ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ದದ ಸಿದ್ದತ, ೧ fy vy \ \ vv v | 1 -

\ \ \ \ \ / /VY VVY / ಮಾಡತಕ್ಕ ಮುಸಲ್ಮಾನರ ಯುದ್ದಕ್ಕೆ ಧರ್ಮಯುದ್ಧವೆಂದು ಅನ್ನುತ್ತಿದ್ದನು. ಇವನು ಮಾನಸಿಂಹನೊಡನೆ ಯುದ್ಧಕ್ಕೆ ಹೊರಡುವ ಮನಸ್ಸು ಮಾಡಿದನು. ಇವ ನಲ್ಲಿ ವೀರತ್ವವು ಎಷ್ಟು ಮಾತ್ರವೂ ಇರಲಿಲ್ಲ, ಅಕಬರನು ಯುದ್ಧದ ಯಾವತ್ತೂ ಸುದ್ದಿಯನ್ನು ಸಂಗ್ರಹಿಸುವದಕ್ಕಾಗಿ ಇವನನ್ನು ಕಳುಹಿಸಿದನು. ಇವನು ಅಸಸ ಖಾನನೊಡನೆ ಇರುತ್ತಿದ್ದನು; ಮತ್ತು ಲೆಕ್ಕಪತ್ರದಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದನು.* ಮಾನಸಿಂಹನು ಐದುಸಾವಿರ ಉತ್ತಮವಾದ ಸೈನಿಕರನ್ನು ಕರೆದುಕೊಂಡು, ಅಜಮೀರವನ್ನು ಬಿಟ್ಟು ಹೊರಟನು. ಹಾದಿಯಲ್ಲಿ ಇವನ ಸೈನಿಕರ ಸಂಖ್ಯೆಯು ಕ್ರಮವಾಗಿ ಬೆಳೆಯುತ್ತ ನಡೆಯಿತು. ಇವನು ನಸಿರಾಬಾದ ಮತ್ತು ಬಿಲ್ಲಬಾರಗಳ ಮಾರ್ಗವಾಗಿ ಮಂಡಲಗಡಕ್ಕೆ ಮುಟ್ಟಿದನು. ಈ ಸ್ಥಳದಲ್ಲಿರುವ ಮೊಗಲಸೈನಿಕ ರಲ್ಲಿಯ ಬಹುಜನರು, ಇವನ ಸಂಗಡ ಹೊರಡುವವರಾದರು. ಆದರೆ ಚಿತೋಡ ದಲ್ಲಿಯ ಸೈನ್ಯವನ್ನು ಕಡಿಮೆಮಾಡಲು ಮಾನಸಿಂಹನಿಗೆ ಸಾಹಸವಾಗಲಿಲ್ಲ. ಮಾನಸಿಂಹನು ಮೊಗಲ ಬಾದಶಹನ ಸೋಷ್ಯ ಪುತ್ರನಂತಿದ್ದು ಎಷ್ಟೇ ಶಕ್ತಿಶಾಲಿ ಯಾಗಿರಲೊಲ್ಲನೇಕೆ,• ಮಹಾರಾಣಾ ಪ್ರತಾಪಸಿಂಹನ ಬಳಿಯಲ್ಲಿ ಅವನು ಮೇವಾಡದ ಅಧೀನದಲ್ಲಿರುವ ಒಬ್ಬ ಸಾಮಾನ್ಯ ಜಮೀನದಾರನ ಮಗನೆಂದು ಪರಿಚಿತನಾಗಿದ್ದನು. - ಪ್ರತಾಪಸಿಂಹನು ಗುಡ್ಡಗಾಡುಪ್ರದೇಶವನ್ನು ಬಿಟ್ಟು, ಹೊರಗೆ ಬಂದು ಯುದ್ಧ ಮಾಡಬಹುದೆಂದು ಮೊಗಲರು ಭಾವಿಸಿದ್ದರು + ಆದರೆ + ಬದಾವುನಿಯು ಈ ಅಭಿಯೋಗದಲ್ಲಿ ಕೂಡಿ, ಪ್ರಖ್ಯಾತ ಯುದ ಈತ ವಾದ ಹಳದೀ ಘಟ್ಟದ ಯುದ್ಧದಲ್ಲಿ ಇದ್ದನು, ಮತ್ತು ಇವನು ತಾನೇ ಈ ಯುದ್ಧದ ವಿವರಣೆಯನ್ನು ಬರದಿ ಟ್ಟಿದ್ದಾನೆ ಅಬಲಫಜಲನ ವಿವರಣೆಯಾದರೂ ಚನ್ನಾಗಿದೆ ನಾವು ಈ ಮತ್ತು ಮುಂದಿನ ಅಧ್ಯಾಯಗಳನ್ನು ಇವರೀರ್ವರ ಗ್ರಂಥಗಳಿಂದ ಸಂಗ್ರಹಿಸಿದ್ದೇವೆ, Se also Noer's Akbar ( Translation ) I, 247, • ಅಕಬರನು ಮಾನಸಿಂಹನನ್ನು ಸನ್ಮಾನಿಸಿ, ಅವನಿಗೆ ಫರಜಾಂದ ( Farzand ಅಥವಾ ಮಗ ) ಎಂಬ ಬಿರುದನ್ನು ಕೊಟ್ಟಿದ್ದನ್ನು, See Blochmann, P 339. - ಅಂಬರವು ಶಿಶೂದಿಯಾವಂಶೀಯ ಮೇವಾಡದ ಮಹಾರಾಣಾರ ಆಧೀನದಲ್ಲಿರುವ ಒಂದು ಸಣ್ಣ ರಾಜ್ಯವು ಇಕ್ಷಲನಾಮಾ ( Elliot Vol VI P. 400 ) ದಲ್ಲಿಯೂ ಈ ಮರೆಗೆ ಹೇಳಿದ. A. N III 244 note. + A N III 244. ನದಿ