ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ದದ ಸಿದ್ದತೆ, ಆs ಮತ್ತು ಅವನ ರಾಜ್ಯದಲ್ಲಿ ಎಷ್ಟು ಮಾತ್ರವೂ ಕೈಹಾಕಲಾರೆವು. ” ಬಾದಶಹನು ತನ್ನ ಈ ಉದ್ದೇಶದಂತೆ, ಪ್ರತಿಯೊಬ್ಬ ಸೇನಾಪತಿಯ ಮುಂದೂ, ದೂತನ ಮುಂದೆಯೂ ಈ ಸಂಗತಿಯನ್ನು ಹೇಳಿ ಕಳುಹಿಸುತ್ತಿದ್ದನು. ಯಾವತ್ತು ಅರಸರು ಅಕಬರ ಬಾದಶಹನ ವಶೀಭೂತರಾಗಿದ್ದರು; ಆದರೆ ಸಣ್ಣ ದೇಶದ ಕುದ್ರನರಪತಿ ಯಾದ ಪ್ರತಾಪಸಿಂಹನು ಅಕಬರನನ್ನು ಹುಲ್ಲಿನಂತೆ ಎಣಿಸಿದ್ದನು; ಅಂದರೆ ಪ್ರತಾ ಪ ಬಾದಶಹನಿಗೆ ಯಾವ ತರದ ಮರ್ಯಾದೆಯನ್ನು ಕೊಡುತ್ತಿರಲಿಲ್ಲ; ಈ ಸಂಗ ತಿಯನ್ನು ಅಕಬರನು ಸಹಿಸದವನಾಗಿದ್ದನು. ಪ್ರತಾಪನ ಆ ಗರ್ವೊನ್ನತ ಪ್ರಕೃ ತಿಯು, ದಿಲೀಶ್ವರನ ಅಭಿಮಾನಕ್ಕೆ ಆಘಾತ ಮಾಡುತ್ತಲಿದ್ದಿತು. ಇದಕ್ಕಾಗಿಯೇ ಅಕಬರನು ಪ್ರತಾಪನ ದಮನಕ್ಕಾಗಿ ಇಷ್ಟು ಸಿದ್ಧತೆಯನ್ನು ನಡೆಸಿದ್ದನು; ಮತ್ತು ಯಾವದೇ ರೀತಿಯಿಂದ ಪ್ರತಾಪನ ಗರ್ವಖಂಡನೆಯನ್ನು ಮಾಡಲು ಕೃತಸಂಕ ಲ್ಬನಾಗಿದ್ದನು. ಬಾದಶಹನು ವಂಗದೇಶದಿಂದ ಪಂಜಾಸದ ವರೆಗಿರುವ ಪ್ರದೇಶ ದಲ್ಲಿ ಬೇಕಾದಲ್ಲಿ ಹೋಗಲಿ, ಅಲ್ಲಿ ಅವನ ವಿಜಯದುಂದುಭಿಯು ಬಾರಿಸುತ್ತ ಲಿತ್ತು. ಆದರೆ ಈ ಯಾವತ್ತು ಜಯೋಲ್ಲಾಸದಲ್ಲಿ ಪ್ರತಾಪನು ಅವನತನಾಗಲಿ ಲೈಂಬ ಸಂಗತಿಯ ಸ್ಮರಣೆಯಾಗಿ, ಬಾದಶಹನ ಮನಸು ಕಳವಳ ಹೊಂದುತ್ತಿತ್ತು. ರಜಪೂತಸ್ತಾನದ ರಾಜರಲ್ಲಿ ಬಹು ಜನರು-ಪ್ರತಾಪನನ್ನುಳಿದು ಯಾವ ತರು ಸದಾ ಬಾದಶಹನನ್ನು ಓಲೈಸಿರುತ್ತಿದ್ದರು. ಆದರೆ ಮಹಾರಾಣಾನೂ, ಶ್ರೇಷ್ಠ ವೀರನೂ ಆದ ಪ್ರತಾಪನು ಮಾತ್ರ, ಈ ಕಾರ್ಯವನ್ನು ಮಾಡಲಿಕ್ಕೆ ಎಷ್ಟು ಮಾತ್ರವೂ ಮನಸು ಮಾಡಲಿಲ್ಲ; ಇಷ್ಟೇ ಅಲ್ಲ; ಅವನು ಬಾದಶಹನನ್ನು ಸದಾ ಓಲೈಸುವದೊತ್ತಟ್ಟಿಗಿರಲಿ; ಒಮ್ಮೆ ಆಧೀನತ್ವವನ್ನೊಪ್ಪಿಕೊಂಡಿದ್ದರೆ ಸಾಕಾಗಿತ್ತು; ಆದರೆ ಪ್ರತಾಪನು ಈ ಶಾಬ್ಲಿಕ ಆಧೀನತ್ವಕ್ಕೂ ಒಪ್ಪಿಗೆಯನ್ನು ತೋರಿಸಲಿಲ್ಲ. ಪ್ರತಾಪನೇನು ದೊಡ್ಡ ಸಾಮ್ರಾಟನೇ? ಮೊದಲು ಚಿತೋಡದ ಅಧಿಪತಿಯಾಗಿ, ಬಹು ಸಾಮಂತ ರಾಜರ ಮೇಲೆ ಅಧಿಕಾರ ನಡೆಸಲು ಸಮರ್ಧನಾಗಿದ್ದರೂ, ಇಂದು ಆ ಶಕ್ತಿಯಿಲ್ಲ, ಸಾಮಂತರಲ್ಲಿ ಬಹು ಜನರು ಅಕಬರನನ್ನು ಕೂಡಿದ್ದಾರೆ. ಇಂದು ಪ್ರತಾಪನಿಗೆ ಆ ಚಿತೋಡದ ರಾಜತ್ವವಿಲ್ಲ; ಕೇವಲ ರಾಜನೆಂಬ ಉಪಾಧಿ ಯಿಂದ ಗುಡ್ಡಗಾಡು ಪ್ರದೇಶದಲ್ಲಿ ಅಲೆಯುತ್ತಿರುವನು. ಹೀಗಿದ್ದರೂ ಅವನು ಅಕಬರನಿಗೆ ವಶವಾಗದಿರುವದೇಕೆ? ಮೊಗಲ ಬಾದಶಹನ ಸಕಲ ಬಲ-ಕೌಶಲ್ಯ ಗಳು ಪ್ರತಾಪನ ವೀರತ್ವದ ಗರ್ವವನ್ನಡಗಿಸಲಾರವೇ? ಮೊಗಲ-ಸಾಮ್ರಾಜ್ಯವನ್ನು