫಿ ಕೊಡಮ್ಮ, ತಿನ್ನಲು ಏನಾದರೂ ಇದೆಯೇ' ಎಂದು ವಿನಯವಾಗಿಯೇ ಕೇಳಿದ. ಆಕೆಗೆ ಅಂದು ಎಂತದೋ ಬೇಜಾರು, ಯಾವ ತಲೆನೋವು ಬಂದಿತ್ತೋ ಏನೋ, 'ನಿನ್ನ ಹೆಂಡತಿಯ ಕೈಯಲ್ಲಿ ನಿನಗೇನು ಬೇಕೋ ಅದನ್ನು ಮಾಡಿಸಿಕೋ' ಎಂದಳು. ಧ್ವನಿಯಲ್ಲಿ ಸಿಡುಕೂ ಇತ್ತು. 'ಕೆಲಸಕ್ಕೆ ಹೋಗಿದ್ದಾಳೆ. ಇನ್ನೂ ಹಿಂತಿರುಗಿ ಬಂದಿಲ್ಲ, ಅವಳನ್ಯಾಕೆ ಅಂತೀ' ಎಂದ. 'ಅನ್ನೋದೇನು ಬಂತು, ಆ ಮಹಾರಾಣಿಗೂ ನಿನಗೂ ಜೀತದಾಳಲ್ಲ, ನಾನು' ಎಂದಳು ಅತ್ತಿಗೆ. ಇವನಿಗೂ ರೇಗಿತು, ಮಾತಿಗೆ ಮಾತು ಬೆಳೆಯಿತು. 'ಚಿಕ್ಕಂದಿನಿಂದಲೂ ಸಾಕಿ ಸಲಹಿದ ನಾನು ಮಾಡಿದ್ದು ತಪ್ಪ, ಅಂದಿದ್ದು ತಪ್ಪು. ಮೊನ್ನೆ ನಿನ್ನೆ ಬಂದ ನಿನ್ನ ಹೆಂಡತಿಯನ್ನು ವಹಿಸಿಕೊಂಡು ಮಾತಾಡ್ತೀಯಲ್ಲ ! ನಿನ್ನ ಗರ್ವ ಎಷ್ಟು ? ಎಲ್ಲಾದರೂ ನಾಶವಾಗಿ ಹೋಗು, ಹಾಳಾಗಿಹೋಗು' ಎಂದು ಹೇಳಿ ತಪ್ಪಲೆ ಕುಕ್ಕಿದಳು.

'ನಾಶವಾಗಿ ಹೋಗು, ಹಾಳಾಗಿ ಹೋಗು' ಎನ್ನುವ ಮಾತುಗಳನ್ನು ಕೇಳಿದಾಗ, ಇವ ಹೊರಕ್ಕೆ ಬಂದ. ಹೆತ್ತ ತಾಯಿಗಿಂತಲೂ ಹೆಚ್ಚು ಆದರದಿಂದ ಆತನಕ ಕಾಪಾಡಿದ ಹಿರಿಯಾಕೆ 'ನಾಶವಾಗಿ ಹೋಗು' ಎಂದರೆ ಅದು ದಿಟವಾಗಿಬಿಡುತ್ತದೆ, ಎನ್ನುವ ತೀವ್ರ ಭಯವುಂಟಾಯಿತು. ರೇಗಿದ್ದ ಮನಸ್ಸಿಗೆ ಅತಿ ಭಯವು ಬಡಿದಾಗ ದಿಗ್ದಮೆ ಹಿಡಿದಂತಾಯಿತು. ಮನೆಯನ್ನು ಬಿಟ್ಟು ಹೊರಟ. ಎಲ್ಲಿಗೆ ಎಂದು ಯೋಚಿಸುವ ಸ್ಥಿತಿಯಲ್ಲಿರಲಿಲ್ಲ. ಎಲ್ಲಾದರೂ ಬಲು ದೂರ ಹೋಗಬೇಕು, ಆ ಶಾಪದಿಂದ ಬಹಳ ದೂರವಾಗಬೇಕು ಎನ್ನುವುದೊಂದೇ ಆತುರ, ಅದೊಂದೇ ಕಾರತ

ವಿಮನಸ್ಕನಾಗಿ ಹೋಗುತ್ತಿದ್ದವನ ಹಾದಿಯಲ್ಲಿ ಬಸ್‌ ನಿಲ್ದಾಣವಿತ್ತು. ಎದುರು ಕಂಡ ಬಸ್ಸಿನಲ್ಲಿ ಕುಳಿತುಕೊಂಡ. ಏನು ಮಾಡುತ್ತಿದ್ದೀನಿ ಎಂದು ತಿಳಿದರೆ ತಾನೆ ? ಬಸ್ ಹೊರಟಿತು. ಸ್ವಲ್ಪ ದೂರ ಹೋದ ಮೇಲೆ, ಇವನ ಬಳಿಗೆ ಕಂಡಕ್ಟರ್ ಬಂದು ಯಾವ ಊರಿಗೆ ಟಿಕೆಟ್ ಬೇಕು ? ಎಂದು ಕೇಳಿದ. ಯಾಂತ್ರಿಕವಾಗಿ ಜೇಬಿಗೆ ಕೈ ಹಾಕಿದ, ಅಲ್ಲೇನಿತ್ತು ? ಲೊಳಲೊಟ್ಟೆ ಪೆಂಗುಪೆಂಗಾಗಿ