ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f ಮಹಾರಾಣಾ ಪ್ರತಾಪಸಿಂಹ ದ್ವಾದಶ ಪರಿಚ್ಛೇದ. akki ಹಳದೀ• ಘಟ್ಟದ ಯುದ್ದ. ಹಳದೀ ಘಟ್ಟದ ಯುದ್ದವ | ತುಲನೀಯವದು ಜಗತೀತಲದೊಳ೦ತದ೦೦ || ಹಳದೀ ಘಟ್ಟದ ಯುದ್ಧವು | ಹಳದೀ ಘಟ್ಟದ ತೆರದಲಿಯೆಂದುಂ ಪೇಳ್ವೆ೦ || ೧ || ಹದಿನೇಳನೂರಾ ಮೂವತ್ತೆರಡನೆಯ ಸಂವತದ ವರ್ಷಾರಂಭದಲ್ಲಿ,t ಮಾನ ಸಿಂಹನ ಪ್ರಬಲವಾದ ಸೈನ್ಯವ, ಹಳದೀಘಟ್ಟದ ಸಂಕೀರ್ಣವಾದ ಗಿರಿಪಧದ ಎದುರಿನಲ್ಲಿರುವ ಕಾಮನೂರ ಗ್ರಾಮಕ್ಕೆ ಬಂದಿತು. ಈಗಲೂ ಮಹಾರಾಣಾನು ಈ ಘಟ್ಟದಿಂದ ಹೊರಬಿದ್ದು, ಮಾನಸಿಂಹನನ್ನು ಎದುರಿಸಲಿಲ್ಲ. ಪ್ರತಾಪನು ಸಾಕಷ್ಟು ಸೈನ್ಯವನ್ನು ಕೂಡಿಸಿರುವನೆಂಬದನ್ನು ಮಾನಸಿಂಹನು ಕೇಳಿದ್ದನು. ಒಂದು ವೇಳೆ ಪ್ರತಾಪನು ಘಟ್ಟದಿಂದ ತೀವ್ರವೇ ಹೊರಬೀಳದಿದ್ದಲ್ಲಿ, ಮಾನ ಸಿಂಹನು ಕೆಲವು ದಿವಸಗಳವರೆಗೆ ಅವನ ಗತಿವಿಧಿಯನ್ನು ನಿರೀಕ್ಷಿಸುವದಕ್ಕಾಗಿ ತಡೆಯುತ್ತಿದ್ದನು. ಪ್ರತಾಪನ ಸೈನ್ಯವೆಷ್ಟು ? ಅದು ಯಾವತರದ್ದಿರುವದು ? ಅದು ಯಾವ ಯಾವ ಸ್ಥಳದಲ್ಲಿರುವದು ? ಈ ಮೊದಲಾದ ಸಂಗತಿಗಳನ್ನು ತಿಳಿದುಕೊ ಳ್ಳುವದು ಅವಶ್ಯವಾಗಿತ್ತು. ಮಾನಸಿಂಹನು ಇದಕ್ಕಾಗಿ ಕೆಲವು ಕಾಲಕಳೆಯುವ ಮನಸುಮಾಡಿದನು; ಆದರೆ ಈ ರೀತಿಯಿಂದ ಯುದ್ಧವನ್ನು ತಡೆದು, ಸುಮ್ಮನೆ ಕುಳಿತುಕೊಳ್ಳುವ ಪ್ರಸಂಗವು ಮಾನಸಿಂಹನಿಗೆ ಬರಲಿಲ್ಲ; ಯಾಕಂದರೆ ಪ್ರತಾಪನು ಮೊಗಲ ಸೈನ್ಯವನ್ನು ಪರ್ವತಪ್ರದೇಶದಲ್ಲಿ ಪ್ರವೇಶ ಮಾಡಗೊಡದೆ, ತತ್ತೂರ್ವದ ಲ್ಲಿಯೇ ಅದನ್ನು ನಾಶಮಾಡುವ ಮನಸು ಮಾಡಿದ್ದನು. ಕಾರಣ ತೀವ್ರವೇ ಅವನು ಸಸೈನ್ಯವಾಗಿ ಘಟ್ಟದಿಂದ ಹೊರಬಿದ್ದು, ಮೊಗಲರನ್ನು ಆಕ್ರಮಿಸಿದನು. ಎರಡೂ ಸೈನ್ಯಗಳು ಒಂದನ್ನೊಂದು ಎದುರಿಸಿದವು. ಮೊಗಲರ ಸೇನಾಪತಿ ಯಾದ ಮಾನಸಿಂಹನು ತನ್ನ ಸೈನ್ಯದ ಮುಂಭಾಗದಲ್ಲಿ ಜಗನ್ನಾಧನನ್ನೂ, ಗೈಸು

  1. ಹಳದೀಘಟ್ಟದ ಯುದ್ಧದ ತಾರೀಖಿನ ವಿಷಯವಾಗಿ ಐತಿಹಾಸಿಕರಲ್ಲಿ ಐಕ್ಯವಿಲ್ಲ, ಬೇರೆಬೇರೆ ಜನರು ಈ ವಿಷಯವಾಗಿ ಭಿನ್ನ ಅಭಿಪ್ರಾಯಗಳುಳ್ಳವರಾಗಿದ್ದಾರೆ, ಆದರೂ ಈ ಯುದ್ಧವು ಕ್ರಿ. ಶಕದ ೧೫೭೬ ನೇ ಇಸವಿಯ ಜೂನ ೨೦ ನೇ ತಾರೀಖಿನ ದಿವಸ ( ಆಷಾಢ ಮಾಸದ ಪ್ರಾರಂಭ) ಆಯಿತೆಂದು ಹೇಳಬಹುದು