ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೂ ಮಿ ಕೆ ಈ ಗ್ರಂಥಕರ್ತನು ಜೈನಮತದವನು ; ಮಾಘಣಂದಿಪಂಡಿತಮುನೀಶ್ವರನ ಶಿಷ್ಯನು. 66 ಈತನು ತನಗೆ ಹಿಂದೆ ಇದ್ದ ಕವಿಗಳಲ್ಲಿ ಕವಿಚಕ್ರವರ್ತಿಯಾದ ಜನ್ನ ಕವಿಯನ್ನು (ಕ್ರಿ. ಶ. 1230) ಸ್ತುತಿಸುವುದರಿಂದ ಆತನಿಗೆ ಈ ಚೇಯವನೆಂದು ವ್ಯಕ್ತವಾಗುತ್ತದೆ. ಇವನ ಗ್ರಂಧದಿಂದ ಮಲ್ಲಿಕಾರ್ಜುನನು (ಸು. 1245) ಸೂಕ್ತಿ ಸುಧಾರ್ಣವದಲ್ಲಿ ಪದ್ಯಗಳನ್ನು ಉದ್ಧರಿಸಿ ಬರೆದಿರುವುದರಿಂದ ಅವನಿಗಿಂತ ಸ್ವಲ್ಪ ಹಿಂದೆ ಇದ್ದಿರಬೇಕು. ಅದುದರಿಂರ ಈತನು ಸುಮಾರು ಕ್ರಿ. ಶ. 1235 ಇದ್ದಿರ ಬಹುದು ” ಎಂದು ಕವಿಚರಿತ್ರೆಕಾರರು ಬರೆಯುತ್ತಾರೆ ಈ ಗ್ರಂಧದ ಆಶ್ವಾಸ ೧...೬೯ ರಲ್ಲಿ ಪೂರೈಕವಿಗಳಾದ ಪಂಪ, ಪೊನ್ನ, ನಾಗಚಂದ್ರ, ರನ್ನ, ಬಂಧುವರ್ಮ, ನೇಮಿಚಂದ್ರ, ಜನ್ನ, ಅಗ್ಗಳ-ಇವರ ಕೃತಿಸೌಂದಯ್ಯವು ತನ್ನ ಗ್ರಂಧದಲ್ಲಿ ಇರಲೆಂದು ಆಶಿಸುತ್ತಾನೆ ಅದೇ ಆಶ್ವಾಸದ ೫೬-೬೦ ಪದ್ಯಗಳಲ್ಲಿ ತನ್ನ ಯೋಗ್ಯತೆಯನ್ನು ಹೇಳಿಕೊಂಡಿದ್ದಾನೆ. ಈತನು ಇದನ್ನು ಯಾವ ಗ್ರಂಥವನ್ನು ಬರೆದಿದ್ದಾನೋ ಗೊತ್ತಿಲ್ಲ ಈ ಶಾಂತೀಶ್ವರ ಪುರಾಣವ ಹದಿನಾರನೆಯ ತೀರ್ಧಕರನಾದ ಶಾಂತಿನಾಧನ ಚರಿತವಾಗಿದೆ ಇದೊಂದು ಕನ್ನಡದಲ್ಲಿ ಪ್ರಸಿದ್ಧವಾದ ಅತ್ಯುತ್ತಮವಾದ ಚಂಪೂ ಪ್ರಬಂಧ. ಇದರಲ್ಲಿ ಹದಿನಾರು ಆಶ್ವಾಸಗಳಿವೆ 66 ಈ ಗ್ರಂಧವ ಲಲಿತವಾಗಿದೆ. ಕವಿ ಧಾರಳವಾಗಿ ಬರೆಯುತ್ತಾನೆ. ಪದ ಗಳು ನಿರರ್ಗಳವಾಗಿ ಓಡುತ್ತವೆ. ಕಾವ್ಯದಲ್ಲಿ ವರ್ಣನೀಯಾಂಶಗಳೆಲ್ಲಾ ಚೆನ್ನಾಗಿ ವರ್ಣಿತವಾಗಿವೆ ಎಂದು ಕವಿಚರಿತ್ರೆಕಾರರು ಈ ಗ್ರಂಥದ ವಿಷಯದಲ್ಲಿ ಅಭಿ ಪ್ರಾಯಪಡುತ್ತಾರೆ. ಹೊನ್ನನೂ ಕೂಡ ಈ ತೀರ್ಥಕರನ ಚರಿತ್ರೆಯನ್ನೇ ಶಾಂತಿಪುರಾಣವೆಂಬ ಹೆಸ ರಿನಿಂದ ಬರೆದಿರುತ್ತಾನೆ. ಗ್ರಂಧವು ಬಲುದೊಡ್ಡದಾದುದರಿಂದ ವಿದ್ಯಾರ್ಥಿಗಳ ಸೌಕಯ್ಯಕ್ಕಾಗಿ ಬೇರೆ ಬೇರೆ ಸಂವುಟವಾಗಿ ಮಾಡಿ, ಮೊದಲನೆಯ ಸಂಪುಟದಲ್ಲಿ ೫೪ ಆಶ್ವಾಸಗಳನ್ನು ಮುದ್ರಿಸಿರುತ್ತೇನೆ. ಶಾ|| 18-7-12, ಪ್ರವರ್ತಕ.