ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧದ ಸಿದ್ಧತೆ ಏಕಾದಶ ಪರಿಚ್ಛೇದ. -was ಯುದ್ಧದ ಸಿದ್ಧತೆ. ರಜಪೂತ ಮಾನಸಿಂಹನು | ನಿಜಧರ್ಮವ ಮರೆದು ರಾಜಪುತ್ರ.ತಿಲಕನಂ | ತ್ಯಜಿಸಿದನು ನಾಶಗಯ್ಯ ! ಜಮೀರವ ಸೈನ್ಯಯುಕ್ತ ಕುಲಹಂತಾರಂ || ೧ 11 ಪತಾಪಸಿಂಹನು ಮೇವಾಡದ ಹಳ್ಳಿಗಳನ್ನು ಜನಶೂನ್ಯವಾಗಿ ಮಾಡಿ, ಗುಡ್ಡ ಆಗಾಡು ಪ್ರದೇಶದಲ್ಲಿ ಆಶ್ರಯವನ್ನು ಹೊಂದಿದ್ದನು. ಈ ಪ್ರದೇಶವು ಉತ್ತರ ದಲ್ಲಿ ಕಮಲಮಿರದಿಂದ ದಕ್ಷಿಣಕ್ಕೆ ಋಷಭನಾಧ* ( ರಿಕಬನಾಧ )ದ ವರೆಗೂ, ಪಶ್ಚಿಮದಲ್ಲಿ ಮೊರಪುರದಿಂದ ಪೂರ್ವಕ್ಕೆ ಸಾತೋಲದ ವರೆಗೂ ವಿಸ್ತ್ರತವಾ ಗಿತ್ತು. ಇದು ಸುಮಾರು ನಾಲ್ವತ್ತು ಕ್ರೋಶ ಚೌರಸ ಪ್ರದೇಶವಾಗಿದ್ದಿತು. ಇದರ ನಾಲ್ಕೂ ಕಡೆಗಳಲ್ಲಿ ದುರ್ಭೇದ್ಯವಾದ ಪರ್ವತಪ್ರಾಕಾರಗಳು ಸುತ್ತುಗಟ್ಟಿದ್ದವು. ಮಧ್ಯಭಾಗದ ಕೆಲವೆಡೆಯಲ್ಲಿ ದುರಾರೋಹವಾದ ಪರ್ವತ; ಬೇರೆ ಕೆಲವೆಡೆ ಯಲ್ಲಿ ಘನವಿನ್ಯಸ್ತವಾದ ತಮಸಾಚ್ಚನ್ನ ಭೂಮಿಯು ಯಾವತ್ತು ಸ್ಥಳವು ಕಲ್ಲು ಗಿಡಗಂಟೆಗಳಿಂದ ತುಂಬಿಹೋಗಿತ್ತು. ಮತ್ತು ಏರ-ಇಳವುಗಳಿಂದ ಕೂಡಿಹೋಗಿ ದ್ದಿತು. ಈ ಪ್ರದೇಶದಲ್ಲಿ ಯಾವ ತರದ ಸಸ್ಯಾದಿಗಳೂ ಬೆಳೆಯುತ್ತಿರಲಿಲ್ಲ. ಸುತ್ತ ಲೂ ನೋಡಿದರೆ, ಅಂಕುಡೊಂಕಾದ ಘಟ್ಟದ ಮಾರ್ಗಗಳೂ, ವಕ್ರಗಾಮಿಗಳಾದ ಗಿರಿನದಿಗಳೂ ಕಾಣುತ್ತಿರುವವು; ಇವುಗಳ ಹೊರತು ಈ ಸ್ಥಳದಲ್ಲಿ ಬೇರೆ ದೃಶ್ಯವಿಲ್ಲ. ತಿಂದನು. ಇದರಿಂದಲೇ ಅಕಬರನು ಮರಣವನ್ನು ಹೊಂದಿದನು (೧೬೦೫) ವಾಚಕಮಹಾ ಶಯರು ಮಹಾತ್ಮಾ ಟಾಡ್ ಸಾಹೇಬರಿಂದ ಬರೆಯಲ್ಪಟ್ಟ ರಾಜಸ್ತಾನದ ಎರಡನೆಯ ಭಾಗದಲ್ಲಿ ಯ ಬುಂದಿಯ ಇತಿಹಾಸವನ್ನು ಅವಲೋಕಿಸಬೇಕು, ಓರ್ವ ಪೋರ್ತುಗೀಜ ಇತಿಹಾಸಕನೂ ಈ ಸಂಗತಿಯನ್ನು ಸಮರ್ಥಿಸಿದ್ದಾನೆ, Rajasthan, Vol. II, P. 392

  • ಋಷಭನಾಥ ( Rakabwath ) ವು ಉದಯಪುರದಿಂದ ದಕ್ಷಿಣಕ್ಕೆ ೪೫ ಮೈಲುಗಳ ಮೇಲಿದೆ. ಇಲ್ಲಿ ಆದಿನಾಥ ಅಥವಾ ಋಷಭನಾಥನ ಗುಡಿಯದೆ, Raj, Gazetteer Vol. III P. 55; ಟಾಡ್ ಸಾಹೇಬರು ಇದಕ್ಕೆ ರಿಕುಮನಾಥ ಎಂದು ಹೇಳಿದ್ದಾರೆ.