ಪುಟ:ಮಹರ್ಷಿ ಅರವಿಂದ ಘೋಷ್.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫. ದೇಶಸೇವೆ ಜನರ ಮನಸ್ಸಿಗೆ ಇದು ಎಳ್ಳಷ್ಟೂ ಬರಲಿಲ್ಲ ಪೂರ್ವ ಬಂಗಾಲವನ್ನು ಆಸಾಮಕ್ಕೆ ಕೂಡಿಸುವದು ಗೊತ್ತಾಗಿತ್ತು. ಆನಾವವು ಅಶಿಕ್ಷಿತರ ಪ್ರಾಂತವು. ಆದಕಾರಣ ಆಸಾಮದ ಕೆಂಚರೊಡನೆ ಕೂಡುವದು ಪೂರ್ವ ಬಂಗಾಲಿಗಳಿಗೆ ಸೇರಲಿಲ್ಲ. ಕೆಲವು ಜನ ರಿಗೆ ಕಲಕತ್ತೆಯನ್ನು ಬಿಟ್ಟು ತಮ್ಮ ರಾಜಧಾನಿ ತಾಕಾ ವಟ್ಟಣವಾದದ್ದನ್ನು ನೋಡಿ ಕೆಡಕೆ ನಿಸಿತು. ಅನೇಕ ಶ್ರೀಮಂತರಿಗೆ ತಮ್ಮ ಹೊಲ ಮನೆಗಳು ಎರಡೂ ಭಾಗಗಳಲ್ಲಿ ಬರು ತಿದ್ದುದರಿಂದ ನ್ಯಾಯಕೋರ್ಟಿಗೆ ಹೋಗುವದಾದಲ್ಲಿ ಕಲಕತ್ತೆ ಹಾಗೂ ಡಾಕಾಗಳೆಂಬ ಎರಡೂ ಕಡೆಗೆ ಓಡಾಡಬೇಕಾಗಹತ್ತಿತು. ಕಲಕತ್ತೆಯು ದೊಡ್ಡ ವ್ಯಾಪಾರದ ಸ್ಪಳವೂ ಹಲವು ಆಟನೋಟಗಳ ಆಗರವೂ ಆದುದರಿಂದ ಒಂದು ಕಾರ್ಯ ನಿಮಿತ್ತವಾಗಿ ಕಲ ಕತ್ತೆಗೆ ಹೋದರೆ ಎರಡು ಮೂರು ಕೆಲಸಗಳನ್ನು ಏಕಕಾಲಕ್ಕೆ ಮಾಡಿಕೊಳ್ಳಲಿಕ್ಕೆ ಬರು ತಿತ್ತು ಡಾಕಾಕ್ಕೆ ನ್ಯಾಯಕೋರ್ಟಗೆ ಹೋದರೆ ಶರ್ಯತ್ತಿನ ಆಟನೋಟಗಳ ಸಲು ನಾಗಿ ಕಲಕತ್ತೆಗೆ ಬರಬೇಕಾಗಹತ್ತಿತು ಹೀಗೆ ಒಂದಿಲ್ಲೊಂದು ರೀತಿಯಿಂದ ಶ್ರೀಮಂತ ರಿಂದ ಬಡವರ ವರೆಗೆ ಎಲ್ಲರೂ ಕೆಣಕಲ್ಪಟ್ಟರು. ಆಗ ಜನರು ದೊಡ್ಡ ಸಭೆಗಳನ್ನು ನೆರಿಸಿ, ರರಾವು ವಾಸು ಮಾಡಿ, ಸರಕಾರಕ್ಕೆ ವಂಗದೇಶದ ಭಂಗ ಮಾಡಬಾರದೆಂದು ಬೇಡಿಕೊಂ ಡರು ಆದರೆ ಎಲ್ಲವೂ ನಿರರ್ಥಕವಾಯಿತು. ಸುಡುವದರಲ್ಲಿ ಹುಲ್ಲು ಹಾಕುವಂತೆ ಕರ್ರುನ ಸಾಹೇಬರು ಬಂಗಾಲಿಗಳು ಕೈಲಾಗದ ಹೇಡಿಗಳೆಂದು ದೂಷಿಸಿದರು. ವರಿಷ್ಠ ಅಧಿಕಾರಿಯೇ ಪ್ರಜಾಪೀಡನೆಗೆ ಅನುಕೂಲವಿದ್ದಬಳಿಕ ಕೆಳಗಿನ ಅಧಿಕಾರಿಗಳಿಗೆ ಕೇಳುವ ವರಾರುಳಿದರು? ಕೋತಿಯ ಕೈಯಲ್ಲಿ ಕೊಳ್ಳೆ ಕೊಟ್ಟಂತೆಯಾಯಿತು. ಮಂಗೀಯರು ೭೦ ಸಾವಿರ ಸಹಿಗಳ ದೊಡ್ಡ ಹೊರೆಯನ್ನು ಬಂಗಾಲದ ವಿಭಾಗ ಮಾಡಬಾರದೆಂಬ ಬಗ್ಗೆ ಸರ ಕಾರಕ್ಕೆ ಕಳಿಸಿದರು. ಎಲ್ಲವೂ ವ್ಯರ್ಥ. ೧೯೦ನೆಯ ಇಸವಿಯ ೧೬ನೆಯ ಅಗಷ್ಟವು ಸಮಿ ವಿಸಿತು ದೇಶದಲ್ಲಿ ಒಂದೇ ಗೊಂದಲವೆದ್ದಿತು. ಸರಕಾರದವರು ೧೬ನೆಯ ಅಗಷ್ಟಕ್ಕೆ ಬಂಗಾಲದ ವಿಭಾಗವಾಯಿತೆಂದು ಪ್ರಕಟಿಸಿದರು. ಬಂಗಾಲಿಗಳು ಅದಕ್ಕೂ ಮುಂಚಿತ ವಾಗಿಯೇ ಅಂದರೆ ೭ನೆಯ ಅಗತ್ಯಕ್ಕೆ ಸಭೆ ಮಾಡಿ ಸರಕಾರದವರು ತಮ್ಮ ಮಾತಿಗೆ ಮಾನ ಕೊಡದಿದ್ದರೆ ಬ್ರಿಟಶ ಮಾಲಿಗೆ ಬಹಿಷ್ಕಾರ ಹಾಕುವದನ್ನು ನಿಶ್ಚಯಿಸಿ ಸಾವಿರಾರು ಜನರು ಹಾಗೆ ಆಣೆ ಇಟ್ಟು ಕೊಂಡರು. ೧೬ನೆಯ ಅಗಷ್ಟವು ರಾಷ್ಟ್ರೀಯ ಸೂತಕದ ದಿನ ವೆಂದು ಎಲ್ಲರೂ ವಾಲಿಸಹತ್ತಿದರು. ಪ್ರತಿಯೊಂದು ಊರಲ್ಲಿ ಎಲ್ಲ ಜನರು ಅಂದು ಒತ್ತ ದ್ವಿಗೆ ಕೂಡಿ ಬೊಕ್ಯನೆತ್ತಿಯಿಂದ ಪಾದರಕ್ಷೆಗಳಿಲ್ಲದೆ ಗಂಗೆಯ ಧಡಕ್ಕೆ ಹೋಗಿ ಸ್ನಾನ ಮಾಡಿ ಉಪವಾಸದಿಂದಿರುತ್ತಿದ್ದರು. ಈ ಕ್ರಮವು ಮುಂದೆ ಬಂಗಾಲದ ವಿಭಾಗಣೆಯು ರದ್ದು ಆಗುವವರೆಗೆ ನಡೆದಿತ್ತು. ಸರಕಾರದವರ ಕಲ್ಪನೆಯೇನು, ಈ ಜನರಲ್ಲಿ ಶಸ್ತ್ರಾಸಗಳಿಲ್ಲ; ಇವರಿಗೆ ಪರರಾಷ್ಟ್ರಗಳ ಸಹಾಯವಿಲ್ಲ, ಇವರಲ್ಲಿ ಒಕ್ಕಟ್ಟು ಸಹ ಇಲ್ಲ; ಒಂದು ಜಾತಿಯವರು ಮತ್ತೊಂದು ಜಾತಿ